ಭಾನುವಾರ, ಏಪ್ರಿಲ್ 18, 2021
31 °C

ಸಿನಿತಾರೆಗಳಿಂದ ಈದ್ ಮುಬಾರಕ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನೆಯಿಂದ ದೂರವಿರುವ ಶಾರುಖ್ ಖಾನ್ ಹಬ್ಬದ ಶುಭಾಶಯಗಳನ್ನು ಟ್ವೀಟಿಸಿದ್ದಾರೆ. ಲಡಾಖ್‌ನಲ್ಲಿ ಯಶ್ ಚೋಪ್ರಾ ಅವರ ಹೆಸರಿಡದ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿರುವ ಅವರು ಹಬ್ಬಕ್ಕೆ ಮನೆಗೆ ಬರಬೇಕೆಂದುಕೊಂಡಿದ್ದರಂತೆ.

`ಎಲ್ಲರಿಗೂ ಈದ್ ಶುಭಾಶಯಗಳು. ಅಲ್ಲಾಹ್ ಎಲ್ಲರಿಗೂ ಸಂತಸ ಹಾಗೂ ಸಮೃದ್ಧಿಯನ್ನು ನೀಡಲಿ. ಇನ್‌ಶಾ ಅಲ್ಲಾಹ್ (ದೇವರು ಬಯಸಿದರೆ) ಲಡಾಖ್‌ನ ಬಯಲಿನಲ್ಲಿ ತಕ್ಬಿರತ್ ಓದುವೆ..~ ಎಂದು ಸಂದೇಶ ರವಾನಿಸಿದ್ದಾರೆ.

`ಸೋಮವಾರ ಭಾರತದಲ್ಲಿ ಬಹುತೇಕ ಹಬ್ಬವನ್ನು ಆಚರಿಸಲಾಗಿದೆ. ವಿಶ್ವದ ಇನ್ನು ಕೆಲವೆಡೆ ಮಂಗಳವಾರ ಹಬ್ಬವನ್ನು ಆಚರಿಸಲಾಗುತ್ತಿದೆ. ಎಲ್ಲರಿಗೂ ಈದ್ ಮುಬಾರಕ್~ ಎಂದು ಅಕ್ಷಯ್ ಕುಮಾರ್ ಟ್ವೀಟಿಸಿದ್ದಾರೆ.

ಫರ‌್ಹಾನ್ ಅಖ್ತರ್ `ಈ ಹಬ್ಬವು, ಶಾಂತಿಯನ್ನು ಹರಡಲಿ, ಸೌಹಾರ್ದತೆಯನ್ನು ಹೆಚ್ಚಿಸಲಿ~ ಎಂದು ಸಂದೇಶ ರವಾನಿಸಿದ್ದಾರೆ.  ಬಿಗ್ ಬಿ ಅಮಿತಾಬ್ ಬಚ್ಚನ್ ಸಹ ಈದ್ ಸೌಹಾರ್ದ ಹಾಗೂ ಶಾಂತಿಯನ್ನು ತರಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.  ಈದ್‌ನೊಂದಿಗೆ ಹಿಂದೂಗಳಿಗೆ ಪವಿತ್ರ ಎನಿಸುವ ಅಧಿಕ ಮಾಸವೂ ಆರಂಭವಾಗುತ್ತಿದೆ. ಇವೆರಡೂ ಒಟ್ಟೊಟ್ಟಿಗೆ ಬಂದಿರುವುದು, ಎಲ್ಲರೂ ಒಟ್ಟಿಗೆ ಇರಲಿ ಎಂಬ ಸಂದೇಶವನ್ನೇ ಸಾರುತ್ತಿವೆ ಎಂದೂ ಅವರು ತಮ್ಮ ಬ್ಲಾಗ್‌ನಲ್ಲಿ ಹೇಳಿದ್ದಾರೆ.

ಬಿಪಾಶಾ ಬಸು ಹಾಗೂ ಪ್ರಿಯಾಂಕಾ ಚೋಪ್ರಾ ಈದ್ ಎಲ್ಲರಿಗೂ ಸುಖ ಸಂತೋಷ ತರಲಿ ಎಂದು ಆಶಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.