ಸಿಬ್ಬಂದಿ ಮಾತೇ ಕೇಳುತ್ತಿಲ್ಲ; ಅಧ್ಯಕ್ಷೆ ಅಳಲು!

7

ಸಿಬ್ಬಂದಿ ಮಾತೇ ಕೇಳುತ್ತಿಲ್ಲ; ಅಧ್ಯಕ್ಷೆ ಅಳಲು!

Published:
Updated:
ಸಿಬ್ಬಂದಿ ಮಾತೇ ಕೇಳುತ್ತಿಲ್ಲ; ಅಧ್ಯಕ್ಷೆ ಅಳಲು!

ಕುಷ್ಟಗಿ:  ಪುರಸಭೆ ವ್ಯಾಪ್ತಿಯ 8 ಮತ್ತು 9ನೇ ವಾರ್ಡ್‌ಗಳು ಸಂಪರ್ಕಿಸುವಲ್ಲಿನ ಚರಂಡಿ ಹಾಳಾಗಿದ್ದು ಭಾನುವಾರ ಮಧ್ಯಾಹ್ನ ಮಳೆ ಸುರಿದಾಗ ಅದರೊಂದಿಗೆ ಚರಂಡಿಯಲ್ಲಿನ ಕೊಳೆಚೆಯಲ್ಲ ಇನಾಯತ್ ಕಾಯಿಗಡ್ಡಿ ಎಂಬುವವ ಮನೆಗೆ ಪ್ರವಾಹರೂಪದಲ್ಲಿ ನುಗ್ಗಿದ್ದರಿಂದ ಅವರ ಕುಟುಂಬ ತೊಂದರೆಗೀಡಾದ ಘಟನೆ ಬೆಳಕಿಗೆ ಬಂದಿದೆ.ಚರಂಡಿ ನೀರು ಹೊಕ್ಕಿದ್ದರಿಂದ ಮನೆಯಲ್ಲಿದ್ದ ಶಾಲಾ ಪಠ್ಯಮಕ್ಕಳ ಪುಸ್ತಕಗಳು, ಸ್ವಸಹಾಯ ಸಂಘದಲ್ಲಿ ಸಾಲ ಪಡೆದು ಮಗಳ ಬಿಬಿಎಂ ವಿದ್ಯಭ್ಯಾಸಕ್ಕೆ ಖರೀದಿಸಿದ ಬೆಲೆಬಾಳುವ ಪುಸ್ತಕಗಳು, ಆಹಾರಧಾನ್ಯ, ಮೊಬೈಲ್ ಇತರೆ ವಸ್ತುಗಳು ಸಂಪೂರ್ಣ ಹಾಳಾಗಿದ್ದು ಹೊರೆ ಹೊರಲಾದಷ್ಟು ಹಾನಿ ಸಂಭವಿಸಿದೆ ಎಂದು ಮನೆಯವರು ಹೇಳಿದರು.

 

`ನಾನು ಖಾಸಗಿ ವಾಹನ ಚಾಲಕ, ಹಪ್ಪಳ ಮಾರಿ ಜೀವನ ಸಾಗಿಸುತ್ತೇವೆ, ಬೇರೆ ಆದಾಯವಿಲ್ಲ, ಇದ್ದುದೆಲ್ಲ ಹಾಳಾಗಿದೆ, ಮಕ್ಕಳನ್ನು ಶಾಲೆಗೆ ಕಳಿಸುವುದು ಹೇಗೆ ಎಂಬ ಚಿಂತೆ ಎದುರಾಗಿದೆ, ಇಂಥ ಪರಿಸ್ಥಿತಿ ಪುನಃ ಎದುರಾದರೆ ಹೇಗೆ ಎಂದು ದಿಕ್ಕು ತೋಚುತ್ತಿಲ್ಲ~ ಎಂದು ಪುರಸಭೆಗೆ ಬಂದು ಘಟನೆಯನ್ನು ವಿವರಿಸಿ ಅಧ್ಯಕ್ಷೆ ಮುಂದೆ ಇನಾಯತ್ ಕಾಯಿಗಡ್ಡಿ ದಂಪತಿ ಗೋಳಿಟ್ಟರು.ಸಮಸ್ಯೆ ಆಲಿಸಿದ ಅಧ್ಯಕ್ಷೆ ಕಾಳಮ್ಮ ಬಡಿಗೇರ, ಮುಖ್ಯಾಧಿಕಾರಿ ಮಹದೇವ ಬಿಸೆ, ಎಂಜಿನಿಯರ್‌ರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು. ಅಲ್ಲದೇ ಸದರಿ ಚರಂಡಿಗೆ ತಕ್ಷಣ ಸ್ಲ್ಯಾಬ್ ಅಳವಡಿಸಿ ನೀರು ಸರಾಗವಾಗಿ ಹರಿದುಹೋಗುವ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು.ಕೆಲಸ ಗುತ್ತಿಗೆ ಹಿಡಿದವರು ಕಳಪೆ ಕೆಲಸ ನಡೆಸಿದ್ದರಿಂದ ಚರಂಡಿ ಕೆಲ ದಿನಗಳಲ್ಲೇ ಒಡೆದು ಹೋಗಿದೆ, ಒಂದೆ ಸ್ಥಳದಲ್ಲಿ ಎರಡು ಮೂರು ಚರಂಡಿಗಳು ಸೇರುವುದರಿಂದ ಸಾಕಷ್ಟು ನೀರು ಹರಿದುಬರುತ್ತದೆ. ಆದರೆ ಚರಂಡಿ ಮುರಿದು ಹಾಳಾಗಿದ್ದರಿಂದ ಕೊಳೆಯಲ್ಲ ಅಲ್ಲೇ ಮಡುಗಟ್ಟುತ್ತಿದೆ ಎನ್ನಲಾಗಿದೆ.

 

ಈ ಬಗ್ಗೆ ಕಳೆದ ಮೂರು ತಿಂಗಳಿನಿಂದ ಹೇಳುತ್ತ ಬಂದರೂ ಪುರಸಭೆ ಗಮನಹರಿಸಿಲ್ಲ ಎಂದು ಅಲ್ಲಿಯ ಜನ ಅಧ್ಯಕ್ಷೆ ಮುಂದೆ ದೂರಿದರು.ನಂತರ ಮಾತನಾಡಿದ ಅಧ್ಯಕ್ಷೆ ಕಾಳಮ್ಮ ಬಡಿಗೇರ, `ನಾನೂ ಎಷ್ಟಂತ ಹೇಳ್ರಿ, ಕಚೇರ‌್ಯಾಗಿನ ಕೆಲ್ಸ ಮಾಡೋರು, ಸಿಬ್ಬಂದಿ ಯಾರೂ ನನ್ನ ಮಾತ ಕೇಳೊಲ್ರು, ನನ್ಗೂ ಸಾಕಾಗೇತಿ ರಾಜೀನಾಮಿಕೊಟ್ಟು ಮನ್ಯಾಗಿರಬೇಕಂತ ಮಾಡೀನಿ....~ ಎಂದು ಹೇಳಿದ್ದು ಅಚ್ಚರಿ ಮೂಡಿಸಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry