ಸಿಬಿಎಸ್‌ಸಿ ಸಿಇಟಿಗೆ ವಿರೋಧ

7

ಸಿಬಿಎಸ್‌ಸಿ ಸಿಇಟಿಗೆ ವಿರೋಧ

Published:
Updated:

ಹಾವೇರಿ: ಪ್ರಸ್ತುತ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿಬಿಎಸ್‌ಇ ಸಿಇಟಿ ವಿರೋಧಿಸಿ ಹಾಗೂ ಇತರ ಪ್ರಮುಖ ಶೈಕ್ಷಣಿಕ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ ಜಿಲ್ಲಾ ಘಟಕ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.ನಗರದ ಜಿ.ಎಚ್. ಮಹಾವಿದ್ಯಾಲಯದ ಎದುರು ಭಾರತ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಬೇಡಿಕೆಗಳನ್ನು ಈಡೆರಿಸುವಂತೆ ಘೋಷಣೆಗಳನ್ನು ಕೂಗಿದರು.ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಪೂಜಾರ ಮಾತನಾಡಿ, ಪಿಯುಸಿ ವಿದ್ಯಾರ್ಥಿಗಳು ರಾಜ್ಯ ಪಠ್ಯಕ್ರಮದಲ್ಲಿ ಅಧ್ಯಯನ ಮಾಡಿರುತ್ತಾರೆ. ಅವರಿಗೆ ಸಿಬಿಎಸ್‌ಸಿ ಮಾದರಿ ಸಿಇಟಿ ನಡೆಸುವುದರಿಂದ ತೀವ್ರ ತೊಂದರೆಯಾಗಲಿದೆ. ಆದಕಾರಣ ಕೂಡಲೇ  ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಒತ್ತಾಯಿಸಿದರು.ಅತಿಥಿ ಉಪನ್ಯಾಸಕರ ವೇತನ ತಾರತಮ್ಯ ಹೋಗಲಾಡಿಸಿ, ವೇತನ ಹೆಚ್ಚಳ ಮಾಡಬೇಕು. ಪ್ರತಿ ತಿಂಗಳು ವೇತನ ನೀಡಬೇಕು. ಆದ್ಯತೆ ಆಧಾರದ ಮೇಲೆ ಅವರನ್ನು ನೇಮಕ ಮಾಡಬೇಕು ಮತ್ತು ಸೂಕ್ತ ಸೌಕರ್ಯ ಒದಗಿಸಬೇಕು. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಬೋಧನಾ ಶುಲ್ಕವನ್ನು ಸರ್ಕಾರವೇ ಪಾವತಿಸಬೇಕು ಹಾಗೂ ಈಗಿರುವ ಪ್ರವೇಶ ಶುಲ್ಕ, ಪರೀಕ್ಷೆ ಶುಲ್ಕಗಳನ್ನು ಕಡಿಮೆಗೊಳಿಸಬೇಕು. ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಶೂನ್ಯ ಉಳಿತಾಯದಲ್ಲಿ ಖಾತೆ ತೆರೆಯಲು ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದರು.ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯಗಳಾದ ಸ್ವಂತ ಕಟ್ಟಡ, ಗ್ರಂಥಾಲಯ, ಕ್ರೀಡಾ ಸಾಮಗ್ರಿಗಳು, ಗುಣಮಟ್ಟದ ಆಹಾರ ಒದಗಿಸಿ ವಿದ್ಯಾರ್ಥಿಗಳ ಸ್ಟೈಫಂಡ್ ಹೆಚ್ಚಳ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳ ಮನವಿಯನ್ನು ತಹಸೀಲ್ದಾರ್‌ರ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ವಿನಾಯಕ, ನೀಲಮ್ಮ ಶಂಕ್ರಪ್ಪನವರ, ಇಮಾಮ್ ನದಾಫ್,  ಅಕ್ಬರ್ ಅಲಿ, ಅರುಣಗೌಡ ಪಾಟೀಲ, ಬಸವರಾಜ ಮೂಲಿಮನಿ, ಮಾರ್ತಾಂಡ, ಮುತ್ತುರಾಜ, ಗದುಗೆಯ್ಯ ಸಿ.ಎಚ್, ಮಧುಮತಿ ಡಿ. ಅಶ್ವಿನಿ ಪಾಟೀಲ, ಮೈತ್ರಿ ಜೋಶಿ ಮತ್ತು ಇತರ ಅನೇಕರು ಪಾಲ್ಗೊಂಡಿದ್ದರು.`ಸಾಹಿತ್ಯ ಸಂಗೀತ - ಜೋಡಿ ಸಂವಾದ~


ನಗರದ ಸಾಹಿತಿಗಳು ಮತ್ತು ಕಲಾವಿದರ ಬಳಗ ಆಯೋಜಿಸುವ ತಿಂಗಳ ಸಾಹಿತ್ಯ ಸಂವಾದದಲ್ಲಿ ಹಿರಿಯ ಕವಿ ಗಂಗಾಧರ ನಂದಿ ಮತ್ತು  ಸಂಗೀತಗಾರ್ತಿ ಬೆಂಗಳೂರಿನ ಸುಕನ್ಯಾ ವಿಜಯಕುಮಾರರ `ಸಾಹಿತ್ಯ ಸಂಗೀತ - ಜೋಡಿ ಸಂವಾದ~ ಇದೇ 14 ಭಾನುವಾರ ಸಂಜೆ 5 ಗಂಟೆಗೆ ನಗರದ ಜಿಲ್ಲಾ ಸರಕಾರಿ ನೌಕರರ ಭವನದಲ್ಲಿ ನಡೆಯಲಿದೆ.ಕವಿ ನಂದಿಯವರ `ಗಮನ ಗೀತೋತ್ಸವ~ ಧ್ವನಿ ಸುರುಳಿ ಬಿಡುಗಡೆ ಹಿನ್ನೆಲೆಯಲ್ಲಿ ಸಂವಾದ ನಡೆಯಲಿದೆ. ಶಾಸಕ ಶಿವರಾಜ ಸಜ್ಜನರ ಸಂವಾದ ಉದ್ಘಾಟಿಸುವರು. ಹಿರಿಯ ಪತ್ರಕರ್ತ ಪ್ರಕಾಶ ಜೋಶಿ ಅಧ್ಯಕ್ಷತೆ ವಹಿಸುವರು. ಹಿಂದೂಸ್ಥಾನಿ ಗಾಯಕಿ ದಿ. ಸೋನುಬಾಯಿ ದೊಡ್ಮನಿ ಪುತ್ರ ್ರ. ಮದನ ದೊಡ್ಮನಿ ಮತ್ತು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಮಾಳಗಿ ಅತಿಥಿಗಳಾಗಿರುವರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry