ಮಂಗಳವಾರ, ಏಪ್ರಿಲ್ 20, 2021
24 °C

ಸಿಬಿಐ ಡಿಐಜಿ, ಎಚ್‌ಸಿಗೆ ರಾಷ್ಟ್ರಪತಿ ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಬಿಐ ಡಿಐಜಿ, ಎಚ್‌ಸಿಗೆ ರಾಷ್ಟ್ರಪತಿ ಪದಕ

ಬೆಂಗಳೂರು: ಸಿಬಿಐನ ಬೆಂಗಳೂರು ಡಿಐಜಿ ಆರ್.ಹಿತೇಂದ್ರ ಮತ್ತು ಮುಖ್ಯ ಕಾನ್‌ಸ್ಟೆಬಲ್ ಎಂ.ಚಂದ್ರಶೇಖರ್ ಅವರಿಗೆ ಶ್ಲಾಘನೀಯ ಸೇವೆಗಾಗಿ 2012ನೇ ಸಾಲಿನ ರಾಷ್ಟ್ರಪತಿಯವರ ಪದಕ ನೀಡಲಾಗಿದೆ.65ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇಬ್ಬರನ್ನೂ ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಈ ಇಬ್ಬರೂ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿರುವ ಸಿಬಿಐ ಘಟಕಗಳ ಆರು ಅಧಿಕಾರಿಗಳಿಗೆ ಅತ್ಯುನ್ನತ ಸೇವೆಗಾಗಿ ರಾಷ್ಟ್ರಪತಿ ಪದಕ ಮತ್ತು 18 ಅಧಿಕಾರಿಗಳು ಹಾಗೂ ನೌಕರರಿಗೆ ಶ್ಲಾಘನೀಯ ಸೇವೆಗಾಗಿ ರಾಷ್ಟ್ರಪತಿ ಪದಕ ನೀಡಲಾಗಿದೆ.ಹಿತೇಂದ್ರ ಅವರು 1996ನೇ ಸಾಲಿನ ಕರ್ನಾಟಕ ವೃಂದದ ಐಪಿಎಸ್ ಅಧಿಕಾರಿ. ರಾಜ್ಯದ ವಿವಿಧ ಕಡೆಗಳಲ್ಲಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ಅವರು, 2006ರಲ್ಲಿ ಸಿಬಿಐ ಸೇವೆಗೆ ನಿಯೋಜನೆ ಹೊಂದಿದರು. ಪ್ರಸ್ತುತ ರಾಜ್ಯದಲ್ಲಿನ ಸಿಬಿಐ-ಭ್ರಷ್ಟಾಚಾರ ನಿಯಂತ್ರಣ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದು, ಹಲವು ಪ್ರಮುಖ ಪ್ರಕರಣಗಳ ತನಿಖೆಯ ನೇತೃತ್ವ ವಹಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.