ಸಿದ್ಧಲಿಂಗ ಸ್ವಾಮೀಜಿ ಪುಣ್ಯಸ್ಮರಣೆ ಇಂದು

ಮಂಗಳವಾರ, ಜೂಲೈ 16, 2019
24 °C

ಸಿದ್ಧಲಿಂಗ ಸ್ವಾಮೀಜಿ ಪುಣ್ಯಸ್ಮರಣೆ ಇಂದು

Published:
Updated:

ಕುರುಗೋಡು: ಎಮ್ಮಿಗನೂರು ಗ್ರಾಮದ ಹಂಪಿ ಸಾವಿರ ದೇವರು ಗುರು ಮಹಾಂತರ ಮಠದಲ್ಲಿ ಲಿಂ. ಗುರು ಸಿದ್ಧಲಿಂಗ ಮಹಾಂತ ದೇಶೀಕೇಂದ್ರ ಶಿವಾಚಾರ್ಯ ರಾಜಗುರುಗಳ 12ನೇವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಜು. 20 ರಂದು ಬೆಳಿಗ್ಗೆ 10 ಗಂಟೆಯಿಂದ ಮೂಲವ್ಯಾಧಿ ಸಂಬಂಧಿತ ಕಾಯಿಲೆಗಳಿಗೆ ಕ್ಷಾರಸೂತ್ರ ಚಿಕಿತ್ಸಾ ಶಿಬಿರ ಮಠದಲ್ಲಿ  ಹಮ್ಮಿಕೊಳ್ಳಲಾಗಿದೆ.ಮಹಾಂತ ಮಠ ಮತ್ತು ಜಿಲ್ಲಾ ಆಯುಷ್ ಇಲಾಖೆ ಆಶ್ರಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಡೂರಿನ ಪ್ರಭುಮಹಾಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.ಬಳ್ಳಾರಿಯ ಕಲ್ಯಾಣ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಕುರುಗೋಡಿನ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿ ಮತ್ತು ಸಿಂಧನೂರಿನ ಸೋಮನಾಥ ಶಿವಾಚಾರ್ಯ ನೇತೃತ್ವ ವಹಿಸುವರು.ವಾರ್ತಾಸಚಿವ ಸಂತೋಷ್ ಲಾಡ್, ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ,  ಶಾಸಕರಾದ ಎಂ.ಪಿ.ರವೀಂದ್ರ, ಆನಂದಸಿಂಗ್ ಮತ್ತು ಬಿ.ಎಂ.ನಾಗರಾಜ, ಮಾಜಿ ಶಾಸಕ ನಾರಾ ಸೂರ್ಯನಾರಾಯಣರೆಡ್ಡಿ, ವಕೀಲ ಗುಜ್ಜಲ ನಾಗರಾಜ, ಜಿ.ಎಂ.ಮಹಾಲಿಂಗಯ್ಯ, ಡಾ.ವೀರನಗೌಡ ಪಾಟೀಲ ಭಾಗವಹಿಸಿದ್ದಾರೆ ಎಂದು ಮಠದ ವಾಮದೇವ ಸ್ವಾಮೀಜಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry