ಸಿನಿಮೀಯ ರೀತಿ ನಿಂತ ಮದುವೆ...!

7

ಸಿನಿಮೀಯ ರೀತಿ ನಿಂತ ಮದುವೆ...!

Published:
Updated:

ಬೆಂಗಳೂರು: ನಗರದ ಸಹಕಾರ ನಗರದ ಕಲ್ಯಾಣ ಮಂಟಪವೊಂದರಲ್ಲಿ ಭಾನುವಾರ ನಡೆಯಬೇಕಿದ್ದ ಮದುವೆಯೊಂದು ಸಿನಿಮೀಯ ರೀತಿಯಲ್ಲಿ ನಿಂತುಹೋಗಿದೆ.ಪ್ರಭಾಕರ ರೆಡ್ಡಿ ಹಾಗೂ ಪುಷ್ಪಾಲತಾ ಎಂಬುವರು ಆರು ವರ್ಷಗಳ ಹಿಂದೆ ಗಾಯಿತ್ರಿನಗರದ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಪರಸ್ಪರ ಪ್ರೀತಿಸಿದ್ದರು. ಮನೆಯವರ ವಿರೋಧದ ನಡುವೆಯೇ ಕಳೆದ ಜನವರಿ 30 ರಂದು ಮಂಡ್ಯ ಜಿಲ್ಲೆ ಪಾಂಡವಪುರದ ದೇವ ಸ್ಥಾನ ವೊಂದ ರಲ್ಲಿ ಮದುವೆಯಾಗಿದ್ದರು. ಮದುವೆ ಯಾಗಿರುವ ವಿಚಾರ ಇಬ್ಬರ ಪೋಷಕರಿಗೂ ತಿಳಿದಿರಲಿಲ್ಲ.ಇತ್ತೀಚೆಗೆ ಪ್ರಭಾರಕ ರೆಡ್ಡಿ ಮನೆ ಯವರ ಒತ್ತಾಯಕ್ಕೆ ಮಣಿದು ಪುಷ್ಪಾಲತಾಗೆ ತಿಳಿಯದಂತೆ ಮತ್ತೊಬ್ಬ ಹುಡುಗಿಯೊಂದಿಗೆ ಮದುವೆಯಾಗಲು ಸಮ್ಮತಿಸಿದ್ದ. ಈತ ಮದುವೆಯಾಗಲಿರುವ ವಿಷಯ ತಿಳಿದ ಪುಷ್ಪಾಲತಾ ಭಾನುವಾರ ವಿವಿಧ ಮಹಿಳಾ ಸಂಘಟನೆಗಳ ಸದಸ್ಯರೊಂದಿಗೆ ಕಲ್ಯಾಣ ಮಂಟಪಕ್ಕೆ ಬಂದು ಮದುವೆ ನಿಲ್ಲಿಸಿದ್ದಾರೆ. ಪುಷ್ಪಾಲತಾ ಪ್ರಭಾರಕ ರೆಡ್ಡಿ ವಿರುದ್ಧ ಕೊಡಿಗೇಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry