ಭಾನುವಾರ, ಮೇ 9, 2021
25 °C

ಸಿಯಾಚಿನ್ ನೀತಿ ಬದಲಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ದಿಂದ ಸೈನ್ಯವನ್ನು ವಾಪಸು ಕರೆಯಿಸಿಕೊಳ್ಳುವುದಿಲ್ಲ ಹಾಗೂ ಈ ಯುದ್ಧಭೂಮಿಗೆ ಸಂಬಂಧಿಸಿದ ತನ್ನ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪಾಕಿಸ್ತಾನ ಸ್ಪಷ್ಟಪಡಿಸಿದೆ.ಶಾಂತಿಯುತ ಸಹಬಾಳ್ವೆಗಾಗಿ ಭಾರತ ಮತ್ತು ಪಾಕಿಸ್ತಾನ ಸಿಯಾಚಿನ್ ಸೇರಿದಂತೆ ಇತರ ವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಎಂಬ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಶ್‌ಫಕ್ ಪರ್ವೇಜ್ ಕಯಾನಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ವಿದೇಶಾಂಗ ಖಾತೆಯ ವಕ್ತಾರ ಮೌಜಮ್ ಖಾನ್, ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ. ಹೀಗಾಗಿ ಕಯಾನಿ ಹೇಳಿಕೆ ನೀಡಿದ ಮರುದಿನವೇ ಪಾಕಿಸ್ತಾನ ಸರ್ಕಾರದಿಂದ ತದ್ವಿರುದ್ಧ ಹೇಳಿಕೆ ಹೊರಬಿದ್ದಂತೆ ಆಗಿದೆ.ಏಕಪಕ್ಷೀಯವಾಗಿ ನಾವು ಸಿಯಾಚಿನ್‌ದಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.ಏಪ್ರಿಲ್ 7ರಂದು ಸಿಯಾಚಿನ್‌ನಲ್ಲಿ ಹಿಮಕುಸಿತದಿಂದಾಗಿ 127 ಪಾಕಿಸ್ತಾನಿ ಸೈನಿಕರು ಹಿಮಸಮಾಧಿಯಾಗಿದ್ದರಿಂದ ಬುಧವಾರ ಕಯಾನಿ ಅವರು ಅಲ್ಲಿಗೆ ಭೇಟಿ ನೀಡಿ, ಭಾರತ ಮತ್ತು ಪಾಕಿಸ್ತಾನ ಸಿಯಾಚಿನ್ ಗಡಿ ವಿವಾದವೂ ಸೇರಿದಂತೆ ಎಲ್ಲ ವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದ್ದರು.2005ರಲ್ಲಿ ಭಾರತದ ಜತೆ ಆಗಿರುವ ಒಪ್ಪಂದದಂತೆ ನಮಗೆ ಅಗ್ನಿ-5 ಕ್ಷಿಪಣಿಯ ಪರೀಕ್ಷೆಯ ಬಗ್ಗೆ ಮುಂಚಿತವಾಗಿಯೇ ತಿಳಿಸಲಾಗಿತ್ತು ಎಂದು ಇದೇ ತಿಳಿಸಿರುವ ಖಾನ್, ಈ ವಲಯದಲ್ಲಿ ನಡೆಯುತ್ತಿರುವ ಶಸ್ತ್ರಾಸ್ತ್ರ ಪೈಪೋಟಿಯ ಬಗ್ಗೆ ಪಾಕಿಸ್ತಾನ ಈಗಾಗಲೇ ಆತಂಕ ವ್ಯಕ್ತಪಡಿಸಿದೆ ಎಂದಿದ್ದಾರೆ.ಸುಳಿವು ನೀಡಿದರೆ 10 ದಶಲಕ್ಷ ಡಾಲರ್ ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿದ ನಂತರ ಹಫಿಜ್ ಸಯೀದ್ ಲಾಹೋರ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ  ರಕ್ಷಣೆ ಒದಗಿಸುವಂತೆ ಸರ್ಕಾರಕ್ಕೆ ಆದೇಶಿಸಬೇಕು ಎಂದು ಮನವಿ ಮಾಡಿರುವ ಬಗ್ಗೆ ಪ್ರಶ್ನಿಸಿದಾಗ, `ನಮ್ಮದು ಕ್ರಿಯಾಶೀಲ ಪ್ರಜಾಪ್ರಭುತ್ವ ಮತ್ತು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯಾಗಿರುವುದರಿಂದ ಯಾರೇ ಆದರೂ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಬಹುದು~ ಎಂದಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.