ಸಿಬಿಡಿಟಿ ಸಂಕಲ್ಪ: ಕಪ್ಪು ಹಣ ಕಡಿವಾಣಕ್ಕೆ ಕ್ರಮ

ಶನಿವಾರ, ಮೇ 25, 2019
32 °C

ಸಿಬಿಡಿಟಿ ಸಂಕಲ್ಪ: ಕಪ್ಪು ಹಣ ಕಡಿವಾಣಕ್ಕೆ ಕ್ರಮ

Published:
Updated:

ನವದೆಹಲಿ (ಪಿಟಿಐ): ಬಾಬಾ ರಾಮದೇವ್, ಅಣ್ಣಾ ಹಜಾರೆ ನಡೆಸುತ್ತಿರುವ ಚಳವಳಿಯ ಫಲಶುೃತಿ ಎನ್ನುವಂತೆ ಸ್ವದೇಶ ಹಾಗೂ ವಿದೇಶಗಳಲ್ಲಿರುವ ಕಪ್ಪು ಹಣಕ್ಕೆ ಕಡಿವಾಣ ಹಾಕಲು ದೃಢ ಸಂಕಲ್ಪ ಮಾಡಿದಂತಿರುವ  ಸರ್ಕಾರ ಈ ಸಂಬಂಧ ಹೊಸ ಕಾನೂನು ಜಾರಿಗೆ ತರುವುದು ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.ಕಪ್ಪು ಹಣದ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನೇರ ತೆರಿಗೆಗಳ ಕೇಂದ್ರಿಯ ಮಂಡಳಿ (ಸಿಬಿಡಿಟಿ) ರಚಿಸಿದ್ದ ಸಮಿತಿ ನೀಡಿರುವ 66 ಪುಟಗಳ ಸಮಗ್ರ ವರದಿಯಲ್ಲಿ ಈ ಪ್ರಸ್ತಾಪ ಮಾಡಲಾಗಿದ್ದು, ತೆರಿಗೆ ತಪ್ಪಿಸಿಕೊಳ್ಳುವ ವ್ಯಕ್ತಿ ಇಲ್ಲವೇ ಸಂಸ್ಥೆಗಳ ಮೇಲೆ ಹೊಸ ಹೊಸ ದಂಡ ವಿಧಿಸುವ ಅಗತ್ಯ ಪ್ರತಿಪಾದಿಸಲಾಗಿದೆ.ಈಗಿರುವ ಕಾನೂನಿಂದ ಕಪ್ಪು ಹಣದ ಚಲಾವಣೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ, ಹಾಗಾಗಿ ಈ ಸಂಬಂಧ ಹೊಸ ಕಾನೂನನ್ನು ಜಾರಿಗೆ ತರಬೇಕಾದ ಅಗತ್ಯ ಇದೆ. ತೆರಿಗೆ ತಪ್ಪಿಸಿಕೊಳ್ಳುವ ವ್ಯಕ್ತಿಗಳ ವಿರುದ್ಧ ಕಡ್ಡಾಯವಾಗಿ ದಂಡ ವಿಧಿಸುವುದು ಅಗತ್ಯವಿದೆ ಎಂದು ಸಮಿತಿ ಹೇಳಿದೆ.ಆಸ್ತಿ ವರ್ಗಾವಣೆ, ಚಿನ್ನ, ಬೆಳ್ಳಿ, ಮಾರುಕಟ್ಟೆಯಲ್ಲಿ ನಡೆಯುವ ಹಣದ ಅಕ್ರಮ ಚಲಾವಣೆ  ಪತ್ತೆಹಚ್ಚಿ, ಅಂತಹ ವ್ಯಕ್ತಿಗಳ ವಿರುದ್ಧ ಕಡ್ಡಾಯವಾಗಿ ದಂಡ ವಿಧಿಸಬೇಕಿದೆ. ಹೂಡಿಕೆ ವಿಷಯದಲ್ಲೂ ಸರ್ಕಾರಕ್ಕೆ ತೆರಿಗೆ ವಂಚಿಸುವುದರ ವಿರುದ್ಧ ಪರಿಣಾಮಕಾರಿ ಕಾನೂನು ಜಾರಿಗೆ ತರಬೇಕಾಗಿದೆ ಎಂದು ಸಿಬಿಡಿಟಿ ಅಧ್ಯಕ್ಷ ಲಕ್ಷ್ಮಣ್ ದಾಸ್ ಅಭಿಪ್ರಾಯಪಟ್ಟಿದ್ದಾರೆ.ಕಪ್ಪು ಹಣದ ನಿಯಂತ್ರಣದ ಕುರಿತು ಸಲಹೆ ಸೂಚನೆ ನೀಡಿರುವ ಸಮಿತಿ, ಇಂತಹ ಹಣದ ಪ್ರಮಾಣದ ಕುರಿತು ಮಾತ್ರ ಖಚಿತ ಮಾಹಿತಿ ನೀಡಿಲ್ಲ. `ನಮ್ಮ ಆರ್ಥಿಕತೆಯಲ್ಲಿ ಕಪ್ಪು ಹಣದ ಪ್ರಮಾಣ ಹೇರಳವಾಗಿದೆಯಾದರೂ ಆ ಹಣ ಯಾವ ಪ್ರಮಾಣದಲ್ಲಿ ಇದೆ ಎಂಬುದನ್ನು ಮಾತ್ರ ನಿರ್ದಿಷ್ಟವಾಗಿ ತಿಳಿಸಲು ಆಗದು~ ಎಂದಿದೆ.ವಿದೇಶಿ ಬ್ಯಾಂಕುಗಳಲ್ಲಿರುವ ಭಾರತದ ಕಪ್ಪು ಹಣವನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಲು ಕೆಲ ಸಾಮಾಜಿಕ ಕಾರ್ಯಕರ್ತರು ಮುಂದಿಟ್ಟಿರುವ ಬೇಡಿಕೆ ಕುರಿತು ಪ್ರತಿಕ್ರಿಯಿಸಿರುವ ಸಮಿತಿ `ಈ ರೀತಿ ಘೋಷಣೆ ಮಾಡುವುದರಿಂದ ಯಾವ ಉದ್ದೇಶವೂ ಈಡೇರುವುದಿಲ್ಲ~ ಎಂದಿದೆ.

ವಿದೇಶಗಳಲ್ಲಿ 14 ಆದಾಯ ತೆರಿಗೆ ಘಟಕ

ನವದೆಹಲಿ (ಪಿಟಿಐ): ವಿದೇಶಿ ಬ್ಯಾಂಕುಗಳಲ್ಲಿರುವ ಭಾರತದ ಕಪ್ಪು ಹಣ ಹಾಗೂ ವಿದೇಶಗಳಿಂದ ಹರಿದುಬರುವ ಅಕ್ರಮ ಹಣದ ಕುರಿತು ನಿಗಾ ಇಡಲು ಸರ್ಕಾರ, ಸ್ವಿಟ್ಜರ್‌ಲೆಂಡ್ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ 14 ಆದಾಯ ತೆರಿಗೆ ಕಚೇರಿಯ ಘಟಕಗಳನ್ನು ತೆರೆಯಲಿದೆ.ಯಾವ ಯಾವ ದೇಶಗಳಲ್ಲಿ ಇಂತಹ ಘಟಕಗಳನ್ನು ತೆರೆಯಬೇಕು ಎಂಬುದರ ಕುರಿತು ಹಣಕಾಸು ಸಚಿವಾಲಯ ಈಚೆಗೆ ವಿದೇಶ ವ್ಯವಹಾರಗಳ ಸಚಿವಾಲಯಕ್ಕೆ ಪ್ರಸ್ತಾವನೆಯೊಂದನ್ನು ಕಳುಹಿಸಿದೆ.2012-13ರ ಬಜೆಟ್ ಭಾಷಣದಲ್ಲಿ ಹಿಂದಿನ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಇಂತಹ ವಿದೇಶಿ ಘಟಕಗಳ ಆರಂಭದ ಕುರಿತು ಪ್ರಸ್ತಾಪಿಸಿದ್ದರು. ಭಾರತೀಯ ಮೂಲದ ವ್ಯಕ್ತಿಗಳು ಇಲ್ಲವೇ ಸಂಸ್ಥೆಗಳು ವಿದೇಶಗಳಲ್ಲಿ ಹೂಡುವ ಬಂಡವಾಳದ ಕುರಿತು ಸಮಗ್ರ ಹಣಕಾಸು ಮಾಹಿತಿಯನ್ನು ಇಂತಹ ಘಟಕಗಳು ನೀಡುತ್ತವೆ. ಈಗಾಗಲೆ ಸೈಪ್ರಸ್, ಫ್ರಾನ್ಸ್, ಜರ್ಮನಿ, ನೆದರ್‌ಲೆಂಡ್, ಜಪಾನ್, ಯುಎಇ, ಇಂಗ್ಲಂಡ್, ಅಮೆರಿಕ, ಮಾರಿಷಸ್ ಹಾಗೂ ಸಿಂಗಪುರಗಳಲ್ಲಿ ಭಾರತ ವರಮಾನ ತೆರಿಗೆ ವಿದೇಶಿ ಘಟಕಗಳನ್ನು ಹೊಂದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry