ಸಿದ್ಧರಾಮೇಶ್ವರ ಅನುಭವ ಮಂಟಪ ಉದ್ಘಾಟನೆ

7

ಸಿದ್ಧರಾಮೇಶ್ವರ ಅನುಭವ ಮಂಟಪ ಉದ್ಘಾಟನೆ

Published:
Updated:

ಬೀದರ್: ಸಿದ್ಧರಾಮೇಶ್ವರ ಅನುಭವ ಮಂಟಪದ ಉದ್ಘಾಟನಾ ಸಮಾರಂಭ ನಗರದ ಹೊರವಲಯದ ನೌಬಾದ್‌ನ ಯಲ್ಲಾಲಿಂಗೇಶ್ವರ ಪುಣ್ಯಾಶ್ರಮದಲ್ಲಿ ಗುರುವಾರ ನಡೆಯಿತು.ಮುಗಳಖೋಡ ಹಾಗೂ ಜಿಡಗಾ ಮಠದ ಪೀಠಾಧ್ಯಕ್ಷ ಮುರುಘರಾಜೇಂದ್ರ ಸ್ವಾಮೀಜಿ ಉದ್ಘಾಟನೆ ನೆರವೇರಿಸಿದರು. ಬಸವತತ್ವ ಪ್ರಚಾರಕ್ಕಾಗಿ ಪಾದಯಾತ್ರೆ ಕೈಗೊಂಡು ವಾಪಸ್ಸಾದ ಹುಲಸೂರಿನ ಶಿವಾನಂದ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು.ಕಲಾವಿದ ಸಂಗಮೇಶ ಜಿಡಗಾ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಗುಲ್ಬರ್ಗ-ಬೀದರ್ ಹಾಲು ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನ ಬಿರಾದಾರ, ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಶಂಕರೆಪ್ಪ ಪಾಟೀಲ್ ಅತಿವಾಳ್, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುರಳಿಧರರಾವ ಎಕಲಾರಕರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮೃತರಾವ ಚಿಮಕೋಡೆ, ಪ್ರಮುಖರಾದ ಕಾಶಿನಾಥ ಬೆಲ್ದಾಳೆ ಮತ್ತಿತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry