ಗುರುವಾರ , ಜೂನ್ 24, 2021
30 °C

ಸಿಬ್ಬಂದಿ ಎದುರೇ ಹಣ ದರೋಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ತಾಲ್ಲೂಕಿನ ಕೊರ್ಲಗುಂದಿ ಗ್ರಾಮದ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ ಸಿಬ್ಬಂದಿ ಕಣ್ತಪ್ಪಿಸಿ ತಮ್ಮ ಶಾಖೆಗೆ ಒಯ್ಯುತ್ತಿದ್ದ ₨ 30 ಲಕ್ಷ ಹಣದ ಚೀಲವನ್ನು ಆಗಂತುಕನೊಬ್ಬ ಎತ್ತಿಕೊಂಡು ಪರಾರಿಯಾಗಿರುವ ಘಟನೆ ಸೋಮವಾರ ಬೆಳಿಗ್ಗೆ ಇಲ್ಲಿ ಸಂಭವಿಸಿದೆ.



ಐಡಿಬಿಐ ಬ್ಯಾಂಕಿನಿಂದ ಹಣ ಪಡೆದು, ಕೊರ್ಲಗುಂದಿಗೆ ತೆರಳುವಾಗ ಕಾರು ಪಂಕ್ಚರ್‌ ಆಗಿದೆ. ದುರಸ್ತಿಗಾಗಿ ಗ್ಯಾರೇಜ್‌ನಲ್ಲಿ ನಿಲ್ಲಿಸಿದಾಗ ಕಾರ್‌ ಒಳಗಿದ್ದ ಹಣದ ಚೀಲವನ್ನು ಅಪರಿಚಿತ ವ್ಯಕ್ತಿ ಒಯ್ದಿದ್ದಾನೆ. ಇದನ್ನು ಗಮನಿಸಿದ ಸಿಬ್ಬಂದಿ ಬೆನ್ನತ್ತಿ ಹಿಡಿಯಲು ಯತ್ನಿಸಿದರೂ ಸಿಕ್ಕಿಲ್ಲ. ಸಮೀಪದಲ್ಲಿಯೇ ನಿಲ್ಲಿಸಿದ್ದ ಕಾರಿನಲ್ಲಿ ಪರಾರಿಯಾದ ಎಂದು ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ರಾಜಶೇಖರ್‌, ಗುಮಾಸ್ತೆ ಅರುಣಾ ಮತ್ತು ಚಾಲಕ ಗಾದಿಲಿಂಗಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ. ಗಾಂಧಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಕ್ಷಣ ಕಾರ್ಯೋನ್ಮುಖರಾದ ಪೊಲೀಸರು ಪ್ರತಿಯೊಂದು ವಾಹನವನ್ನು ತಪಾಸಣೆ ಮಾಡಿದರೂ ಹಣದೊಂದಿಗೆ ಪರಾರಿಯಾದ ವ್ಯಕ್ತಿ ಪತ್ತೆಯಾಗಲಿಲ್ಲ ಎಂದು ಡಿವೈಎಸ್‌ಪಿ ಟಿ.ಎಸ್‌. ಮುರುಗಣ್ಣನವರ್‌ ತಿಳಿಸಿದ್ದಾರೆ.



ಗ್ರಾಹಕರೊಬ್ಬರು ಶನಿವಾರ ಬ್ಯಾಂಕಿಗೆ ತೆರಳಿ ತಮ್ಮ ಠೇವಣಿ ವಾಪಸ್‌ ನೀಡುವಂತೆ ಕೇಳಿದ್ದರು. ಅಷ್ಟೊಂದು ಪ್ರಮಾಣದ ಹಣ ಶಾಖೆಯಲ್ಲಿ ಇರಲಿಲ್ಲ. ಹಾಗಾಗಿ ಬಳ್ಳಾರಿಯ ವಾಲ್ಮೀಕಿ ವೃತ್ತದಲ್ಲಿರುವ ಪ್ರವರ್ತಕ ಶಾಖೆಗೆ ಸೋಮವಾರ ಬಂದಿದ್ದ ಸಿಬ್ಬಂದಿ, ಅಲ್ಲಿಂದ ಚೆಕ್‌ ಪಡೆದು, ಪಕ್ಕದಲ್ಲಿರುವ ಐಡಿಬಿಐ ಬ್ಯಾಂಕ್‌ ಶಾಖೆಯಿಂದ ಹಣ ತೆಗೆದುಕೊಂಡು ಹೋಗುವಾಗ ಈ ಘಟನೆ ನಡೆದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.