ಸೋಮವಾರ, ಮೇ 10, 2021
22 °C
ನೆಟ್ಟಕಲ್ಲಪ್ಪ ಸ್ಮಾರಕ ರಸ್ತೆ ಓಟ: ಅವಿನಾಶ್, ರಕ್ಷಿತಾಗೆ ಪ್ರಥಮ ಸ್ಥಾನ

ಸಿದ್ದಪ್ಪ, ತಿಪ್ಪವ್ವ ಸಣ್ಣಕ್ಕಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಧಾರವಾಡದ ಸಿದ್ದಪ್ಪ ಶಿವನೂರ ಹಾಗೂ ಮೈಸೂರಿನ ತಿಪ್ಪವ್ವ ಸಣ್ಣಕ್ಕಿ ಅವರು `ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್' ಪ್ರಾಯೋಜಿತ ಡೆಕ್ಕನ್ ಅಥ್ಲೆಟಿಕ್ ಕ್ಲಬ್ ಆಶ್ರಯದ  ಕೆ.ಎ. ನೆಟ್ಟಕಲ್ಲಪ್ಪ ಸ್ಮಾರಕ ರಸ್ತೆ ಓಟದ ಸ್ಪರ್ಧೆಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯ ವಿಭಾಗದಲ್ಲಿ ಚಾಂಪಿಯನ್ ಆದರು.

ಭಾನುವಾರ ಮುಂಜಾನೆ ಇಲ್ಲಿ ನಡೆದ ಸ್ಪರ್ಧೆಯಲ್ಲಿ ಸಿದ್ಧಪ್ಪ ಶಿವನೂರ 12 ಕಿ.ಮೀ. ದೂರವನ್ನು 38 ನಿಮಿಷ 19 ಸೆಕೆಂಡ್‌ಗಳಲ್ಲಿ ಕ್ರಮಿಸುವ ಮೂಲಕ ಅಗ್ರಸ್ಥಾನ ಪಡೆದರು.ದೂರ ಅಂತರದ ಓಟದಲ್ಲಿ ತಮ್ಮ ಪ್ರಾಬಲ್ಯ ಮುಂದುವರಿಸಿದ ತಿಪ್ಪವ್ವ ಸಣ್ಣಕ್ಕಿ ಆರು ಕಿ.ಮೀ ದೂರವನ್ನು 22 ನಿಮಿಷ 48 ಸೆಕೆಂಡ್‌ಗಳಲ್ಲಿ ಪೂರೈಸಿದರು. ಈ ಮೂಲಕ ಸತತ ಆರನೇ ವರ್ಷ ಪ್ರಶಸ್ತಿ ಮುಡಿಗೇರಿಸಿಕೊಂಡರು. ಬಾಲಕ ಹಾಗೂ ಬಾಲಕಿಯರಿಗೆ 2.5 ಕಿ.ಮೀ. ದೂರದ ಓಟದ ಸ್ಪರ್ಧೆ ನಡೆಯಿತು. ಬಾಲಕರ ವಿಭಾಗದಲ್ಲಿ ಕೋಲಾರದ ಸಿ.ಎನ್. ಅವಿನಾಶ್ 8 ನಿಮಿಷ 5 ಸೆಕೆಂಡುಗಳಲ್ಲಿ ಹಾಗೂ ಬಾಲಕಿಯರ ವಿಭಾಗದಲ್ಲಿ ಮಂಡ್ಯದ ಆರ್. ರಕ್ಷಿತಾ 10 ನಿಮಿಷ 5 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಪ್ರಶಸ್ತಿ ತಮ್ಮದಾಗಿಸಿಕೊಂಡರು.ಗ್ರಾಮೀಣ ಪ್ರತಿಭೆಗಳಿಗೆ ನೆರವು: `ಗ್ರಾಮೀಣ ಪ್ರತಿಭೆಗಳು ಬೆಳಕಿಗೆ ಬರಲು ಡೆಕ್ಕನ್ ಅಥ್ಲೆಟಿಕ್ ಕ್ಲಬ್ ಉತ್ತಮ ವೇದಿಕೆ ಕಲ್ಪಿಸಿದೆ. ಈ ಓಟದಲ್ಲಿ ಪಾಲ್ಗೊಳ್ಳುವುದೇ ಒಂದು ರೀತಿಯ ಗೌರವ. ನನ್ನ ಸಾಧನೆಗೆ ಈ ಓಟದ ಸ್ಪರ್ಧೆ ನೆರವಾಗಿದೆ' ಎಂದು ತಿಪ್ಪವ್ವ ಸಣ್ಣಕ್ಕಿ ಹೇಳಿದರು. `ಪ್ರಮುಖ ಕ್ರೀಡಾಕೂಟಗಳು ಜನವರಿಯೊಳಗೆ ಮುಗಿಯುತ್ತವೆ. ಆ ಬಳಿಕದ ಬಿಡುವಿನ ನಂತರ ಕೆ.ಎ.ನೆಟ್ಟಕಲ್ಲಪ್ಪ ಓಟದ ಸ್ಪರ್ಧೆ ನಡೆಯುವುದರಿಂದ ನಮ್ಮಲ್ಲಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂಬರುವ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಉತ್ತಮ ಅವಕಾಶ ಕಲ್ಪಿಸಿದೆ' ಎಂದು ಜೂನ್ 6ರಂದು ಅಹಮದಾಬಾದ್‌ನಲ್ಲಿ ನಡೆದ ಮ್ಯಾರಥಾನ್‌ನಲ್ಲಿ    (42 ಕಿ.ಮೀ ದೂರ) ಚಿನ್ನದ ಪದಕ ಪಡೆದಿರುವ ಸಿದ್ದಪ್ಪ ಶಿವನೂರ `ಪ್ರಜಾವಾಣಿ'ಗೆ ತಿಳಿಸಿದರು.ಚಾಲನೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ.ಬಾಲಕೃಷ್ಣ ಓಟಕ್ಕೆ ಚಾಲನೆ ನೀಡಿದರು. ಡೆಕ್ಕನ್ ಅಥ್ಲೆಟಿಕ್ ಕ್ಲಬ್‌ನ ಸಂಘಟನಾ ಕಾರ್ಯದರ್ಶಿ ಅನಂತರಾಜು, ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಸಂಸ್ಥೆ ಕಾರ್ಯದರ್ಶಿ ಸದಾನಂದ ನಾಯ್ಕ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ತರಬೇತುದಾರ ಪ್ರಕಾಶ ರೇವಣಕರ ಹಾಜರಿದ್ದರು.ಫಲಿತಾಂಶದ ವಿವರ: ಪುರುಷರ ವಿಭಾಗ: ಸಿದ್ಧಪ್ಪ ಶಿವನೂರ (ಧಾರವಾಡ. ಕಾಲ 38 ನಿಮಿಷ 19 ಸೆ.)-1, ಕೃಷ್ಣಪ್ಪ ಸಂತಿ-(ಎಸ್‌ಎಐ, ಧಾರವಾಡ)-2. ಕನಕಪ್ಪ ಡೋಣಿ (ಗದಗ)-3, ಬಸವರಾಜ ಎಂ.ಟಿ (ಹುಬ್ಬಳ್ಳಿ)-4, ಅಪ್ಪಾಸಾಹೇಬ್ ಕಡಪಟ್ಟಿ (ಬಾಗಲಕೋಟೆ)-5, ಲಿಂಗರಾಜ್ ಹಳಿಯಾಳ (ಧಾರವಾಡ)-6, ರಾಜಾ (ಬೆಂಗಳೂರು)-7, ನಾಗರಾಜ ಹೆಗಡೆ ( ಶಿವಮೊಗ್ಗ)-8, ಮಂಜಪ್ಪ ಪುರದ (ಗದಗ)-9, ತಿರುಪತಿ ಧನವಾಡೆ (ಧಾರವಾಡ)-10.ಮಹಿಳೆಯರ ವಿಭಾಗ: ತಿಪ್ಪವ್ವ ಸಣ್ಣಕ್ಕಿ (ಮೈಸೂರು, ಕಾಲ: 22 ನಿ. 48ಸೆ)-1, ಶ್ರದ್ಧಾರಾಣಿ ದೇಸಾಯಿ (ಡಿವೈಎಸ್‌ಎಸ್, ಮೈಸೂರು)-2, ಕೆ. ಯಶಸ್ವಿನಿ (ಡಿವೈಎಸ್‌ಎಸ್, ಮೈಸೂರು)-3, ಎಚ್.ಎನ್. ಸ್ವಾತಿ (ಐಜಿಜಿಎಫ್‌ಜಿಡಬ್ಲೂಸಿ, ಸಾಗರ)-4, ಅಪೇಕ್ಷಾ ನಾಯ್ಕ (ಜೆಎಸ್‌ಎಸ್, ಧಾರವಾಡ)-5, ಎಂ. ವಿದ್ಯಾಶ್ರೀ (ಕೆಸಿಡಿ,  ಧಾರವಾಡ)-6, ಪೂಜಾ ನಾಯ್ಕ (ಕಾರವಾರ)-7.ಬಾಲಕರ ವಿಭಾಗ: ಸಿ.ಎನ್.ಅವಿನಾಶ್ (ಕೋಲಾರ, ಕಾಲ: 8 ನಿ. 5 ಸೆ)-1, ವೀರೇಶ ರೋಣದ (ಗದಗ)-2, ಎಸ್.ಸುಜಿತ್ ಕುಮಾರ (ಕೋಲಾರ)-3, ಪರಶುರಾಮ ನಾಯ್ಕ (ಕಾರವಾರ)-4, ನಾಗರಾಜ ಆಡಿನ ( ಹಾವೇರಿ)-5, ಅಕ್ಷಯ ವೈದ್ಯ (ಹುಬ್ಬಳ್ಳಿ)-6, ಸಂತೋಷ ಮಾದರ (ಹಾವೇರಿ )-7, ಲೋಹಿತ್ ಪಟಗಾರ (ಕುಮಟಾ)-8, ಗಿರೀಶ ಮಾಲೀಪಾಟೀಲ (ಗದಗ)-9, ರಾಹುಲ್ ನಾಗೇಕರ (ಕಾರವಾರ)-10.ಬಾಲಕಿಯರ ವಿಭಾಗ: ಆರ್. ರಕ್ಷಿತಾ (ಮಂಡ್ಯ, ಕಾಲ: 10ನಿ, 5ಸೆ)-1, ವಿಭಾ ಸಾವಂತ (ಕಾರವಾರ)-2, ಸುನಿತಾ ಕಾಮತ್ (ಕಾರವಾರ)-3, ಮೇಘಾ ಪರಸೋಜಿ (ಕಾರವಾರ)-4, ರೇಶ್ಮಾ ಮಾಳಸೇಕರ (ಕಾರವಾರ)-5, ದಿವ್ಯಾ ಬೋವಿವಡ್ಡರ (ಕಾರವಾರ)-6, ಚಂದ್ರಿಕಾ ಮೊಗೇರ (ಕಾರವಾರ)-7, ಶಮ್ರೀನ್ ಅಣ್ಣಿಗೇರಿ (ಗದಗ)-8, ಯಾಸ್ಮೀನ್ ಶೇಖ್ (ಕಾರವಾರ)-9, ಸೋನಿ ಪಾಟೀಲ (ಕಾರವಾರ)-10.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.