ಸಿನಿಮಾ ಪ್ರೇರಣೆಯಿಂದ ಸರಗಳ್ಳತನ: ಬಂಧನ

7

ಸಿನಿಮಾ ಪ್ರೇರಣೆಯಿಂದ ಸರಗಳ್ಳತನ: ಬಂಧನ

Published:
Updated:

ಬೆಂಗಳೂರು: ಸಿನಿಮಾಗಳಿಂದ ಪ್ರೇರಣೆಗೊಂಡು ಒಂಟಿ ಮಹಿಳೆಯನ್ನು ಬೆದರಿಸಿ ಚಿನ್ನದ ಸರ ದೋಚಿದ್ದ ರುದ್ರೇಶ (37) ಎಂಬಾತನನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.ರಾಮನಗರದ ಕೈಲಾಂಚ ಗ್ರಾಮದ ನಿವಾಸಿ ರುದ್ರೇಶ ಕೆಲ ವರ್ಷಗಳಿಂದ ನಗರದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ. ಸಿನಿಮಾಗಳಲ್ಲಿ ಒಂಟಿ ಮಹಿಳೆಯರನ್ನು ಬೆದರಿಸಿ ದರೋಡೆ ಮಾಡುವುದರಿಂದ ಪ್ರೇರೇಪಿತನಾಗಿದ್ದ ಆತ ಇತ್ತೀಗೆ ದರೋಡೆ ಕೃತ್ಯಕ್ಕೆ ಇಳಿದಿದ್ದ. ಮೆಜೆಸ್ಟಿಕ್‌ನ ಅಂಗಡಿಯೊಂದರಲ್ಲಿ ಆತ ಏರ್‌ಗನ್ ಖರೀದಿಸಿದ್ದ. ತಾನು ಈ ಹಿಂದೆ ಗಾರೆ ಕೆಲಸ ಮಾಡಿದ್ದ ಉತ್ತರಹಳ್ಳಿ ಬಳಿಯ ಪಿ.ಪಿ.ಲೇಔಟ್‌ನ ಬ್ಯಾಂಕ್ ಉದ್ಯೋಗಿಯೊಬ್ಬರ ಮನೆಗೆ ನುಗ್ಗಿದ ಆತ, ಏರ್‌ಗನ್ ತೋರಿಸಿ ಮನೆಯಲ್ಲಿದ್ದ ಮಹಿಳೆಯನ್ನು ಬೆದರಿಸಿ 66 ಗ್ರಾಂ ತೂಕದ ಚಿನ್ನದ ಸರ ಹಾಗೂ ಎರಡು ಸಾವಿರ ರೂಪಾಯಿ ನಗದು ದೋಚಿದ್ದ.  ಇತ್ತೀಚೆಗೆ ಕೆ.ಆರ್.ಮಾರುಕಟ್ಟೆಯ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆತನನ್ನು ಬಂಧಿಸಿ ಚಿನ್ನದ ಸರವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸುಬ್ರಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ರೈಲಿನಿಂದ ಬಿದ್ದು ವಿದ್ಯಾರ್ಥಿ ಸಾವು: ಹಿಂದಿ ಸಿನಿಮಾವೊಂದರ ಸಾಹಸ ದೃಶ್ಯವನ್ನು ಅನುಕರಣೆ ಮಾಡಲು ಹೋದ ವಿದ್ಯಾರ್ಥಿ ರೈಲಿನಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ನಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry