ಸಿಮೆಂಟ್ ಘಟಕ: ಕಾಡುಪ್ರಾಣಿಗಳ ನಿವಾಸ

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಸಿಮೆಂಟ್ ಘಟಕ: ಕಾಡುಪ್ರಾಣಿಗಳ ನಿವಾಸ

Published:
Updated:

ಸೇಡಂ: 1970ರ ದಶಕದಲ್ಲಿ ಸುಂದರ ನಗರ ಎಂದು ಪ್ರಖ್ಯಾತಿ ಹೊಂದಿದ್ದ ಸೇಡಂ ತಾಲ್ಲೂಕಿನ ಕುರಕುಂಟಾ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಸ್ವಾಮ್ಯದ ಸಿಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಸಿಸಿಐ) ಇಂದು ಕಾಡು ಪ್ರಾಣಿಗಳ ವಾಸದ ತಾಣವಾಗಿದೆ.ಕಂಪೆನಿ ಸಿಮೆಂಟ್ ಉತ್ಪಾದಿಸುವಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದ್ದು ಇಂದು ಎಲ್ಲಡೆಯೂ ಸ್ಮಶಾನ ವಾತಾವರಣ ನಿರ್ಮಾಣವಾಗಿದೆ.ಅಂದಿನ ದಿನಗಳಲ್ಲಿ ಸಂಪೂರ್ಣ ರಾತ್ರಿ ಓಡಾಡುತ್ತಿದ್ದ ಕಾರ್ಮಿಕರು ಮತ್ತು ವಾಹನಗಳಿಂದ ಕಾಲೊನಿಯಲ್ಲಿ ರಾತ್ರಿ ಒಂಟಿ ಮಹಿಳೆ ಓಡಾಡಲು ಯಾವ ಭಯ ಇರಲಿಲ್ಲ. ಆದರೆ ಇಂದು ಹಗಲು 12 ಗಂಟೆಗೆ ಓಡಾಡಲು ಅಸಾಧ್ಯ ಎನ್ನುವ ವಾತಾವರಣ ನಿರ್ಮಾಣವಾಗಿದೆ. ನಿಶಬ್ದ ವಾತಾವರಣ, ಬೆಳೆದ ಮರ ಗಿಡಗಳು ಭಯಾನಕ ವಾತಾವರಣ ನಿರ್ಮಿಸಿವೆ.  932 ಎಕರೆ ಫಲವತ್ತಾದ ಭೂಮಿ ಇಂದು ಹಾಳು ಕೊಂಪೆಯಾಗಿದೆ. ಜಮೀನು ನೀಡಿದ ರೈತರು ಎಂದು ಏನೆಲ್ಲವನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಈ ಕಡೆ ಕಂಪೆನಿ ಉದ್ಯೋಗ ನಿಂತಿತು. ಆ ಕಡೆ ಬಿತ್ತನೆ ಶಾಶ್ವತವಾಗಿ ಸ್ಥಗಿತಗೊಂಡಿತು.ಕಂಪೆನಿ ಮತ್ತು ಕಾಲೊನಿ ಸುತ್ತಲಿನ ಅನೇಕ ಗ್ರಾಮಸ್ಥರ ಬದುಕಿಗೆ ಆಶ್ರಯ ತಾಣವಾಗಿತ್ತು. ಇಂದು ಗ್ರಾಮಸ್ಥರನ್ನು ದೂರ ಮಾಡಿಕೊಂಡಿದೆ. ಸಿಮೆಂಟ್ ಉತ್ಪಾದಿಸಲು ಅವಶ್ಯ ಇರುವ ಕಚ್ಚಾ ಸಾಮಗ್ರಿ ನೀಲಿ ಬಣ್ಣದ ಸುಣ್ಣದ ಕಲ್ಲಿನ ಗಣಿ ವಿಶ್ವದಲ್ಲಿಯೇ ಅಗ್ರಗಣ್ಯ ಸ್ಥಾನ ಹೊಂದಿದೆ.  ನೂರಾರು ವರ್ಷಗಳು ಸಿಮೆಂಟ್ ಉತ್ಪಾದಿಸಲು ಪೂರೈಸುವ ಗಣಿ ಇಂದು ಕಂಪೆನಿ 25 ವರ್ಷಗಳಿಗೆ ಇತಿಶ್ರೀ ಹಾಡಿದ್ದು ಎಲ್ಲರಿಗೂ ಕಳವಳ ಉಂಟು ಮಾಡಿದೆ.ಕಾರಣ ಹಲವು ಪರಿಣಾಮ ಒಂದೇ ಎನ್ನುವಂತೆ ಕಂಪೆನಿ ತನ್ನ ಉತ್ಪಾದನೆ ನಿಲ್ಲಿಸಿ ನೌಕರರಿಗೆ ಕಡ್ಡಾಯ ನಿವೃತ್ತಿ ಮತ್ತು ಅಧಿಕಾರಿಗಳಿಗೆ ವರ್ಗಾವಣೆ ಎಂಬ ಮಂತ್ರದಿಂದ ಸುಂದರವಾದ ಮನೆಗಳನ್ನು ತೆರವುಗೊಳಿಸಿತು.

ಪ್ರಸಕ್ತ ತುಕ್ಕು ಹಿಡಿದ ಯಂತ್ರಗಳು, ನಿಶಬ್ದ ವಾತಾವರಣ, ಸೃಷ್ಟಿಗೊಂಡ ಭಯಾನಕ ವಾತಾವರಣಗಳ ಮಧ್ಯೆ ಪುನಶ್ಚೇತನಗೊಳ್ಳಲು ಆಧುನಿಕ ಯಂತ್ರಗಳ ಅಳವಡಿಕೆ ಮಾಡಿ ಕಟ್ಟಡಗಳಿಗೆ ಹೊಸರೂಪ ನೀಡಿದಾಗ ಮಾತ್ರ ಎಲ್ಲರ ನೆಮ್ಮದಿಯ ಬದುಕಿಗೆ ಮರಳಿ ಜೀವ ಬರಲು ಸಾಧ್ಯ.

 

ಈ ಕೆಲಸವನ್ನು ಈ ಭಾಗದ ಕೇಂದ್ರದ ಹಿರಿಯ ಜನಪ್ರತಿನಿಧಿಗಳು ಕೇಂದ್ರ ಸರ್ಕಾರದ ಗಮನ ಸೆಳೆಯಬೇಕು. ಕೊನೆ ಪಕ್ಷಕ್ಕೆ ಸೇಡಂ ಉಪ-ವಿಭಾಗದಲ್ಲಿ ಎಲ್ಲಡೆಯೂ ಹೊಸ ಹೊಸ ಸಿಮೆಂಟ್ ಕಂಪೆನಿಗಳು ತಲೆ ಎತ್ತಿ ಮುಂಬರುವ ವರ್ಷಗಳಲ್ಲಿ ಈ ಭಾಗದ ಫಲವತ್ತತೆ ಜಮೀನು ಹಾಳು ಮಾಡುವ ಬದಲು ಸಿಸಿಐ ಕಂಪನಿಗೆ ಮರುಜೀವ ತುಂಬುವಲ್ಲಿ ಖಾಸಗಿ ಸಂಸ್ಥೆಗಳಿಗೆ ಉತ್ತೇಜನ ನೀಡಬೇಕಾದದ್ದು ಇಂದಿನ ಅವಶ್ಯಕತೆ ಇದೆ.ಮೇಲಾಧಿಕಾರಿಗಳ ಇಚ್ಚಾಶಕ್ತಿ ಒಂದಡೆಯಾದರೆ ಜನಪ್ರತಿನಿಧಿಗಳು ಈ ಕಡೆ ಗಮನ ಹರಿಸದೇ ಕಾಲ ಕಳೆದದ್ದು ಇತಿಹಾಸ ಪುಟ ಸೇರಿದೆ ಎಂಬುದು ಅನೇಕ ಕಾರ್ಮಿಕರು ವಿಷಾದ ವ್ಯಕ್ತಪಡಿಸುತಾರೆ.್ತ ಇಂದಿಗೂ ಸಂಘಟನೆ ಮೂಲಕ ತನ್ನ ಬೇಡಿಕೆಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಹವಣಿಸುತ್ತಿದೆ.ಯಾವುದೇ ಬಲವಾದ ಕಾರಣ ಇಲ್ಲದೇ 1998 ರಿಂದ ಸ್ಥಗಿತಗೊಂಡ ಕಂಪೆನಿಯಲ್ಲಿ 430 ಕಾರ್ಮಿಕರು ದುಡಿಯುತ್ತಿದ್ದರು. ಇದರಲ್ಲಿ ಕೇವಲ 87 ಕಾರ್ಮಿಕರು ನಿವೃತ್ತಿಯ ಸೌಲಭ್ಯ ಪಡೆದರೆ ಉಳಿದ 343 ಕಾರ್ಮಿಕರು  ವಂಚಿತಗೊಂಡಿದ್ದಾರೆ.

`ಶ್ರಮಯೇವ ಜಯತೆ~ ಶಿರ್ಷಿಕೆ ಅಡಿಯಲ್ಲಿ ದುಡಿಯುವ ಕಾರ್ಮಿಕರು ಇಂದು ಅನಾಥರಾಗಿದ್ದಾರೆ. ಛಲ ಬಿಡದ ತ್ರೀವಿಕ್ರಮನಂತೆ ಕಳೆದ 14 ವರ್ಷಗಳ ಅಜ್ಞಾತ  ವಾಸದಲ್ಲಿ ಕಾಲ ಕಳೆದ ಕಾರ್ಮಿಕರು ಮರಳಿ ಬದುಕಿಗೆ ದಾರಿ ಹುಡುಕಲು ಮುಂದಾಗಿದ್ದಾರೆ.ಮುಚ್ಚಿರುವ ಸಿಸಿಐ ಘಟಕ ಪುನ: ಆರಂಭವಾಗಬೇಕು. 343 ಕಾರ್ಮಿಕರಿಗೆ ಮಂಜೂರಾದ ಗ್ರ್ಯಾಚುಟಿ ಕೊಡಬೇಕು. ವೇಜ್ ಬೋರ್ಡ್ ಅನ್ವಯ ಬೋನಸ್ ಮತ್ತು ಇತರೆ ಸೌಲಭ್ಯ ಕಲ್ಪಿಸಬೇಕು ಎಂಬ ಹಕ್ಕೋತ್ತಾಗಳ ಮೂಲಕ ಸಿಸಿಐ ವರ್ಕರ್ಸ್‌ಯೂನಿಯನ್ ಹೋರಾಟದ ಮಜಲುಗಳನ್ನುರೂಪಿಸಿದೆ. 

       

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry