ಸಿನ್ಹಾ ಆರೋಗ್ಯ ಸ್ಥಿರ; ದಾರಾಸಿಂಗ್ ಚೇತರಿಕೆ ಅನುಮಾನ

ಸೋಮವಾರ, ಜೂಲೈ 22, 2019
26 °C

ಸಿನ್ಹಾ ಆರೋಗ್ಯ ಸ್ಥಿರ; ದಾರಾಸಿಂಗ್ ಚೇತರಿಕೆ ಅನುಮಾನ

Published:
Updated:

ಮುಂಬೈ (ಪಿಟಿಐ): ಉಸಿರಾಟ ತೊಂದರೆಯಿಂದ ಬಳಲುತ್ತಿರುವ ಹಿರಿಯ ನಟ, ಕೇಂದ್ರದ ಮಾಜಿ ಸಚಿವ ಶತ್ರುಘ್ನ ಸಿನ್ಹಾ ಅವರ ಆರೋಗ್ಯ ಸ್ಥಿರವಾಗಿದೆ. ಆದರೆ, ಹೃದಯಾಘಾತಕ್ಕೆ ಒಳಗಾಗಿರುವ ಖ್ಯಾತ ಕುಸ್ತಿಪಟು, ನಟ ದಾರಾಸಿಂಗ್ ಚೇತರಿಕೊಳ್ಳುವುದು ಅನುಮಾನ ಎಂದು ವೈದ್ಯರು ತಿಳಿಸಿದ್ದಾರೆ.66 ವರ್ಷ ವಯಸ್ಸಿನ ಸಿನ್ಹಾ ಇಲ್ಲಿನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಒಂಬತ್ತು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮ್ಮ ನಿವಾಸದಲ್ಲಿ ನಡೆದ ಪೇಟಿಂಗ್ ಕೆಲಸದ ಸಂದರ್ಭದಲ್ಲಿ ಅಸ್ವಸ್ಥಗೊಂಡು ಈ ತಿಂಗಳ 2ರಂದು ಆಸ್ಪತ್ರೆ ಸೇರಿದ್ದರು.ಈ ಆಸ್ಪತ್ರೆ ತುರ್ತು ನಿಗಾ ಘಟಕದಲ್ಲಿ ದಾರಾಸಿಂಗ್ (84) ಇದೇ  7ರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೃದಯಾಘಾತದ ಕಾರಣ ಅವರ ಮಿದುಳಿಗೆ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾದ್ದರಿಂದಹಾನಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry