ಸಿದ್ದಗಂಗಾ ಶ್ರೀ ಅಧಿಕಾರ ಹಸ್ತಾಂತರ

7

ಸಿದ್ದಗಂಗಾ ಶ್ರೀ ಅಧಿಕಾರ ಹಸ್ತಾಂತರ

Published:
Updated:
ಸಿದ್ದಗಂಗಾ ಶ್ರೀ ಅಧಿಕಾರ ಹಸ್ತಾಂತರ

ತುಮಕೂರು: ಏಳು ದಶಕಗಳಿಂದ ಸಿದ್ದಗಂಗಾ ಮಠದ ಹೊಣೆ ಹೊತ್ತಿದ್ದ  ಡಾ.ಶಿವಕುಮಾರ ಸ್ವಾಮೀಜಿ ತಮ್ಮ ಉತ್ತರಾಧಿಕಾರಿಯಾಗಿ ಸಿದ್ದಲಿಂಗ ಸ್ವಾಮೀಜಿ ಅವರಿಗೆ ನಾಗರ ಪಂಚಮಿ ಯಂದು ಗುರುವಾರ ಮಠದ ಆಡಳಿತ ಅಧಿಕಾರ ಹಸ್ತಾಂತರಿಸಿದರು.ಅಪಾರ ಭಕ್ತ ಸಾಮ್ರಾಜ್ಯ ಹೊಂದಿ ರುವ ನಾಡಿನ ಧಾರ್ಮಿಕ ಕ್ಷೇತ್ರ, ಮಠ ಪರಂಪರೆಯ ದಿಗ್ಗಜ ಎನಿಸಿಕೊಂಡಿ ರುವ ಸಿದ್ದಗಂಗಾ ಮಠದಲ್ಲಿ `ಅಧಿಕಾರ ಹಸ್ತಾಂತರ~ ಸರಳವಾಗಿ ನೆರವೇರಿತು.ಅಧಿಕಾರ ಹಸ್ತಾಂತರಕ್ಕೂ ಮುನ್ನ ತಮ್ಮ ಕಚೇರಿಯಲ್ಲಿ ಕಿರಿಯ ಸ್ವಾಮೀಜಿ ಹೆಸರಿಗೆ ಬರೆಸಿದ ಉಯಿಲನ್ನು ಸುತ್ತೂರು ಮಠದ ಶಿವರಾತ್ರಿ ದೇಶೀ ಕೇಂದ್ರ ಸ್ವಾಮೀಜಿ ಅವರಿಂದ ಓದಿಸಲಾಯಿತು. ಜತೆಗೆ ಶಿವಕುಮಾರ ಸ್ವಾಮೀಜಿ ಸಹ ಒಮ್ಮೆ ಓದಿದರು.ನಂತರ ಮಠದ ಆವರಣದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ನಾಡಿನ ವಿವಿಧ ಮಠಗಳ ಸ್ವಾಮೀಜಿಗಳು, ಭಕ್ತರ ಸಮ್ಮುಖದಲ್ಲಿ ಅಧಿಕಾರ ಹಸ್ತಾಂತರ ನಡೆಯಿತು.ಮಾಧ್ಯಮದಲ್ಲಿ ಮಠದ `ಅಧಿಕಾರ ಹಸ್ತಾಂತರ~ ಸುದ್ದಿ ಬಿತ್ತರಗೊಳ್ಳು ತ್ತಿದ್ದಂತೆ, ದಿಢೀರ್ ಬೆಳವಣಿಗೆ ಕೇಳಿ ಆಶ್ಚರ್ಯ ಚಕಿತರಾದ ಮಠದ ಭಕ್ತರು ಸಿದ್ದಗಂಗೆಗೆ ಬಂದು ಸ್ವಾಮೀಜಿಯವ ರಿಂದ ಆಶೀರ್ವಾದ ಪಡೆದರು. ಹೊಸ ವಿದ್ಯಮಾನದ ಬಗ್ಗೆ ತಮ್ಮಲ್ಲೇ ಚರ್ಚಿಸುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry