ಸಿನಿಮಾ ಭರಾಟೆ- `ಫ್ರೀಡಂ' ಮುಂದಿನ ವರ್ಷಕ್ಕೆ

7

ಸಿನಿಮಾ ಭರಾಟೆ- `ಫ್ರೀಡಂ' ಮುಂದಿನ ವರ್ಷಕ್ಕೆ

Published:
Updated:
ಸಿನಿಮಾ ಭರಾಟೆ- `ಫ್ರೀಡಂ' ಮುಂದಿನ ವರ್ಷಕ್ಕೆ

ಸುಮಾರು 100ಕ್ಕೂ ಹೆಚ್ಚು ಆ್ಯಡ್ ಸಿನಿಮಾಗಳನ್ನು ಮಾಡಿರುವ ವಿವೇಕ್ ಅಗ್ನಿಹೋತ್ರಿ ಸಿನಿಮಾ ನಿರ್ದೇಶಕರಾಗಿಯೂ ಜನಪ್ರಿಯರು. `ಚಾಕಲೇಟ್', `ಧನ್‌ಧನಾಧನ್ ಗೋಲ್', `ಹೇಟ್ ಸ್ಟೋರಿ' ಮುಂತಾದ ಸಿನಿಮಾಗಳನ್ನು ಮಾಡಿದ್ದಾರೆ.ಇದೀಗ `ಫ್ರೀಡಂ' ಎನ್ನುವ ಸಿನಿಮಾ ನಿರ್ದೇಶಿಸಿರುವ ಇವರು ತಮ್ಮ ಚಿತ್ರವನ್ನು ಮುಂದಿನ ವರ್ಷ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿದಿದ್ದು ಎಡಿಟಿಂಗ್ ಪ್ರಕ್ರಿಯೆ ನಡೆದಿದೆ.`ಇತ್ತೀಚೆಗೆ ಲೆಕ್ಕವಿಲ್ಲದಷ್ಟು ಸಿನಿಮಾಗಳು ನಿರ್ಮಾಣವಾಗುತ್ತಿವೆ. ಇಷ್ಟೊಂದು ಸಿನಿಮಾಗಳ ಭರಾಟೆಯಲ್ಲಿ ನನ್ನ ಚಿತ್ರವನ್ನು ಬಿಡುಗಡೆ ಮಾಡಲು ಜಾಗ ಸಿಗುತ್ತಿಲ್ಲ. ಹೀಗಾಗಿ 2014ರಲ್ಲಿ `ಫ್ರೀಡಂ' ಚಿತ್ರವನ್ನು ಬಿಡುಗಡೆ ಮಾಡುತ್ತೇನೆ. ತರಾತುರಿಯಲ್ಲಿ ಸಿನಿಮಾ ಬಿಡುಗಡೆ ಮಾಡಿ ಉತ್ಕೃಷ್ಟವಾದ ಕಥೆಯನ್ನು ಹಾಳು ಮಾಡಲು ನಾನು ಸಿದ್ಧನಿಲ್ಲ' ಎಂದೂ ಅವರು ನುಡಿದಿದ್ದಾರೆ.`ವಿಶೇಷ ಸಂದೇಶ ನೀಡುವ ಈ ಚಿತ್ರವನ್ನು ಉಳಿದ ಸಿನಿಮಾಗಳೊಂದಿಗೆ ಬಿಡುಗಡೆ ಮಾಡಿ ಹಾಳು ಮಾಡಲು ಇಚ್ಛಿಸುವುದಿಲ್ಲ. ಹೀಗಾಗಿ ನಾನು ಸರಿಯಾದ ಸಮಯಕ್ಕಾಗಿ ಕಾಯಲು ಸಿದ್ಧನಿದ್ದೇನೆ' ಎಂದು ಅವರು ಹೇಳಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry