ಬುಧವಾರ, ನವೆಂಬರ್ 20, 2019
21 °C

ಸಿಬಿಎಸ್‌ಸಿಗೆ ಕಾನೂನು ಅಧ್ಯಯನ

Published:
Updated:

ನವದೆಹಲಿ (ಪಿಟಿಐ): ಮುಂಬರುವ ಶೈಕ್ಷಣಿಕ ವರ್ಷದಿಂದ 11 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಕಾನೂನು ಅಧ್ಯಯನವನ್ನು ಐಚ್ಛಿಕ ವಿಷಯವನ್ನಾಗಿ ಪರಿಚಯಿಸಲು ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಸಿ) ನಿರ್ಧರಿಸಿದೆ.ಈ ಬಗ್ಗೆ ಎಲ್ಲ ಕೇಂದ್ರೀಯ ಶಾಲೆಗಳಿಗೆ ಪತ್ರ ಬರೆಯಲಾಗಿದ್ದು, ಶಾಲೆಗಳ ಅಭಿಪ್ರಾಯ ಕೋರಲಾಗಿದೆ ಎಂದು ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.2013-14ನೇ ಶೈಕ್ಷಣಿಕ ವರ್ಷದಿಂದ ಸುಮಾರು 20 ಶಾಲೆಗಳಲ್ಲಿ ಸಿಬಿಎಸ್‌ಸಿ ವಿದ್ಯಾರ್ಥಿಗಳಿಗೆ `ಮೊದಲು ಬಂದವರಿಗೆ ಮೊದಲ ಆದ್ಯತೆ'ಯ ಮೇಲೆ ಈ ಸೇವೆ ನೀಡಲಾಗುವುದು. ಯಾವುದೇ ಕಾಂಬಿನೇಷನ್ ತೆಗೆದುಕೊಂಡರೂ ಸಾಮಾನ್ಯ ವಿಷಯದ ಜೊತೆಗೆ ಇತರ ಮೂರು ಐಚ್ಛಿಕ ವಿಷಯಗಳಲ್ಲಿ ಒಂದು ಕಾನೂನು ಅಧ್ಯಯನದ ವಿಷಯ ಇರುತ್ತದೆ. ಕಾನೂನಿನ ವಿವಿಧ ಆಯಾಮಗಳ ಕುರಿತು ಪರಿಚಯಿಸುವುದು ಹಾಗೂ ವಿದ್ಯಾರ್ಥಿಗಳಿಗೆ ತಮ್ಮ ಹಕ್ಕು ಮತ್ತು ಕರ್ತವ್ಯಗಳ ಕುರಿತು ತಿಳಿಸುವುದು ಯೋಜನೆ ಉದ್ದೇಶವಾಗಿದೆ ಎಂದು ತಿಳಿಸಲಾಗಿದೆ.ಮುಂಬರುವ ಶೈಕ್ಷಣಿಕ ವರ್ಷದಿಂದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಒಂದು ವರ್ಷದ ಎಲ್‌ಎಲ್‌ಎಂ ಕೋರ್ಸ್ ಆರಂಭಿಸುವುದಕ್ಕೆ ಈಗಾಗಲೇ ಯುಜಿಸಿ ಸಿದ್ಧತೆ ನಡೆಸಿದ್ದು, ಈಗ ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಸಿ) ಕೂಡ ಕಾನೂನು ಅಧ್ಯಯನದ ವಿಷಯ ಒದಗಿಸಲು ಮುಂದಾಗಿರುವುದು ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿದೆ.

ಪ್ರತಿಕ್ರಿಯಿಸಿ (+)