ಸಿದ್ಧೇಶ್ವರ ಬ್ಯಾಂಕ್; ಶಾಸಕ ಅಪ್ಪುಗೆ ಹಿನ್ನಡೆ

7

ಸಿದ್ಧೇಶ್ವರ ಬ್ಯಾಂಕ್; ಶಾಸಕ ಅಪ್ಪುಗೆ ಹಿನ್ನಡೆ

Published:
Updated:

ವಿಜಾಪುರ: ಇಲ್ಲಿಯ ಸಿದ್ಧೇಶ್ವರ ಸಹಕಾರಿ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಆರ್. ಎಂ. ಪಾಟೀಲ (ಉಪ್ಪಲದಿನ್ನಿ) ಹಾಗೂ ಉಪಾಧ್ಯಕ್ಷರಾಗಿ ಗುರುಪಾದಯ್ಯ ಎಸ್. ಗಚ್ಚಿನಮಠ ಅವಿರೋಧವಾಗಿ ಆಯ್ಕೆಯಾದರು.ಬ್ಯಾಂಕಿನ ಹಾಲಿ ಅಧ್ಯಕ್ಷರಾಗಿರುವ ಶಾಸಕ ಅಪ್ಪು ಪಟ್ಟಣಶೆಟ್ಟಿ ಅವರಿಗೆ ಈ ಚುನಾವಣೆಯಲ್ಲಿ ತೀವ್ರ ಹಿನ್ನಡೆ ಯಾಗಿದ್ದು, ಭಾನುವಾರ ನಡೆದ ಚುನಾವಣಾ ಸಭೆಗೂ ಅವರು ಹಾಜರಾಗಿರಲಿಲ್ಲ.ನಿರ್ದೇಶಕ ವಿ.ಡಿ. ಇಜೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಆರ್.ಎಂ. ಪಾಟೀಲ ಉಪ್ಪಲದಿನ್ನಿ, ಗುರುಪಾದಯ್ಯ ಎಸ್. ಗಚ್ಚಿನಮಠ ಅವರನ್ನು ಇದೇ ಅಕ್ಟೋಬರ್ 1ರಿಂದ 31.3.2015ರ ವರೆಗಿನ ಎರಡೂವರೆ ವರ್ಷದ ಅವಧಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಬ್ಯಾಂಕ್ ನಿರ್ದೇಶಕರಾದ ಡಾ.ವಿ. ಎನ್. ಪಾಟೀಲ (ಮುಳವಾಡ),  ಶ್ರಿಹರ್ಷ ಎಸ್. ಪಾಟೀಲ, ರಮೇಶ ಎಚ್. ಬಿದನೂರ, ಎಸ್.ಜಿ. ಗಚ್ಚಿನಕಟ್ಟಿ, ವಿ.ಆರ್. ಔರಂಗಾಬಾದ, ಪ್ರಕಾಶ ಎಸ್. ಬಗಲಿ, ವಿ.ಎಸ್. ಪಾಟೀಲ (ಮಸಬಿ ನಾಳ), ಎಸ್.ವೈ. ಗಂಗನಳ್ಳಿ, ಎನ್.ಆರ್. ಪಾಟೀಲ (ಮುಳವಾಡ) ಸಭೆಯಲ್ಲಿ ದ್ದರು ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಎಸ್.ಎಂ. ಕಟೆ, ಪ್ರಧಾನ ವ್ಯವಸ್ಥಾಪಕ ಎಂ.ಬಿ. ಕಿಣಗಿ ತಿಳಿಸಿದ್ದಾರೆ.ಒಟ್ಟು 17 ನಿರ್ದೇಶಕರಲ್ಲಿ 12 ಜನ ಮಾತ್ರ ಸಭೆಗೆ ಹಾಜರಾಗಿದ್ದರು. ಹಾಲಿ ಅಧ್ಯಕ್ಷ, ಶಾಸಕ ಅಪ್ಪು ಪಟ್ಟಣಶೆಟ್ಟಿ ಸೇರಿದಂತೆ ಅವರ ಬಣದ ಎಸ್.ಎಸ್. ಜತ್ತಿ, ಅಶೋಕ ನ್ಯಾಮಗೊಂಡ, ಬೋರಮ್ಮ ಗೊಬ್ಬೂರ ಮತ್ತಿತರರು ಗೈರು ಉಳಿದಿದ್ದರು. ಆದರೆ, ಅವರದೇ ಬಣದ ವಿ.ಡಿ. ಇಜೇರಿ ಸಭೆಗೆ ಹಾಜರಾಗಿದ್ದರು ಎಂದು ಮೂಲಗಳು ತಿಳಿಸಿವೆ.ಒಟ್ಟು 17 ಸದಸ್ಯ ಬಲದ ಸಿದ್ಧೇಶ್ವರ ಬ್ಯಾಂಕ್ ಚುನಾವಣೆಯಲ್ಲಿ ಶಾಸಕ ಅಪ್ಪು ಪಟ್ಟಣಶೆಟ್ಟಿ ಬಣದ ಆರು ಜನ, ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಬಣದ ನಾಲ್ವರು ಹಾಗೂ ಸಮಾನ ಮನಸ್ಕರ ವೇದಿಕೆಯ ಏಳು ಜನ ಸದಸ್ಯರು ನಿರ್ದೇಶಕರಾಗಿ ಆಯ್ಕೆಯಾಗಿದ್ದರು.ತಮ್ಮ ಬಣದ ಸದಸ್ಯ ಬಲ ಕಡಿಮೆ ಇದ್ದರೂ ಸಹ ಶಾಸಕ ಅಪ್ಪು ಪಟ್ಟಣಶೆಟ್ಟಿ ಪ್ರಥಮ ಅವಧಿಗೆ ಬ್ಯಾಂಕ್‌ನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಈಗ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಆರ್.ಎಂ. ಪಾಟೀಲ ಉಪ್ಪಲದಿನ್ನಿ ಸಮಾನ ಮನಸ್ಕರ ವೇದಿಕೆಯಿಂದ ಹಾಗೂ ಗುರುಪಾದಯ್ಯ ಗಚ್ಚಿನಮಠ ಮಾಜಿ ಶಾಸಕ ಶಿವಾನಂದ ಪಾಟೀಲ ಬೆಂಬಲಿತ ಗುಂಪಿನಿಂದ ಆಯ್ಕೆಯಾಗಿದ್ದರು.ಸರ್ವಸಾಧಾರಣ ಸಭೆ

ಸಿದ್ಧೇಶ್ವರ ಸಹಕಾರಿ ಬ್ಯಾಂಕ್‌ನ ಸರ್ವ ಸಾಧಾರಣ ಸಭೆ ಇತ್ತೀಚೆಗೆ ಇಲ್ಲಿಯ ಸಿದ್ಧೇಶ್ವರ ಶಿವಾನುಭವ ಮಂಟಪದಲ್ಲಿ ಜರುಗಿತು.ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್ ಅಧ್ಯಕ್ಷ, ನಗರ ಶಾಸಕ ಅಪ್ಪು ಪಟ್ಟಣಶೆಟ್ಟಿ, ಸಿದ್ಧೇಶ್ವರ ಸಹಕಾರಿ ಬ್ಯಾಂಕಿನಿಂದ ಕೋರ್ ಬ್ಯಾಂಕಿಂಗ್ ಹಾಗೂ ಎಟಿಎಂ ಸೌಲಭ್ಯ ಕಲ್ಪಿಸಲಾಗುವುದು. ಬ್ಯಾಂಕು ರೂ 84 ಲಕ್ಷ ಲಾಭಗಳಿಸಿದ್ದು, ಸದಸ್ಯ ರಿಗೆ ಶೇ.5ರಷ್ಟು ಲಾಭಾಂಶ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದರು.ಪ್ರಧಾನ ವ್ಯವಸ್ಥಾಪಕ ಎಂ.ಬಿ. ಕಿಣಗಿ, ಉಪಾಧ್ಯಕ್ಷ ಡಾ.ವಿ.ಎನ್. ಪಾಟೀಲ (ಮುಳವಾಡ) ಹಾಗೂ ನಿರ್ದೇಶಕರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry