ಬುಧವಾರ, ಜೂನ್ 16, 2021
23 °C

ಸಿದ್ಧಿ ವಿನಾಯಕ ದೇವಸ್ಥಾನ:ಗರುಡ ಕಂಬ ಸ್ಥಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪ: ತಾಲ್ಲೂಕಿನ ಗಡಿಗ್ರಾಮ ಕಮ್ಮರಡಿಯ ಪ್ರಸಿದ್ದ ಸಿದ್ಧಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ 27 ಅಡಿ ಎತ್ತರದ ಶಿಲಾ ನಿರ್ಮಿತ ಸುಂದರ ಗರುಡ ಕಂಬವನ್ನು ಸೋಮವಾರ ಮುಂಜಾನೆ ಸಕಲ ಪೂಜಾ ವಿಧಿ ವಿಧಾನಗಳೊಂದಿಗೆ ಸ್ಥಾಪಿಸಲಾಯಿತು.ಕಾರ್ಕಳದ ಪ್ರಸಿದ್ಧ ಶಿಲ್ಪಿಗಳು ಕಳೆದೆರಡು ತಿಂಗಳಿನಿಂದ ಸತತ ಶ್ರಮವಹಿಸಿ ಸುಂದರ ಕೆತ್ತನೆಯೊಂದಿಗೆ ನಿರ್ಮಿಸಿದ ಗರುಡ ಕಂಬವನ್ನು ಸ್ಥಾಪಿಸಲು ಶಿವಮೊಗ್ಗದಿಂದ ತರಿಸಿದ್ದ ಎರಡು ಕ್ರೇನ್‌ಗಳ ಸಹಾಯ ಬಳಸಲಾಯಿತು.ದೇಗುಲಕ್ಕೆ ಬರುವ ಭಕ್ತರ ಮಾನ ಕಷಾಯ ಹೋಗಲಾಡಿಸಿ, ದೇವರೆ ದುರು ನಾವೆಲ್ಲ ಸಣ್ಣವರು, ಸಮಾನ ರೆಂಬ ಸಂದೇಶ ಸಾರುವ ಸಲುವಾಗಿ ದೇಗುಲಗಳ ಮುಂದೆ ಗರುಡಕಂಬ ಗಳನ್ನು ಸ್ಥಾಪಿಸುವ ಪರಂಪರೆ ಹಿಂದಿ ನಿಂದಲೂ ಬೆಳೆದುಬಂದಿದೆ. ಪ್ರಾಚೀನ ಕಾಲದಲ್ಲಿ ಆನೆಗಳ ಸಹಾಯದಿಂದ, ರಾಟೆಗಳನ್ನು ಬಳಸಿ ಗರುಡಗಂಬಗಳನ್ನು ಸ್ಥಾಪಿಸಲಾಗುತ್ತಿತ್ತು.ಸೋಮವಾರ ಮುಂಜಾನೆ 5.05ರ ಮುಹೂರ್ತದಲ್ಲಿ ನಿಗದಿಯಾಗಿದ್ದ ಗರುಡಕಂಬ ಸ್ಥಾಪನೆಯ ಅಪೂರ್ವ ಕ್ಷಣವನ್ನು ಕಣ್ತುಂಬಿಕೊಳ್ಳಲು ಮಕ್ಕಳು, ಮಹಿಳೆಯರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಹಾಜರಿದ್ದರು.

ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚಿದಂಬರ ಜೋಯಿಸ್ ಮತ್ತು ಸದಸ್ಯರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನೆರವೇರಿದವು. ಮುಂದಿನ ತಿಂಗಳು ದೇವರ ರಥೋತ್ಸವ ನಡೆಯಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.