ಸೋಮವಾರ, ಮೇ 17, 2021
31 °C

ಸಿಬ್ಬಂದಿ ಸಮಯ ಪ್ರಜ್ಞೆ: 64 ನವಜಾತ ಶಿಶುಗಳ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುವಾಹಟಿ (ಐಎಎನ್‌ಎಸ್): ತುರ್ತು ನಿಗಾ ಘಟಕದ ಉದ್ಯೋಗಿಗಳ ಸಮಯಪ್ರಜ್ಞೆಯಿಂದಾಗಿ ಭಾರಿ ದುತಂತವೊಂದು ತಪ್ಪಿ 64 ನವಜಾತ ಶಿಶುಗಳು ಸಾವಿನ ದವಡೆಯಿಂದ ಪಾರಾದ ಘಟನೆ ಶನಿವಾರ ಇಲ್ಲಿನ ಆಸ್ಪತ್ರೆಯಲ್ಲಿ ನಡೆದಿದೆ.ಗುವಾಹಟಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ (ಜಿಎಂಸಿಎಚ್) ಶನಿವಾರ ಬೆಳಗಿನ ಜಾವ ಸುಮಾರು 1 ಗಂಟೆ ಹೊತ್ತಿಗೆ ಈ ಘಟನೆ ನಡೆದಿದೆ.`ಹವಾನಿಯಂತ್ರಿತ ಘಟಕವೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ದಟ್ಟ  ಹೊಗೆ ಕಾಣಿಸಿಕೊಂಡಿತು. ಇದು ಆಸ್ಪತ್ರೆಯ ಇತರ ವಿಭಾಗಕ್ಕೂ ಆವರಿಸಿದಾಗ ಅಲ್ಲಿದ್ದ ಉದ್ಯೋಗಿಗಳು ಕೂಡಲೇ ಎಚ್ಚೆತ್ತು ತೀವ್ರ ನಿಗಾ ಘಟಕದಲ್ಲಿದ್ದ 64 ಕಂದಮ್ಮಗಳನ್ನು ಇನ್ನೊಂದು ಕೊಠಡಿಗೆ ಸ್ಥಳಾಂತರಿಸಿದರು. ಕೊಂಚ ತಡ ಮಾಡಿದ್ದರೂ ಭಾರಿ ಅನಾಹುತ ಆಗುತ್ತಿತ್ತು~ ಎಂದು ಪ್ರಾಂಶುಪಾಲರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.