ಸಿಬ್ಬಂದಿ ನೇಮಕ ಇಳಿಮುಖ

7

ಸಿಬ್ಬಂದಿ ನೇಮಕ ಇಳಿಮುಖ

Published:
Updated:

ನವದೆಹಲಿ (ಪಿಟಿಐ): ಮಂದಗತಿಯ ಆರ್ಥಿಕ ಪ್ರಗತಿಯಿಂದ ದೇಶದ ಉದ್ಯೋಗ ಕ್ಷೇತ್ರದಲ್ಲಿ ಹೊಸದಾಗಿ ಸಿಬ್ಬಂದಿ ನೇಮಕ ಮಾಡಿಕೊಳ್ಳುವುದರ ಪ್ರಮಾಣ ಕಳೆದ ಮೂರು ತಿಂಗಳಿಂದ ನಿರಂತರ ಇಳಿಕೆ ಕಾಣುತ್ತಿದೆ ಎಂದು ಉದ್ಯೋಗ ಮಾಹಿತಿ ತಾಣ `ನೌಕರಿ ಡಾಟ್ ಕಾಂ~ನ ಸಮೀಕ್ಷೆ ಹೇಳಿದೆ.ಸೆಪ್ಟೆಂಬರ್‌ನಲ್ಲಿನ ನೇಮಕಾತಿ ಅಂಕಿ -ಅಂಶ ಮಂಗಳವಾರ ಪ್ರಕಟಗೊಂಡಿದ್ದು, ಆಗಸ್ಟ್‌ಗೆ ಹೋಲಿಸಿದರೆ ಶೇ 1.2ರಷ್ಟು ಇಳಿಕೆ ಕಂಡಿದೆ. ಪುಣೆ, ಹೈದರಾಬಾದ್ ಹೊರತುಪಡಿಸಿದರೆ ಉಳಿದ ಮೆಟ್ರೊ ನಗರಗಳಲ್ಲಿ ಉದ್ಯೋಗಾವಕಾಶ ಗಣನೀಯವಾಗಿ ತಗ್ಗಿದೆ. ಬೆಂಗಳೂರು, ಚೆನ್ನೈನಲ್ಲಿ ಹೊಸ ನೇಮಕಾತಿ ಶೇ 5ರಷ್ಟು ತಗ್ಗಿದೆ. ಕೋಲ್ಕತ್ತದಲ್ಲಿ ಶೇ 17 ಮತ್ತು ದೆಹಲಿಯಲ್ಲಿ ಶೇ 1ರಷ್ಟು ಕುಸಿದಿದೆ. ಒಟ್ಟಾರೆ ಕಳೆದ ಮೂರು ತಿಂಗಳಲ್ಲಿ ಹೊಸ ನೇಮಕಾತಿ ಪ್ರಮಾಣ ಸರಾಸರಿ ಶೇ 6ರಷ್ಟು ಕುಸಿದಿದೆ ಎಂದು ಈ ಅಧ್ಯಯನ  ತಿಳಿಸಿದೆ.ಸೆಪ್ಟೆಂಬರ್‌ನಲ್ಲಿ ಮುಖ್ಯವಾಗಿ  ಮಾಹಿತಿ ತಂತ್ರಜ್ಞಾನ, ಹೊರಗುತ್ತಿಗೆ, ಬ್ಯಾಂಕಿಂಗ್ ವಲಯಗಳಲ್ಲಿ ನೇಮಕಾತಿ ತಗ್ಗಿದೆ. ಆದರೆ, ಕಾಮಗಾರಿ, ವಿಮೆ, ವಾಹನ ಉದ್ಯಮದಲ್ಲಿ ಉದ್ಯೋಗಾವಕಾಶ ಸ್ಥಿರವಾಗಿದೆ ಎಂದೂ ಈ ಅಧ್ಯಯನ ಹೇಳಿದೆ. ಆರ್ಥಿಕ ಚೇತರಿಕೆ ಇನ್ನಷ್ಟು ವೇಗ ಪಡೆದುಕೊಂಡರೆ ನೇಮಕಾತಿ ಪ್ರಕ್ರಿಯೆ ಚುರುಕುಗೊಳ್ಳಬಹುದೆಂದು `ಇನ್ಫೋ ಎಡ್ಜ್  ಇಂಡಿಯ~ದ  `ಸಿಇಒ~ ಹಿತೇಶ್ ಒಬೆರಾಯ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry