ಶನಿವಾರ, ಏಪ್ರಿಲ್ 17, 2021
32 °C

ಸಿಬಿಎಸ್‌ಇಗೆ ಸಿದ್ಧರಾಗುವುದು ಅನಿವಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ರಾಷ್ಟ್ರಾದ್ಯಂತ ಒಂದೇ ರೀತಿಯ ಪಠ್ಯಕ್ರಮ ಅಳವಡಿಸುವ ಸರ್ಕಾರದ ಹೊಸ ವಿಧಾನಕ್ಕೆ ಶಿಕ್ಷಕರಾದ ನಾವುಗಳು ಮೊದಲು ಸಿದ್ಧರಾಗಬೇಕು. ತದನಂತರದಲ್ಲಿ ವಿದ್ಯಾರ್ಥಿಗಳನ್ನು ಆ ದಿಸೆಯಲ್ಲಿ ಅಣಿಗೊಳಿಸಲು ಮುಂದಾಗಬೇಕೆಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಸದಸ್ಯ ಪ್ರೊ.ಎಸ್. ವಿ. ಸಂಕನೂರು ಸಲಹೆ ಮಾಡಿದರು.ಬೆಂಗಳೂರಿನ ರಾಜ್ಯ ವಿಜ್ಞಾನ ಪರಿಷತ್ ಮತ್ತು ಜಿಲ್ಲಾ ಘಟಕ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ನಗರದ ಹೊರವಲಯದಲ್ಲಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ನಡೆದ ಪ್ರೌಢಶಾಲಾ ವಿಜ್ಞಾನ ಶಿಕ್ಷಕರ ರಾಜ್ಯ ಮಟ್ಟದ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.ಬೇರೆ ಬೇರೆ ರಾಜ್ಯದ ವಿದ್ಯಾರ್ಥಿಗಳೊಂದಿಗೆ ನಮ್ಮ ರಾಜ್ಯದ ವಿದ್ಯಾರ್ಥಿಗಳು ಪೈಪೋಟಿ ನಡೆಸಬೇಕಾಗಿರುವುದರಿಂದ ದೇಶದಾದ್ಯಂತ ಒಂದೇ ರೀತಿಯ ಪಠ್ಯಕ್ರಮ ಅಳವಡಿಸುವುದು ಅನಿವಾರ್ಯವಾಗಿದೆ. ಶಿಕ್ಷಕರು ಹೊರೆ ಎಂದು ಭಾವಿಸದೇ ಅದೊಂದು ಸವಾಲನ್ನಾಗಿ ಸ್ವೀಕರಿಸಬೇಕು ಎಂದರು.ಬೆಂಗಳೂರಿನ ಜವಾಹರಲಾಲ್ ನೆಹರು ಪ್ಲೆನಿಟೋರಿಯಮ್‌ನ ಉಪನ್ಯಾಸಕ ಮಧುಸೂದನ್ ಅವರು, ನ್ಯೂಟನ್‌ನ ಚಲನೆಯ ನಿಯಮಗಳು ಮತ್ತು ಚಲನೆ ದೂರ, ಬಲ, ವೇಗ, ವೇಗೋತ್ಕರ್ಷ್ ಕ್ರಿಷ್ಟಕರ ವಿಷಯಗಳನ್ನು ಕೇವಲ ಆಟಕೀಯ ಸಾಮಾನುಗಳು, ಸೈಕಲ್ ಕಡ್ಡಿ, ಮುರಿದ ಪಿಪೆಟ್, ಸ್ಪೀಕರ್‌ನ ಕಾಂತಗಳು, ಕಬ್ಬಿಣದ ರಿಂಗ್ ಇವುಗಳ ಮೂಲಕ ಪ್ರಯೋಗ ಮಾಡಿ ಶಿಕ್ಷಕರಿಗೆ ಅರ್ಥವಾಗುವಂತೆ ಕಠಿಣ ಪರಿಕಲ್ಪನೆ ಗಳನ್ನು ಸುಲಭ ರೀತಿಯಲ್ಲಿ ವಿಶ್ಲೇಶಿಸಿದರು.ಧಾರವಾಡದ ನಿವೃತ್ತ ಪ್ರಾಧ್ಯಾಪಕ ಸುರೇಶ ಕುಲಕರ್ಣಿ ಅವರು, ಜೀವಕೋಶಗಳ ಅಧ್ಯಯನ, ಆಹಾರ ಮತ್ತು ಅದರ ಘಟಕಗಳು ನೈಸರ್ಗಿಕ ಸಂಪನ್ಮೂಲಗಳು ಕುರಿತಾಗಿ ಉಪನ್ಯಾಸ ನೀಡಿದರು. ಅವರು ನಾವು ದಿನನಿತ್ಯವು ಊಟ ಮಾಡುವ ಅಕ್ಕಿ, ರಾಗಿ, ಗೋದಿ, ತರಕಾರಿ, ಹಣ್ಣು, ಹಾಲು, ಮಾಂಸ, ಮೊಟ್ಟೆ, ಎಣ್ಣೆ, ಮುಂತಾದ ಆಹಾರ ಪದಾರ್ಥಗಳಲ್ಲಿರುವ ಪ್ರೋಟೀನ್, ವಿಟಾಮಿನ್, ಕಾರ್ಬೋಹೈಡ್ರೆಡ್ಸ್ ಮತ್ತು ಮಿನರಲ್ಸ್ ಇವುಗಳನ್ನು ಸ್ಪಷ್ಟವಾಗಿ ಗುರುತಿಸಿ ನಮ್ಮ ಆಹಾರ ಪದ್ಧತಿಯನ್ನು ಮಕ್ಕಳಿಗೆ ಹೇಗೆ ತಿಳಿಸಿಕೊಡಬೇಕು ಎಂಬುದನ್ನು ಸ್ಪಷ್ಟಪಡಿಸಿದರು. ಕುಲಕರ್ಣಿಯವರು ತಮ್ಮ ಅತ್ಯಾಕರ್ಷಕ ಕೌಶಲ್ಯದಿಂದ ಕ್ಷಣಾರ್ಧದಲ್ಲಿ ಪಠ್ಯಪುಸ್ತಕದಲ್ಲಿನ ಹೂ, ಮೆದುಳು, ಕಪ್ಪೆ, ಮೀನು ಮುಂತಾದ ಚಿತ್ರಗಳನ್ನು ಬಿಡಿಸಿ ಅವುಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವ ಬಗೆಯನ್ನು ತಿಳಿಸಿಕೊಟ್ಟರು. ತಜ್ಞರಾಗಿ ಆಗಮಿಸಿ ಮಾರ್ಗದರ್ಶನ ಮಾಡಿದ ಪ್ರೊ. ಎಸ್.ವಿ.ಸಂಕನೂರು, ಕುಲಕರ್ಣಿ, ಪ್ರೊ. ಎಚ್.ಆರ್. ಮಧುಸೂದನ ಅವರನ್ನು ವಿಜ್ಞಾನ ಪರಿಷತ್ ಉಪಾಧ್ಯಕ್ಷ ದೊಡ್ಡಬಸಪ್ಪ ಅವರು ಶಾಲು ಹೊದಿಸಿ ಸನ್ಮಾನಿಸಿದರು. ಡಯಟ್ ಪ್ರಾಚಾರ್ಯ ಎಂ.ಡಿ.ಬಳ್ಳಾರಿ ಮತ್ತಿತರರು ಹಾಜರಿ ದ್ದರು. ಎಂ.ಜಿ. ಹಿರೇಮಠ ಸ್ವಾಗತಿಸಿದರು. ಕಡೂ ರಿನ ಶಿಕ್ಷಕ ಎಂ.ಎಂ.ಕೆರೂರು ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.