ಸಿತಾರ್ ಮಾಂತ್ರಿಕ ಶಮೀಮ್ ಇನ್ನಿಲ್ಲ

7

ಸಿತಾರ್ ಮಾಂತ್ರಿಕ ಶಮೀಮ್ ಇನ್ನಿಲ್ಲ

Published:
Updated:

ಮುಂಬೈ (ಪಿಟಿಐ): ಸಿತಾರ್ ಮಾಂತ್ರಿಕ ಉಸ್ತಾದ್ ಶಮೀಮ್ ಅಹ್ಮದ್ ಖಾನ್ (74) ತೀವ್ರ ಹೃದಯಾಘಾತದಿಂದ ಮಂಗಳವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

 

1938ರಲ್ಲಿ ಬರೋಡಾದಲ್ಲಿ ಆಗ್ರಾ ಘರಾಣೆಯ ಸಂಗೀತ ಕುಟುಂಬದಲ್ಲಿ ಜನಿಸಿದ ಖಾನ್, ಚಿಕ್ಕಂದಿನಿಂದಲೇ ಹಾಡುಗಾರಿಕೆಯಲ್ಲಿ ಆಸಕ್ತಿ ಹೊಂದಿದ್ದರು. ತಂದೆ ಉಸ್ತಾನ್ ಗುಲಾಂ ರಸೂಲ್ ಖಾನ್ ಮಗನ ಆಸಕ್ತಿಗೆ ನೀರೆರೆದರು.ಸಿತಾರ್ ಬಗೆಗಿನ ಮೋಹ ಪಂಡಿತ್ ರವಿಶಂಕರ್ ಅವರ ಶಿಷ್ಯರನ್ನಾಗಿ ಮಾಡಿತು. ಸುಪ್ರಸಿದ್ಧ ಸೆನಿಯಾ-ಮೈಯಾರ್ ಘರಾಣೆಯ ಮುಂಚೂಣಿ ಕಲಾವಿದರಲ್ಲಿ ಖಾನ್ ಒಬ್ಬರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry