ಸಿರವಾಳಕ್ಕೆ ಪ್ರಾಚ್ಯವಸ್ತು ತಂಡ ಭೇಟಿ

ಗುರುವಾರ , ಜೂಲೈ 18, 2019
22 °C

ಸಿರವಾಳಕ್ಕೆ ಪ್ರಾಚ್ಯವಸ್ತು ತಂಡ ಭೇಟಿ

Published:
Updated:

ಶಹಾಪುರ: ತಾಲ್ಲೂಕಿನ ಸಿರವಾಳ ಗ್ರಾಮಕ್ಕೆ ಮಂಗಳವಾರ ಪ್ರಾಚ್ಯವಸ್ತು ಇಲಾಖೆಯ ಹಿರಿಯ ಅಧಿಕಾರಿ ಎಲ್. ಎನ್. ಸ್ವಾಮಿ ನೇತೃತ್ವದ ತಂಡವು ಭೇಟಿ ನೀಡ ಪರಿಶೀಲನೆ ನಡೆಸಿತು.ಯಾವುದೇ ಮಾಹಿತಿಯನ್ನು ನಾವು ನೀಡುವುದಿಲ್ಲ. ಜಿಲ್ಲಾಧಿಕಾರಿಯ ಜೊತೆ ಸಮಾಲೋಚನೆ ನಡೆಸಿ ವಿವರ ಪಡೆದುಕೊಳ್ಳಿ. ದಯವಿಟ್ಟು ಏನು ಕೇಳಬೇಡಿ” ಎಂದು `ಪ್ರಜಾವಾಣಿ~ಗೆ ಅವರು ಸ್ಪಷ್ಟಪಡಿಸಿದರು.ಕೇಂದ್ರ ಸರ್ಕಾರದ ರಾಷ್ಟ್ರೀಯ ಸಾಂಸ್ಕೃತಿಕ ಸಂಸ್ಥೆಯ ನಿರ್ದೇಶನದ ಮೇರೆಗೆ ಆಗಮಿಸಿರುವ ತಂಡವು ಹಲವು ಪ್ರಶ್ನೆಗಳನ್ನು ಹುಡುಕಾಟದಲ್ಲಿ ಮಗ್ನವಾಗಿದೆ. ಸಿರವಾಳ ಪ್ರಾಚ್ಯವಸ್ತು ಇಲಾಖೆ ಅಡಿಯಲ್ಲಿ ಸೇರ್ಪಡೆಯಾಗಿದೆಯೇ ಇಲ್ಲವೇ? ಎಂಬುದು ಈಗ ದೊಡ್ಡ ಸವಾಲಾಗಿದೆ. ಅಪರೂಪದ ಅತಿ ಹೆಚ್ಚು ಸ್ಮಾರಕಗಳು, ಶಾಸನಗಳ ಕೇಂದ್ರವು ಹೌದು. ಪಂಚಕೂಟಗಳ ದೇಗುಲ, ಪಲ್ಲವ ಶೈಲಿ ವಾಸ್ತು ಶಿಲ್ಪಗಳು  ಅಚ್ಚರಿಯನ್ನು ಮೂಡಿಸುತ್ತವೆ.ಪಂಚತಂತ್ರಕ್ಕೆ ಸಂಬಂಧಿಸಿದಂತೆ ಶಿಲ್ಪಗಳು, ಸುಜ್ಞಾನೇಶ್ವರ, ಪುಷ್ಕರಣಿ, ಮಲ್ಲಿಕಾರ್ಜುನ ದೇವಾಲಯ, ಅಲ್ಮೇಶ್ವರ, ಹೀಗೆ ಶಾಸನದ ದಕ್ಷಿಣದ ವಾರಣಾಸಿ ಎಂದು ಕರೆಯುತ್ತಾರೆ ಎಂದು ಡಾ.ಎಂ.ಎಸ್.ಸಿರವಾಳ ಹೇಳಿದರು.ಸಿರವಾಳ ಧರ್ಮದ ಆದಿಮನಿ, ಅಗ್ರಹಾರ ಸಿರವಾಳ, ಪ್ರಾಚೀನ ಕಾಲದ ಆಡಳಿತ, ವ್ಯಾಪಾರ, ಧಾರ್ಮಿಕ ಶ್ರದ್ಧಾಕೇಂದ್ರವಾಗಿತ್ತು. ಇಷ್ಟೆಲ್ಲ ಕುತೂಹಲಗಳನ್ನು ಒಡಲಿನಲ್ಲಿ ತುಂಬಿಕೊಂಡಿದ್ದರು ಸಹ ತಾತ್ಸರಕ್ಕೆ ತುತ್ತಾಗಿ ನಲುಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿಲಿವೆ.ಗ್ರಾಮದ ಹೆಜ್ಜೆ ಹೆಜ್ಜೆಗೂ ಇತಿಹಾಸದ ಸ್ಮಾರಕದ ಶಾಸನ, ದೇಗುಲ ಇರುವಾಗ ಅವೆಲ್ಲವುಗಳ ಬಗ್ಗೆ ಸಮಗ್ರವಾದ ಸಮೀಕ್ಷೆ ನಡೆಸಿ ಮಾಹಿತಿ ಕಲೆ ಹಾಕಬೇಕಾದರೆ ಹಲವು ತಿಂಗಳು ಬೇಕಾಗುತ್ತದೆ. ದೇಗುಲಗಳ ವಿಸ್ತೀರ್ಣ, ಉದ್ದಗಲ, ಆಳದ ಬಗ್ಗೆ ನಮೂದಿಸಬೇಕಾದರೆ ಅನಿವಾರ್ಯವಾಗಿ ಉತ್ಖನನ ನಡೆಸಬೇಕಾಗುತ್ತದೆ ಎಂಬುದು ತಿಳಿದು ಬಂದಿತು.ತಂಡದ ಜೊತೆ ಜಿಲ್ಲಾ ಪಂಚಾಯಿತಿ ಹಿರಿಯ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಿದರು. ಗ್ರಾಮದ ಮುಖಂಡರಾದ ಗುರುಪಾಟೀಲ್, ಉಪನ್ಯಾಸಕಿ ಎಚ್. ಬಿ.ಗುತ್ತೇದಾರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮಣ್ಣ ಇಟ್ನಳ್ಳಿ, ಶರಣಬಸಪ್ಪ, ಮಾನಪ್ಪ ಯಳವಾರ, ಮಹಾದೇವಪ್ಪ ಸಿರನೆಟ್ಟಿ, ಬಸಪ್ಪ ಶಹಾಬಾದ, ಮುಕ್ತಪ್ಪ ಹೇರುಂಡಿ, ತಿರುಪತಿ ಗಾಳಿ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry