ಸಿಬ್ಬಂದಿಯೇ ಸಂಸ್ಥೆಯ ಜೀವಾಳ: ಶಿವಕುಮಾರ

7

ಸಿಬ್ಬಂದಿಯೇ ಸಂಸ್ಥೆಯ ಜೀವಾಳ: ಶಿವಕುಮಾರ

Published:
Updated:

ಹಾರೂಗೇರಿ: `ಸಂಘ ಸಂಸ್ಥೆಯು ಅಭಿವೃದ್ಧಿಯತ್ತ ಸಾಗಬೇಕಾದರೆ ಸಂಸ್ಥೆಯ ಸಿಬ್ಬಂದಿ ಪ್ರಮುಖ ಪಾತ್ರವಹಿಸುತ್ತಾರೆ. ಅವರ ಕಾರ್ಯದಕ್ಷತೆಯಿಂದ ಸಂಸ್ಥೆ ಲಾಭಗಳಿಸುತ್ತದೆ~ ಎಂದು  ಬೆಳಗಾವಿಯ ಕೆ.ಐ.ಸಿ.ಎಂ. ತರಬೇತಿ ಕಾಲೇಜಿನ ಪ್ರಾಚಾರ್ಯ ಎನ್.ಎಂ.ಶಿವಕುಮಾರ ಹೇಳಿದರು.   ಇಲ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನ ಸಭಾಭವನದಲ್ಲಿ ಜರುಗಿದ ರಾಷ್ಟ್ರೀಯ ಸಹಕಾರಿ ಯೂನಿಯನ್ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ  ಹಾಗೂ ಬೆಳಗಾವಿಯ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯೋನೆಜಮೆಂಟ್ ಸಹಯೋಗದಲ್ಲಿ ನಡೆಯುತ್ತಿರುವ  ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಸಿಬ್ಬಂದಿಗಳಿಗೆ ಐದು ದಿನಗಳ ಅಲ್ಪಾವಧಿ ತರಬೇತಿ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.   ಜಗತ್ತಿನಲ್ಲಿ ಮಾನವ ಸಂಪತ್ತು ಅತಿ ಶ್ರೇಷ್ಠವಾದದ್ದು. ಆದ್ದರಿಂದ ಸಿಬ್ಬಂದಿಗಳ ಕಾರ್ಯದಕ್ಷತೆಯನ್ನು ಹೆಚ್ಚಿಸಲು ಅವರಿಗೆ ಸೂಕ್ತವಾದ ತರಬೇತಿ ನೀಡುವುದು ಅವಶ್ಯ.  ಕಾರ್ಯದರ್ಶಿ ಹಾಗೂ ಸಿಬ್ಬಂದಿಗಳಿಗೆ ಸಹಕಾರಿ ತತ್ವದಡಿ ಬರುವ ನಿಯಮಗಳನ್ನು  ತರಬೇತಿಯಲ್ಲಿ ತಿಳಿಸಿಕೊಡಲಾಗುವುದು.  ಕರ್ನಾಟಕ ರಾಜ್ಯ ಸಹಕಾರಿ ಸಂಘಗಳ ಕಾಯ್ದೆ 1959  ಅನ್ವಯ ಸಂಘ ಸಂಸ್ಥೆಗಳು ನಿರ್ವಹಿಸಬೇಕಾದ ಕಾರ್ಯಗಳನ್ನು ವಿವರಿಸಿದರು.    ಅಧ್ಯಕ್ಷತೆ ವಹಿಸಿದ್ದ ಬಿ.ಡಿ.ಸಿ.ಸಿ. ಬ್ಯಾಂಕ್‌ನ ತಾಲ್ಲೂಕ ನಿಯಂತ್ರಣಾಧಿಕಾರಿ ಎಂ.ಎಸ್.ಬಳ್ಳೊಳ್ಳಿ ಮಾತನಾಡಿ, ಸಾಮಾನ್ಯ ನಾಗರಿಕರಿಗೆ ಜೀವನದಲ್ಲಿ ದಿನನಿತ್ಯದ ಕಾರ್ಯಗಳಲ್ಲಿ ಆಗುತ್ತಿರುವ ತೊಂದರೆಗಳ ಕುರಿತು ತಿಳುವಳಿಕೆ ಅವಶ್ಯವಾಗಿದೆ. 1904ರಿಂದ 1930 ರವರೆಗೆ ಸಹಕಾರ ಚಳುವಳಿ ಪ್ರಾರಂಭವಾಗಿ ಪ್ರತಿಹಳ್ಳಿಗಳಲ್ಲಿ ಸಹಕಾರಿ ಸಂಘಗಳಿಂದ ಸಾಲ ಸಿಗುವಂತಾಯಿತು.ಪಿ.ಕೆ.ಪಿ.ಎಸ್. ಬ್ಯಾಂಕ ಅಧ್ಯಕ್ಷ ಬಸನಗೌಡ ಆಸಂಗಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೊ. ಎಸ್.ಎಸ್. ಬಾಸಿಂಗೆ ತರಬೇತಿದಾರರಿಗೆ  ಉಪನ್ಯಾಸ ನೀಡಿದರು. ರಾಯಬಾಗ  ಆಹಾರ ಮತ್ತು ನಾಗರಿಕ ಸರಬರಾಜು ಅಧಿಕಾರಿ ಎಂ.ಎ. ಕಿತ್ತೂರ,  ಲೆಕ್ಕ ಪರಿಶೋಧಕ ಅಶೋಕ ಮೇಟಿ, ಬ್ಯಾಂಕ್ ನಿರೀಕ್ಷಕ ಎ.ಬಿ.ರಾಚಪ್ಪನವರ, ಬಿ.ಡಿ.ಸಿ.ಸಿ.ಬ್ಯಾಂಕ್  ವ್ಯವಸ್ಥಾಪಕ ಕೆ.ಡಿ.ಹಳಂದಕರ, ಎಸ್.ಆರ್.ಲಗಳಿ, ಹಾಗೂ ತಾಲ್ಲೂಕಿನ ಎಲ್ಲ ಸಹಕಾರಿ ಸಂಘಗಳ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ಎನ್.ಎಂ.ಶಿವಕುಮಾರ ಸ್ವಾಗತಿಸಿದರು. ಶಿವಾನಂದ ಖೋತ ನಿರೂಪಿಸಿದರು. ಯಲ್ಲಪ್ಪ ಜಾಮಗೌಡರ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry