ಭಾನುವಾರ, ಜೂನ್ 13, 2021
22 °C

ಸಿಮ್ ಕಾರ್ಡ್ ಖರೀದಿ: ಪ್ಯಾನ್ ಕಡ್ಡಾಯಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸ ಸಿಮ್ ಕಾರ್ಡ್ ಖರೀದಿಸುವ ಸಂದರ್ಭದಲ್ಲಿ `ಪ್ಯಾನ್~ ನಂಬರ್ (Permanent Account Number- PAN) ನೀಡಬೇಕು ಎನ್ನುವು ಪ್ರಸ್ತಾವಕ್ಕೆ  ಭಾರತೀಯ ಮೊಬೈಲ್ ದೂರವಾಣಿ ಸೇವಾ ಸಂಸ್ಥೆಗಳ ಒಕ್ಕೂಟ (ಸಿಒಎಐ) ತೀವ್ರ ವಿರೋಧ ವ್ಯಕ್ತಪಡಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಜನರಿಗೆ `ಪ್ಯಾನ್~ ಕಾರ್ಡ್ ಇರುವುದಿಲ್ಲ. ಹೀಗಿರುವಾಗ ಸಿಮ್ ಕಾರ್ಡ್ ಖರೀದಿಸುವ ಸಂದರ್ಭದಲ್ಲಿ `ಪ್ಯಾನ್~ ಕಡ್ಡಾಯಗೊಳಿಸುವುದರಿದ ಚಂದಾದಾರರಿಗೆ ತೊಂದರೆಯಾಗುತ್ತದೆ ಎಂದು ದೂರಿದೆ. ಹಣಕಾಸು ಸಚಿವಾಲಯ ಪ್ಯಾನ್ ಕಡ್ಡಾಯಗೊಳಿಸುವುದನ್ನು ಹಿಂದಕ್ಕೆ ಪಡೆಯಬೇಕು ಎಂದೂ ಒಕ್ಕೂಟ ತನ್ನ ಬಜೆಟ್ ಪೂರ್ವ ಮನವಿಯಲ್ಲಿ ಆಗ್ರಹಿಸಿದೆ.  ದೂರವಾಣಿ ಸೇವಾ ಸಂಸ್ಥೆಗಳ  ಮೂಲದಲ್ಲಿ ತೆರಿಗೆ ಕಡಿತಕ್ಕೆ ಸಂಬಂಧಿಸಿದಂತೆ ಹೊಸ ನೀತಿಯೊಂದನ್ನು ಜಾರಿಗೊಳಿಸಬೇಕು. ಆಫ್ಟಿಕ್ ಪೈಬರ್ ಕೇಬಲ್‌ಗಳನ್ನು (ಒಎಫ್‌ಸಿ) ಪ್ರಾಥಮಿಕ ಸೀಮಾ ಸುಂಕದ ವ್ಯಾಪ್ತಿಯಿಂದ ಹೊರಗಿಡಬೇಕು ಎನ್ನವುದು ಇತರೆ ಬೇಡಿಕೆಗಳಾಗಿವೆ.`ಒಎಫ್‌ಸಿ~ ದೂರಸಂಪರ್ಕ ಕಂಪೆನಿಗಳ ಪ್ರಾಥಮಿಕ ಮೂಲಸೌಕರ್ಯ ಸೌಲಭ್ಯ ಆಗಿರುವುದರಿಂದ ಇದಕ್ಕೆ ತೆರಿಗೆ ವಿನಾಯ್ತಿ ಕಲ್ಪಿಸಬೇಕು. ದೂರವಾಣಿ ಸೇವಾ ವಿಸ್ತರಣೆಯನ್ನೂ ಸೇವಾ ತೆರಿಗೆ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಆಗ್ರಹಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.