ಭಾನುವಾರ, ಜೂನ್ 20, 2021
25 °C

ಸಿಪಿಐನಿಂದ ಎಚ್‌.ಕೆ.ರಾಮಚಂದ್ರಪ್ಪ ನಾಮಪತ್ರ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಕಮ್ಯುನಿಸ್ಟ್‌ ಪಕ್ಷದಿಂದ ದಾವಣಗೆರೆ ಲೋಕಸಭಾ ಅಭ್ಯರ್ಥಿ ಎಚ್‌.ಕೆ.ರಾಮಚಂದ್ರಪ್ಪ ಮಾರ್ಚ್‌ 25ರಂದು ನಾಮಪತ್ರ ಸಲ್ಲಿಸುವರು.ಬೆಳಿಗ್ಗೆ 11ಕ್ಕೆ ನಗರದ ಪಕ್ಷದ ಕಚೇರಿಯಿಂದ ಮಹಾನಗರಪಾಲಿಕೆ ತನಕ ಕಾಲ್ನಡಿಗೆ ಜಾಥಾ ನಡೆಸಲಾಗುವುದು. ನಂತರ ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಾಗುವುದು. ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಹ ಕಾರ್ಯದರ್ಶಿ ಆವರಗೆರೆ ಚಂದ್ರು ಪ್ರಕಟಣೆಯಲ್ಲಿ ಕೋರಿದ್ದಾರೆ.ಬಿಜೆಪಿ: ಪದಾಧಿಕಾರಿಗಳ ಆಯ್ಕೆ

ದಾವಣಗೆರೆ:
ಮಾಯಕೊಂಡ ವಿಧಾಸಭಾ ಕ್ಷೇತ್ರ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳ ಪಟ್ಟಿ ಈ ಕೆಳಗಿನಂತಿದೆ.ಹುಚ್ಚವ್ವನಹಳ್ಳಿ ಅಶ್ರಫ್ (ಅಧ್ಯಕ್ಷರು), ಎಂ.ಎನ್.ಶಫ್‌ಖತ್, ಅಸ್ಮಾಬಾನು ಫಸೀವುದ್ದೀನ್ (ಉಪಾಧ್ಯಕ್ಷರು), ಜಹೀರುದ್ದೀನ್ (ಪ್ರಧಾನ ಕಾರ್ಯದರ್ಶಿ), ಜಬೀವುಲ್ಲಾ, ರಹಮತಿ, ಗೌಸ್‌ಪೀರ್ ಸಾಬ್, ಖಾಸಿಂಸಾಬ್ (ಕಾರ್ಯದರ್ಶಿಗಳು), ಹಮೀದ್‌ ಸಾಬ್‌ (ಖಜಾಂಚಿ).ಬ್ಲಾಕ್ ಕಾಂಗ್ರೆಸ್‌ಗೆ ಅನಸೂಯಮ್ಮ ಆಯ್ಕೆ

ದಾವಣಗೆರೆ:
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಲಕ್ಷ್ಮಣಸ್ವಾಮಿ ಅವರು ಅನಸೂಯಮ್ಮ ಅವರನ್ನು ಮಾಯಕೊಂಡ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.‘ಮಾದರಿ ನೀತಿ ಸಂಹಿತೆ ಪಾಲನೆಗೆ ಕ್ರಮ’

ಮಾಯಕೊಂಡ:
ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ ಎಂದು ತಹಶೀಲ್ದಾರ್‌ ಮಂಜುನಾಥ್‌ ಬಳ್ಳಾರಿ ತಿಳಿಸಿದರು.ಇಲ್ಲಿನ  ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.

ಮಾಯಕೊಂಡ ವಿಧಾನ ಸಭಾ ಕ್ಷೇತ್ರದಲ್ಲಿ 239 ಮತಗಟ್ಟೆಗಳು ಇದ್ದು, 46 ಅತಿ ಸೂಕ್ಷ್ಮ, 89 ಸೂಕ್ಷ್ಮ, 104 ಸಾಮಾನ್ಯ ಮತೆಗಟ್ಟೆಗಳು ಎಂದು ಗುರುತಿಸಲಾಗಿದೆ.ಅಕ್ರಮ ಮದ್ಯ, ಹಣ ಸಾಗಣೆ  ತಡೆಯಲು ಉದ್ಯೋಗಾಧಿಕಾರಿ ರುದ್ರನಗೌಡ ತಂಡದಲ್ಲಿ ಫ್ಲೈಯಿಂಗ್‌ ಸ್ಕ್ವಾಡ್‌ ತಂಡ ನೇಮಿಸಲಾಗಿದೆ. ಕೆಪಿಟಿಸಿಎಲ್‌ ಸಹಾಯಕ ಎಂಜಿನಿಯರ್‌ ಕೊಟ್ರೇಶ್‌ ನೇತೃತ್ವದ ತಂಡ  ಸಭೆ, ಸಮಾರಂಭಗಳ ವೀಡಿಯೋ ಚಿತ್ರೀಕರಣ ನಡೆಸುತ್ತದೆ. ಅನುಮತಿ ಪಡೆದೇ ಸಭೆ ಸಮಾರಂಭ, ಪಾದಯಾತ್ರೆ, ಸಮಾವೇಶ ನಡೆಸಬೇಕು. ಪ್ರಚಾರಕ್ಕೆ ಬಳಸುವ ವಾಹನಗಳಿಗೆ ಕಡ್ಡಾಯವಾಗಿ ಪರಾವನಗಿ ಪಡೆಯಬೇಕು. ಹುಚ್ಚವ್ವನಹಳ್ಳಿ ವಡ್ಡರಹಟ್ಟಿ, ಮಲ್ಲೇನಹಳ್ಳಿ ಸೇರಿದಂತೆ ಅಗತ್ಯವಿರುವ 10 ಕಡೆ ಹೊಸ ಮತಗಟ್ಟೆ ನಿರ್ಮಿಸಲಾಗಿದೆ ಎಂದು ಅವರು ವಿವರಿಸಿದರು.ಕಂದಾಯ ನಿರೀಕ್ಷಕ ರವಿ, ಗ್ರಾಮ ಲೆಕ್ಕಾಧಿಕಾರಿ ಶ್ರೀನಿವಾಸ್‌ ಮತ್ತು ಕಂದಾಯ ಇಲಾಖೆಯ ಮತ್ತು ನಿಯೋಜಿತ ಚುನಾವಣಾಧಿಕಾರಿಗಳು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.