ಸಿಬಿಎಸ್‌ಇ: ರಾಜ್ಯದ ಅಮೋಘ ಸಾಧನೆ

7

ಸಿಬಿಎಸ್‌ಇ: ರಾಜ್ಯದ ಅಮೋಘ ಸಾಧನೆ

Published:
Updated:

ಬೆಂಗಳೂರು: ಸಿಬಿಎಸ್‌ಇ ಪಠ್ಯಕ್ರಮದ ಹತ್ತನೇ ತರಗತಿಯ ದಕ್ಷಿಣ ಪ್ರಾಂತ್ಯದ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು ಕರ್ನಾಟಕದ ವಿದ್ಯಾರ್ಥಿಗಳು ಶೇಕಡ 99.73ರಷ್ಟು ಅಮೋಘ ಸಾಧನೆ ಮಾಡಿದ್ದಾರೆ.

ಈ ಬಾರಿ ರಾಜ್ಯದ 19,460 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು.ಎಂದಿನಂತೆ ಈ ಬಾರಿಯೂ ಹುಡುಗಿಯರೇ ಮೇಲುಗೈ ಪಡೆದಿದ್ದು ಶೇಕಡ 99.75ರಷ್ಟು ಸಾಧನೆ ಮಾಡಿದ್ದರೆ, ಹುಡುಗರು 99.6ರಷ್ಟು ಪ್ರಮಾಣದಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಸಿಬಿಎಸ್‌ಇ ಚೆನ್ನೈ ಪ್ರಾಂತ್ಯದ ಜಂಟಿ ಕಾರ್ಯದರ್ಶಿ ಡಿ.ಟಿ.ಶ್ರೀಧರನ್  `ಪ್ರಜಾವಾಣಿ~ಗೆ ತಿಳಿಸಿದ್ದಾರೆ. ರಾಜ್ಯದ ಸಿಬಿಎಸ್‌ಇ ಪಠ್ಯಕ್ರಮದ ವಿದ್ಯಾರ್ಥಿಗಳು ಕಳೆದ ವರ್ಷ ಮಾಡಿದ ಸಾಧನೆ 99.66ರಷ್ಟಿತ್ತು. ಈ ಬಾರಿ ಅದು 99.73ಕ್ಕೆ ಏರಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry