ಮಂಗಳವಾರ, ಮೇ 11, 2021
19 °C

ಸಿಮೆಂಟ್ ಗುಣ-ವೈವಿಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಮೆಂಟ್ ಸಹ ಹವಾಗುಣಕ್ಕೆ ತಕ್ಕಂತೆ ಪ್ರತಿಕ್ರಿಯಿಸುತ್ತದೆ. ಹಾಗಾಗಿಯೇ ಸಿಮೆಂಟ್ ಕಂಪನಿಗಳು ಆಯಾ ಪ್ರದೇಶಕ್ಕೆ ತಕ್ಕಂತಹ ಸಿಮೆಂಟ್ ತಯಾರಿಸಲು ಆರಂಭಿಸಿವೆ.ವಾತಾವರಣದಲ್ಲಿ ಹೆಚ್ಚು ತೇವಾಂಶ ಮತ್ತು ಉಪ್ಪಿನಂಶವಿರುವ ಕರಾವಳಿ ಪ್ರದೇಶಕ್ಕಾಗಿಯೇ ಈಗ ಪ್ರತ್ಯೇಕ ಬಗೆಯ ಸಿಮೆಂಟ್ ಮಾರುಕಟ್ಟೆಗೆ ಇತ್ತೀಚೆಗೆ ಬಿಡುಗಡೆಯಾಗಿದೆ.ಮನೆಗಳ ನಿರ್ಮಾಣದಲ್ಲಿ ಬಳಸುವ ಆರ್ಡಿನರಿ ಪೋರ್ಟ್‌ಲ್ಯಾಂಡ್ ಸಿಮೆಂಟ್(ಒಪಿಸಿ) ಮೂರು ದರ್ಜೆ(ಗ್ರೇಡ್)ಗಳಲ್ಲಿ ದೊರೆಯುತ್ತದೆ.33, 43 ಮತ್ತು 53 ಗ್ರೇಡ್‌ನಲ್ಲಿ ಈ ಸಿಮೆಂಟ್ ಲಭ್ಯವಿದೆ.ಸಾಮಾನ್ಯವಾದ 33 ಗ್ರೇಡ್‌ನ(ಒಪಿಸಿ) ಸಿಮೆಂಟು ದೇಶದಲ್ಲಿ ಮೊದಲು ಹೆಚ್ಚು ಪ್ರಮಾಣದಲ್ಲಿ ಬಳಕೆಯಾಗುತ್ತಿತ್ತು. ಆದರೆ, 43 ಗ್ರೇಡ್ ಸಿಮೆಂಟ್ ಬಂದ ನಂತರ ಕಟ್ಟಡ ನಿರ್ಮಾಣದಲ್ಲಿ 33 ಗ್ರೇಡ್ ಬಳಕೆ ಪ್ರಮಾಣ ಬಹಳ ಕಡಿಮೆಯಾಯಿತು ಎನ್ನುತ್ತಾರೆ ಬೆಂಗಳೂರಿನ ಎಂಜಿನಿಯರ್ ಜೇ.

ಈವರೆಗೂ ಬೆಂಗಳೂರು, ಮೈಸೂರು ಸೇರಿದಂತೆ 800ಕ್ಕೂ ಅಧಿಕ ಮನೆಗಳಿಗೆ ಯೋಜನೆ ರೂಪಿಸಿ ನಿರ್ಮಾಣವನ್ನೂ ಕೈಗೊಂಡಿರುವ ಈ ಅನುಭವಿ ಎಂಜಿನಿಯರ್ ಹೇಳುವುದು, `ಕಟ್ಟಡ ನಿರ್ಮಾಣ, ತಾರಸಿ ಎಲ್ಲ ಕೆಲಸಕ್ಕೂ ನಾವಂತೂ ಹೆಚ್ಚು 43 ಗ್ರೇಡ್ ಸಿಮೆಂಟನ್ನೇ ಬಳಸುತ್ತೇವೆ.ಕೆಲವರು 53 ಗ್ರೇಡ್ ಸಿಮೆಂಟ್ ಬಳಸಬಹುದಲ್ಲ ಎನ್ನುತ್ತಾರೆ. ಆದರೆ ಅದು ಕ್ಷಿಪ್ರಗತಿಯಲ್ಲಿ ಸೆಟ್ಟಿಂಗ್ ಆಗುತ್ತದೆ. ಅಷ್ಟೇ ಹೆಚ್ಚು ಪ್ರಮಾಣದಲ್ಲಿ ಕ್ಯೂರಿಂಗ್ ಸಹ ಕೇಳುತ್ತದೆ. ಕ್ಯೂರಿಂಗ್ ಸರಿಯಾಗಿ ಮಾಡದಿದ್ದಲ್ಲಿ ಗೋಡೆಯಲ್ಲಿ ಸಣ್ಣ ಬಿರುಕು ಬರುವ ಸಾಧ್ಯತೆ ಇರುತ್ತದೆ~.

`ನಾವು ಐಎಸ್‌ಐ ಗುರುತು ಇರುವ 43 ಗ್ರೇಡ್ ಸಿಮೆಂಟನ್ನೇ ಬಳಸುತ್ತೇವೆ. ಹಾಗಾಗಿ ನಾವು ನಿರ್ಮಿಸುವ  ಮನೆಗಳಿಗೆ ದೀರ್ಘ ಕಾಲದ ಭರವಸೆಯನ್ನೂ ಕೊಡುತ್ತೇವೆ~ ಎನ್ನುತ್ತಾರೆ ಅವರು.30-40, 30-50, 40-70, 50-80 ಅಡಿ ಉದ್ದ-ಅಗಲದ ನಿವೇಶನಗಳಲ್ಲಿ ಮನೆ ಮಾಲೀಕರ ಬೇಡಿಕೆ, ಆಸಕ್ತಿ, ಇಚ್ಛೆಗೆ ಅನುಗುಣವಾಗಿ ಮನೆಗಳನ್ನು ನಿರ್ಮಿಸಿಕೊಟ್ಟಿರುವ ಇವರು, ಹೆಚ್ಚಾಗಿ ಎಸಿಸಿ, ಎಲ್ ಅಂಡ್ ಟಿ, ಜುವಾರಿ, ಪ್ರಿಯಾ ಗೋಲ್ಡ್, ಭಾರ್ತಿ ಕಂಪನಿಯ 43 ಗ್ರೇಡ್ ಸಿಮೆಂಟನ್ನೇ ಖರೀದಿಸುವುದಾಗಿ ಹೇಳುತ್ತಾರೆ.43 ಗ್ರೇಡ್ ಸಿಮೆಂಟ್ ಬಳಸಿದರೂ ಮೆಸನರಿ ಕೆಲಸದಲ್ಲಿ 7-8ದಿನ, ಆರ್‌ಸಿಸಿ ಕೆಲಸಕ್ಕೆ 14ರಿಂದ 15ದಿನ ಕ್ಯೂರಿಂಗ್ ಮಾಡುವುದು ಉತ್ತಮ. 53 ಗ್ರೇಡ್ ಸಿಮೆಂಟ್ ಕೆಲಸಕ್ಕೂ ಇಷ್ಟೇ ಅವಧಿ ಕ್ಯೂರಿಂಗ್ ಅಗತ್ಯ. ಆದರೆ, 53 ಗ್ರೇಡ್ ಸಿಮೆಂಟ್ ಬಳಸಿದ್ದಲ್ಲಿ ಕ್ಯೂರಿಂಗ್ ಬಹಳ ನಿಯಮಿತವಾಗಿ ಮಾಡಲೇಬೇಕು ಎಂದು ಸ್ಪಷ್ಟಪಡಿಸುತ್ತಾರೆ.ಬೆಂಗಳೂರಿನಲ್ಲಿ 43 ಗ್ರೇಡ್ ಸಿಮೆಂಟ್‌ನ 50 ಕೆ.ಜಿ. ಚೀಲದ ಬೆಲೆ ಸದ್ಯ 330ರಿಂದ 350ರವರೆಗೂ ಇದೆ. 100-200 ಚೀಲಗಳ ಲೆಕ್ಕದಲ್ಲಿ ಸಗಟು ಖರೀದಿ ಮಾಡಿದರೆ 330ರಿಂದ 335 ರೂಪಾಯಿ ಧಾರಣೆಯಲ್ಲಿ 43 ಗ್ರೇಡ್ ಸಿಮೆಂಟ್ ಸಿಗುತ್ತದೆ. ಚಿಲ್ಲರೆಯಾಗಿ ಕೊಳ್ಳುವುದಾದರೆ 350 ರೂಪಾಯಿವರೆಗೂ ಕೊಡಬೇಕಾಗುತ್ತದೆ ಎನ್ನುತ್ತಾರೆ.20 ಲಕ್ಷ ರೂಪಾಯಿಯಿಂದ 2 ಕೋಟಿ ರೂಪಾಯಿವರೆಗೂ ಮನೆ- ಬಂಗಲೆಗಳನ್ನು ನಾವು ನಿರ್ಮಿಸಿ ಕೊಡುತ್ತೇವೆ. ಹಾಗಾಗಿ ನಾವು ಸಗಟು ಲೆಕ್ಕದಲ್ಲಿಯೇ ಸಿಮೆಂಟ್ ಖರೀದಿ ಮಾಡುತ್ತೇವೆ. ಅದರಿಂದ ನಮಗೆ ನಿರ್ಮಾಣ ವೆಚ್ಚದಲ್ಲಿ ಸಾಕಷ್ಟು ಹಣದ ಉಳಿತಾಯವೂ ಆಗುತ್ತದೆ ಎಂದು ಕಟ್ಟಡ ನಿರ್ಮಾಣ ಕ್ಷೇತ್ರದ ಕೆಲವು ಅನುಭವ ಹಂಚಿಕೊಂಡರು. ಸಿಮೆಂಟ್ ಖರೀದಿ-ಸಂಗ್ರಹ

-50 ಕೆ.ಜಿ. ತೂಕದ ಚೀಲ-ಸಿಮೆಂಟ್ ಚೀಲ ಸಾಮಾನ್ಯವಾಗಿ ಸಿಂಥೆಟಿಕ್ ಜ್ಯೂಟ್ ಅಥವಾ ಪಾಲಿಪ್ರೊಪಿಲೀನ್‌ನಲ್ಲಿ ತಯಾರಿಸಿದ್ದಾಗಿರುತ್ತದೆ-ಪ್ರತಿ ಚೀಲದ ಮೇಲೆಯೂ ತಯಾರಿಸಿದ ದಿನಾಂಕ ಮುದ್ರಿತವಾಗಿರುತ್ತದೆ(ಸಿಮೆಂಟ್ ತಯಾರಿಸಿ ತಿಂಗಳುಗಳೇ ಕಳೆದಿದ್ದರೆ ಅದರ ಗುಣಮಟ್ಟ ಕಡಿಮೆ ಆಗಿರುವ ಸಂಭವವಿದೆ. ಹಾಗಾಗಿ ಖರೀದಿಸುವ ಮುನ್ನ ಇದನ್ನು ಗಮನಿಸಬೇಕಾದ್ದು ಮುಖ್ಯ. ಆದಷ್ಟೂ 6 ವಾರಗಳಿಗಿಂತ ಇತ್ತೀಚಿಗೆ ತಯಾರಾದ ಸಿಮೆಂಟ್ ಖರೀದಿಸುವುದು ಉತ್ತಮ)-ಸಿಮೆಂಟ್ ಚೀಲಗಳ ಬಾಯಿಯನ್ನು ಯಂತ್ರದಿಂದಲೇ ಹೊಲಿಯಲಾಗಿರುತ್ತದೆ(ಕೈಯಲ್ಲಿ ಹೊಲಿದಿದೆ ಎಂದರೆ ಅದು ಕಲಬೆರಕೆಯೋ, ತೂಕದಲ್ಲಿ ಕಡಿಮೆಯೋ ಇರುವ ಸಂಭವವಿದೆ)-ಪ್ರತಿ ಚೀಲದ ಮೇಲೆಯೂ ಸಿಮೆಂಟ್ ತಯಾರಿಸಿದ ಕಂಪನಿಯ ಹೆಸರು, ಟ್ರೇಡ್‌ಮಾರ್ಕ್, ಗ್ರೇಡ್, ಯಾವ ತರಹದ ಸಿಮೆಂಟ್ ಎಂಬುದು ನಮೂದಾಗಿರುತ್ತದೆ-ಸಿಮೆಂಟ್ ಚೀಲಗಳನ್ನು ಒಂದರ ಮೇಲೆ ಒಂದರಂತೆ ಇಡುವುದಾದಲ್ಲಿ 10-12 ಚೀಲಗಳಿಗಿಂತ ಹೆಚ್ಚು ಎತ್ತರ ಇಡದೇ ಇರುವುದು ಕ್ಷೇಮ-ತೇವಾಂಶ ಇರದ ಒಣ ಪ್ರದೇಶದಲ್ಲಿಯೇ ಸಿಮೆಂಟ್ ಚೀಲಗಳನ್ನು ಸಂಗ್ರಹಿಸಿಡಬೇಕು. ಮರದ ಪಟ್ಟಿಗಳನ್ನಿಟ್ಟು ಅದರ ಮೇಲೆ ಚೀಲ ಇರಿಸುವುದು ಉತ್ತಮ-ಆಗ್ಗಾಗ್ಗೆ ಸಿಮೆಂಟ್ ಖರೀದಿಸಿದರೂ ಮೊದಲ ಖರೀದಿಸಿದ್ದನ್ನು ಮೊದಲ ಬಳಸುವ ಕ್ರಮ ಅನುಸರಿಸಿ-ತೇವಾಂಶ ಹೆಚ್ಚು ಇರುವಲ್ಲಿ, ಮಳೆಗಾಲದಲ್ಲಿ ಸಿಮೆಂಟ್ ಚೀಲಗಳ ಸಂಗ್ರಹದ ಮೇಲೆ ಪಾಲಿಥೀನ್ ಹೊದಿಕೆ ಮುಚ್ಚಿರಿ                                 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.