ಸಿಡ್ನಿ ಸಿಕ್ಸರ್ಸ್‌ ಜಯಭೇರಿ

7

ಸಿಡ್ನಿ ಸಿಕ್ಸರ್ಸ್‌ ಜಯಭೇರಿ

Published:
Updated:

ಕೇಪ್‌ಟೌನ್ (ಪಿಟಿಐ): ಆಲ್‌ರೌಂಡ್ ಪ್ರದರ್ಶನ ನೀಡಿದ ಸಿಡ್ನಿ ಸಿಕ್ಸರ್ಸ್‌ ತಂಡ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಯಾರ್ಕ್‌ಶೈರ್ ವಿರುದ್ಧ ಎಂಟು ವಿಕೆಟ್‌ಗಳ ಸುಲಭ ಗೆಲುವು ಪಡೆಯಿತು.ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ಮಂಗಳವಾರ ಮೊದಲು ಬ್ಯಾಟ್ ಮಾಡಿದ ಯಾರ್ಕ್‌ಶೈರ್ ಎದುರಾಳಿ ತಂಡದ ಶಿಸ್ತಿನ ಬೌಲಿಂಗ್ ದಾಳಿಯ ಮುಂದೆ ಪರದಾಟ ನಡೆಸಿ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 96 ರನ್ ಪೇರಿಸಿತು.ಆಸ್ಟ್ರೇಲಿಯಾದ ಸಿಡ್ನಿ ಸಿಕ್ಸರ್ಸ್‌ಗೆ ಈ ಮೊತ್ತ ಸವಾಲಾಗಿ ಪರಿಣಮಿಸಲೇ ಇಲ್ಲ. ಕೇವಲ 8.5 ಓವರ್‌ಗಳಲ್ಲಿ 2 ವಿಕೆಟ್‌ಗೆ 98 ರನ್ ಗಳಿಸಿ ಜಯ ಸಾಧಿಸಿತು. ಮೈಕಲ್ ಲಂಬ್ (ಅಜೇಯ 43, 24 ಎಸೆತ, 8 ಬೌಂ) ಮತ್ತು ಬ್ರಾಡ್ ಹಡಿನ್ (41, 21 ಎಸೆತ, 8 ಬೌಂ) ತಂಡದ ಸುಲಭ ಜಯಕ್ಕೆ ಕಾರಣರಾದರು.ಸಂಕ್ಷಿಪ್ತ ಸ್ಕೋರ್: ಯಾರ್ಕ್‌ಶೈರ್: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 96 (ಫಿಲ್ ಜಾಕ್ 21, ಜೊ ರೂಟ್ 25, ಆ್ಯಡಮ್ ಲಿತ್ 18, ಮಿಷೆಲ್ ಸ್ಟಾರ್ಕ್ 22ಕ್ಕೆ 3, ಪ್ಯಾಟ್ ಕಮಿನ್ಸ್ 13ಕ್ಕೆ 2, ಶೇನ್ ವಾಟ್ಸನ್ 27ಕ್ಕೆ 2). ಸಿಡ್ನಿ ಸಿಕ್ಸರ್ಸ್‌: 8.5 ಓವರ್‌ಗಳಲ್ಲಿ 2 ವಿಕೆಟ್‌ಗೆ 98 (ಶೇನ್ ವಾಟ್ಸನ್ 11, ಮೈಕಲ್ ಲಂಬ್ ಔಟಾಗದೆ 43, ಬ್ರಾಡ್ ಹಡಿನ್ 41).  ಪಂದ್ಯಶ್ರೇಷ್ಠ: ಬ್ರಾಡ್ ಹಡಿನ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry