ಗುರುವಾರ , ನವೆಂಬರ್ 21, 2019
27 °C

ಸಿದ್ದರಾಮಯ್ಯ ಸಿಎಂ ಆಗಲು ಬೆಂಬಲ: ಸುಣಗಾರ

Published:
Updated:

ಸಿಂದಗಿ: ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತಗೊಳಿಸುವ ಮೂಲಕ ಅಧಿ ಕಾರ ಚುಕ್ಕಾಣಿ ಹಿಡಿಯುವುದು ಖಚಿತ. ಜೊತೆಗೆ ಮುಂದಿನ ಮುಖ್ಯಮಂತ್ರಿ ಯಾಗಲು ಹಾಲುಮತ ಸಮಾಜದ ಸಿದ್ದರಾಮಯ್ಯ ಅವರಿಗೆ ವ್ಯಾಪಕ ಬೆಂಬಲ ದೊರಯುತ್ತಿದ್ದು, ತಾವು ಕೂಡ ಅವರು ಮುಖ್ಯಮಂತ್ರಿಯಾಗು ವಂತೆ ಬೆಂಬಲ ನೀಡುವುದಾಗಿ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಸುಣಗಾರ ಸ್ಪಷ್ಟಪಡಿಸಿದರು.ಬುಧವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ರಾಜ್ಯದ ಎಲ್ಲ ಹಾಲುಮತ ಸಮುದಾಯದವರು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗ ಲೆಂದು ಕಾಂಗ್ರೆಸ್‌ಗೆ ವ್ಯಾಪಕ ಬೆಂಬಲ ನೀಡುತ್ತಿದ್ದಾರೆ. ಅಲ್ಲದೇ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗಲೆಂದು ಪರಿ ಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದವರು ಕಾಂಗ್ರೆಸ್‌ನ್ನು ಬೆಂಬಲಿಸುತ್ತಿ ದ್ದಾರೆ ಎಂದು ಹೇಳಿದರು. ಇವರಿಬ್ಬರಲ್ಲಿ ತಾವು ಯಾರನ್ನು ಬೆಂಬಲಿಸುತ್ತೀರಿ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಸಿದ್ದರಾಮಯ್ಯ ಅವರನ್ನು ಎಂದು ಪ್ರತಿಕ್ರಿಯಿಸಿದರು.ಕಾಂಗ್ರೆಸ್ ಅಲೆ:  ರಾಜ್ಯದಲ್ಲಿ ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಬೇಸತ್ತು ಮತದಾರ ಪ್ರಭುಗಳು ಕಾಂಗ್ರೆಸ್‌ನತ್ತ ಒಲವು ತೋರುತ್ತಿದ್ದಾರೆ. ಕಾಂಗ್ರೆಸ್‌ನಿಂದ ಮಾತ್ರ ಸುಭದ್ರ ಸರ್ಕಾರ ಸಾಧ್ಯ  ಎಂದರು.ಗೆಲುವು ನಿಶ್ಚಿತ: ಪ್ರಸ್ತುತ ಚುನಾವಣೆ ಯಲ್ಲಿ ತಾವು 15-20 ಸಾವಿರ ಅಂತರಗಳಿದ ಗೆಲುವು ಸಾಧಿಸುವುದಾಗಿ ಸುಣಗಾರ ಭವಿಷ್ಯ ನುಡಿದರು.ಸೇರ್ಪಡೆ: ಇದೇ ಸಂದರ್ಭದಲ್ಲಿ ಎಪಿಎಂಸಿ ನಿರ್ದೇಶಕ, ಬಿಜೆಪಿ ಮುಖಂಡ ಭಗವಂತ್ರಾಯ ಹಳ್ಳೆಪ್ಪಗೋಳ, ಸ್ತ್ರೀ ಶಕ್ತಿ ಗುಂಪಿನ ನಾಯಕಿ, ಬಿಜೆಪಿ ಧುರೀಣೆ ಉರ್ಮಿಳಾ ಮಠಪತಿ ಹಾಗೂ ಪದಾಧಿಕಾರಿಗಳು, ಬಿಜೆಪಿ ಮುಖಂಡ ಶಶಿ ಹಾವಳಗಿ ಅವರನ್ನು ಶರಣಪ್ಪ ಸುಣಗಾರ ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸಿಕೊಂಡರು.ಪತ್ರಿಕಾಗೋಷ್ಠಿಯಲ್ಲಿ ಚಂದ್ರಶೇಖರ ನಾಗೂರ, ಶರಣಪ್ಪ ವಾರದ, ಎಂ.ಎಂ.ನಾಯ್ಕೋಡಿ, ಎಂ.ಎ.ಖತೀಬ, ಅಮೀರ ಇಂಡಿ, ಮಲ್ಲು ಗತ್ತರಗಿ, ಸುರೇಶ ಹಳ್ಳೂರ, ಮುನ್ನಾ ಬೈರಾಮಡಗಿ, ರಾಜೂ ಕೂಚಬಾಳ, ಪ್ರಕಾಶ ರೇಷ್ಮಿ  ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)