ಮಂಗಳವಾರ, ಮೇ 11, 2021
28 °C

ಸಿದ್ದಾಪುರ: ಸುರಿದ ಕೆಂಪು ಮಳೆ-ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ದಾಪುರ: ಸಿದ್ದಾಪುರ ಸುತ್ತ ಮುತ್ತಲಿನ ಗ್ರಾಮೀಣ ಭಾಗಗಳಲ್ಲಿ ಗುರುವಾರ ಭಾರಿ ಮಳೆ ಹಾಗೂ ಗಾಳಿಗೆ ಮರಗಳು ಉರುಳಿ ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.ಕಬ್ಬಿನಾಲೆ, ಹಂಜ ಭಾಗಗಳಲ್ಲಿ ಕೆಂಪು ಬಣ್ಣದ ಮಿಶ್ರಿತ ಮಳೆ ಸುರಿದಿದೆ.  ಕಬ್ಬಿನಾಲೆಯಲ್ಲಿ  ಬುಧವಾರ ಕೆಂಪು ಬಣ್ಣದ ಮಳೆ ಸುರಿಯಿತು ಎಂದು ಗ್ರಾಮಸ್ಥರು `ಪ್ರಜಾವಾಣಿ'ಗೆ ತಿಳಿಸಿದ್ದಾರೆಹಳ್ಳಿಹೊಳೆ ಜಡ್ಕ್‌ಲ್ ಸಂಪರ್ಕದ ರಸ್ತೆಯಲ್ಲಿ ಮರಗಳು ಉರುಳಿದ್ದು ಅರಣ್ಯ ಇಲಾಖೆ ಮತ್ತು ಗ್ರಾಮಸ್ಥರ ನೆರವಿನಿಂದ ತೆರವು ಕಾರ್ಯ ನಡೆದಿದೆ. 

ಹಾಲಾಡಿ, ಅಮಾಸೆಬೈಲು, ಗೋಳಿಯಂಗಡಿ, ಅಲ್ಬಾಡಿ ಭಾಗಗಳಲ್ಲಿ ಮರಗಳು  ಗಾಳಿ ಮಳೆಗೆ ತುಂಡಾಗಿ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು, ತಂತಿಗಳು ತುಂಡಾಗಿವೆ.ಎರಡು ದಿನಗಳಿಂದ  ಸುರಿದ ಧಾರಾಕಾರ ಮಳೆಗೆ  ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಕೆಲವೆಡೆ ಅಡಿಕೆ ಹಾಗೂ ತೆಂಗು ಹಾಗೂ ಬಾಳೆ ಮರಗಳು ನಾಶವಾಗಿವೆ.ಸಿದ್ದಾಪುರ ಸಮೀಪದ ಹೊಸಂಗಡಿ, ಮತ್ತು ಹಾಲಾಡಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಹಲವು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಹೊಸಂಗಡಿ ವಿದ್ಯುತ್ ಪ್ರಸರಣಾ ವಿಭಾಗದ ಹಳ್ಳಿಹೊಳೆ, ಮುಧೂರು, ಜಡ್ಕಲ್, ಕಮಲಶಿಲೆ ಭಾಗದಲ್ಲಿ ವಿದ್ಯುತ್ ಸ್ಥಗಿತಗೊಂಡಿದೆ. ವಿದ್ಯುತ್ ಕಡಿತದಿಂದ ಗ್ರಾಮೀಣ ಭಾಗದ ದೂರವಾಣಿ ಸಂಪರ್ಕ ಕಡಿತಗೊಂಡಿದೆ. ಆಗುಂಬೆಯಲ್ಲಿ ಬಿಎಸ್‌ಎನ್‌ಎಲ್ ಟವರ್ ಸಂಪರ್ಕ ಕಡಿತಗೊಂಡಿದ್ದು,  ಇದರಿಂದ ಸೊಮೇಶ್ವರ, ಕಾಸನಮಕ್ಕಿ, ಮಡಾಮಕ್ಕಿ, ಸೀತಾನದಿ ಪರಿಸರದ ನೂರಾರು ಬಿಎಸ್‌ಎನ್‌ಎಲ್ ಸ್ಥಿರ ಮತ್ತು ಸಂಚಾರಿ ಗ್ರಾಹಕರು ಪರದಾಡುವಂತಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.