ಸಿನಿಮೀಯ ರೀತಿಯಲ್ಲಿ ಯುವಕನ ಹತ್ಯೆ

7

ಸಿನಿಮೀಯ ರೀತಿಯಲ್ಲಿ ಯುವಕನ ಹತ್ಯೆ

Published:
Updated:

ಬೆಂಗಳೂರು: ಯುವಕನೊಬ್ಬನನ್ನು ಸ್ನೇಹಿತರೇ ಸಿನಿಮೀಯ ರೀತಿಯಲ್ಲಿ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ ಘಟನೆ ಮಾಗಡಿ ರಸ್ತೆಯ 13ನೇ ಅಡ್ಡರಸ್ತೆಯಲ್ಲಿ ಸೋಮವಾರ ನಡೆದಿದೆ. ವಿದ್ಯಾರಣ್ಯಪುರದ ಪ್ರದೀಪ್ ಉರುಫ್ ಪ್ರತಾಪ್ (20) ಕೊಲೆ ಯಾದ ಯುವಕ. ಆತ ಕೆಲ ದಿನಗಳಿಂದ ಯುವತಿ ಯೊಬ್ಬಳನ್ನು ಪ್ರೀತಿಸಲಾರಂಭಿಸಿದ್ದ. ಈ ವಿಷಯವಾಗಿ ಪ್ರದೀಪ್ ಮತ್ತು ಆತನ ಸ್ನೇಹಿತ ಅನಿಲ್ ಎಂಬಾತನ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಇದರಿಂದ ಕೋಪಗೊಂಡಿದ್ದ ಅನಿಲ್ ತನ್ನ ಸಹಚರರ ಜತೆ ಸೇರಿಕೊಂಡು ಆತನನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.  ಕೆಂಪಾಪುರ ಅಗ್ರಹಾರ ಠಾಣೆಯಲ್ಲಿ ದೂರು ದಾಖಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry