ಶನಿವಾರ, ಮೇ 28, 2022
28 °C

ಸಿದ್ದಯ್ಯನಗುಡ್ಡದ ಸಿದ್ಧೇಶ್ವರ ಸ್ವಾಮಿಗೆ ವಿಶೇಷ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಡ್ಲಿಗಿ: ಪಟ್ಟಣದ ಹೊರವಲಯದ ಸಿದ್ದಯ್ಯನಗುಡ್ಡದ ಸಿದ್ಧೇಶ್ವರ ಸ್ವಾಮಿಗೆ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆಯನ್ನು ಏರ್ಪಡಿಸಲಾಗಿತ್ತು.

ಗುರುವಾರ ಬೆಳಗಿನವರೆಗೆ ಭಕ್ತರಿಂದ ಜಾಗರಣೆ, ಭಜನಾ ಕಾರ್ಯಕ್ರಮ, ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿಯನ್ನು ನಡೆಸಲಾಯಿತು. ಗುರುವಾರ ಬೆಳಿಗ್ಗೆ ಸಿದ್ಧೇಶ್ವರ ಸ್ವಾಮಿಯ ಪಟ ಹರಾಜು ಮಾಡಲಾಯಿತು. ಪಟ್ಟಣದ ರಾಮನಗರದ ಸಿದ್ಧೇಶ್ವರ ಸೇವಾ ಸಮಿತಿ, ಯುವ ನಾಯಕರ ಸಂಘಗಳು ಕಾರ್ಯಕ್ರಮಗಳನ್ನು ಏರ್ಪಡಿಸಿದ್ದವು. ಗುರುವಾರ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.