ಸಿಬಿಐ ವಿರೋಧ

7

ಸಿಬಿಐ ವಿರೋಧ

Published:
Updated:

ನವದೆಹಲಿ (ಪಿಟಿಐ): ಆರುಷಿ ಮತ್ತು ತಮ್ಮ ಮನೆ ಕೆಲಸದಾಳು ಹೇಮರಾಜ್ ಹತ್ಯೆ ಪ್ರಕರಣವನ್ನು ಗಾಜಿಯಾಬಾದ್ ನ್ಯಾಯಾಲಯದಿಂದ ದೆಹಲಿಗೆ ವರ್ಗಾಯಿಸುವಂತೆ ಪ್ರಕರಣದ ಆರೋಪಿಗಳೂ ಆದ ಆರುಷಿ ಪೋಷಕರ ಕೋರಿಕೆಯನ್ನು ಸಿಬಿಐ ವಿರೋಧಿಸಿದೆ. ರಾಜೇಶ್ ತಲ್ವಾರ್ ಮತ್ತು ನೂಪುರ್ ತಲ್ವಾರ್ ಸುಪ್ರೀಂ ಕೋರ್ಟ್‌ಗೆ ಈ ಮನವಿ ಮಾಡಿಕೊಂಡಿದ್ದರು.

`ಪ್ರಕರಣವನ್ನು ವರ್ಗಾಯಿಸುವಂತೆ ಕೋರುತ್ತಿರುವ ಆರೋಪಿಗಳಿಗೆ ಗೂಢ ಉದ್ದೇಶಗಳು ಇದ್ದಂತಿದೆ~ ಎಂದು ಸಿಬಿಐ, ನ್ಯಾಯಮೂರ್ತಿ ಬಿ.ಎಸ್ ಚೌಹಾಣ್ ನೇತೃತ್ವದ ನ್ಯಾಯಪೀಠಕ್ಕೆ ತನ್ನ ಆಕ್ಷೇಪ ಸಲ್ಲಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry