ಸಿದ್ಧಗಂಗೆಯಲ್ಲಿ ಕೋಟಿಲಿಂಗೇಶ್ವರ: 20ರಂದು ಅಡಿಗಲ್ಲು

7

ಸಿದ್ಧಗಂಗೆಯಲ್ಲಿ ಕೋಟಿಲಿಂಗೇಶ್ವರ: 20ರಂದು ಅಡಿಗಲ್ಲು

Published:
Updated:

ಬೆಂಗಳೂರು: ತುಮಕೂರಿನ ಸಿದ್ಧಗಂಗಾ ಕ್ಷೇತ್ರದಲ್ಲಿ  ಬೃಹತ್ ಕೋಟಿಲಿಂಗೇಶ್ವರ ಪ್ರತಿಷ್ಠಾಪನೆಗೆ ಇದೇ 20ರಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಶಂಕುಸ್ಥಾಪನೆ ನೆರವೇರಿಸುವರು.`111 ಅಡಿ ಅಗಲ ಮತ್ತು 121 ಅಡಿ ಎತ್ತರದ ಶಿವ ಲಿಂಗವನ್ನು ನಿರ್ಮಿಸಲಾಗುತ್ತಿದೆ. ಈ ಬೃಹತ್ ಲಿಂಗದಲ್ಲಿ ಒಂದು ಕೋಟಿ ಸಣ್ಣ ಗಾತ್ರದ ಶಿವಲಿಂಗಗಳನ್ನು ಅಳವಡಿಸಲಾಗುತ್ತದೆ. ಆ ಮೂಲಕ ಇದು ವಿಶ್ವದ ಪ್ರಥಮ ಕೋಟಿಲಿಂಗೇಶ್ವರ ಮೂರ್ತಿ ಆಗಲಿದೆ~ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರೂ ಆದ ಕೋಟಿಲಿಂಗೇಶ್ವರ ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ವಿವರಿಸಿದರು.`ಲಿಂಗದ ಶಿಖರ ಭಾಗದಲ್ಲಿ ಶಿವನ ಐದು ಮುಖಗಳ ಶಿಲ್ಪವನ್ನು ರೂಪಿಸಲಾಗುತ್ತದೆ. ಈ ರೀತಿಯ ಶಿಲ್ಪ ನೇಪಾಳದ ಪಶುಪತಿನಾಥ ಕ್ಷೇತ್ರದಲ್ಲಿದೆ. ಅದು ಇನ್ನು ಮುಂದೆ ಸಿದ್ಧಗಂಗೆಯಲ್ಲೇ ದರ್ಶನವಾಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಯೋಜನೆಗೆ ಸುಮಾರು 12 ಕೋಟಿ ರೂಪಾಯಿ ವೆಚ್ಚ ತಗಲುವ ಸಾಧ್ಯತೆ ಇದ್ದು, ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲಾಗುವುದು~ ಎಂದರು.`ಶಿವರಾತ್ರಿಯ ದಿನ ಮುಖ್ಯಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದು, ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡೇ ಈ ಬೃಹತ್ ಲಿಂಗದ ನಿರ್ಮಾಣ ಮಾಡಲಾಗುತ್ತಿದೆ. ಇದನ್ನು ಸಿಮೆಂಟ್‌ನಿಂದಲೇ ನಿರ್ಮಿಸಲಾಗುವುದು~ ಎಂದು ನಿರ್ಮಾಣದ ಉಸ್ತುವಾರಿ ಹೊತ್ತಿರುವ ಗುಣಮಟ್ಟ ಕಾರ್ಯಪಡೆ ಅಧ್ಯಕ್ಷ ಡಾ.ವಿಶ್ವನಾಥ್ ತಿಳಿಸಿದರು.`ಲಿಂಗದ ಸಮಿತಿಯ ಖಜಾಂಚಿಯೂ ಆದ ಶಾಸಕ ಅರವಿಂದ ಲಿಂಬಾವಳಿ, ಸಂಚಾಲಕ ಡಾ.ಬಿ.ಟಿ.ರುದ್ರೇಶ್ ಸೇರಿದಂತೆ ಇತರರು ಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry