ಬುಧವಾರ, ಏಪ್ರಿಲ್ 14, 2021
24 °C

ಸಿರಿಗನ್ನಡ ಗೌರವ ಪ್ರಶಸ್ತಿ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: 2011ರಲ್ಲಿ ಪ್ರಕಟಗೊಂಡ ಜಿಲ್ಲೆಯ ಲೇಖಕರಿಂದ ಆಹ್ವಾನಿಸಿದ್ದ ಕೃತಿಗಳಿಗೆ `ಸಿರಿಗನ್ನಡ ಪುಸ್ತಕ ಪ್ರಶಸ್ತಿ~ ಹಾಗೂ 2012ನೇ ಸಾಲಿನ `ಸಿರಿಗನ್ನಡ ಗೌರವ~ ಪ್ರಶಸ್ತಿ ಮತ್ತು ವಿವಿಧ ದತ್ತಿ ಪ್ರಶಸ್ತಿಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ಹೆಸರನ್ನು ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನವು ಪ್ರಕಟಿಸಿದೆ.`ಸಿರಿಗನ್ನಡ ಗೌರವ~ ಪ್ರಶಸ್ತಿಗೆ ಸಾಮಾಜಿಕ ಸೇವಾ ಕ್ಷೇತ್ರದಿಂದ ಎಸ್.ಎಂ. ಕುಲಕರ್ಣಿ ಹಾಗೂ ಆಡಳಿತ ಕ್ಷೇತ್ರದಿಂದ ಎ.ಎ. ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. `ಸಿರಿಗನ್ನಡ ಪುಸ್ತಕ ಪ್ರಶಸ್ತಿ~ಗೆ ಡಾ. ಬಸು ಬೇವಿನಗಿಡದ ಅವರ `ಬಾಳೆಯ ಕಂಬ~ ಕಥಾ ಸಂಕಲನ ಹಾಗೂ ಡಾ. ಗುರುಪಾದ ಮರಿಗುದ್ದಿ ಅವರ ವಿಮರ್ಶಾ ಕೃತಿ `ಅಭಿವ್ಯಕ್ತಿ ಮತ್ತು ಅರ್ಥವಿನ್ಯಾಸಗಳು~ ಕೃತಿಯನ್ನು ಆಯ್ಕೆ ಮಾಡಲಾಗಿದೆ.ಸಾಹಿತಿ ಚಂದ್ರಕಾಂತ ಪೋಕಾಳೆ ಅವರ `ಒಡನಾಡ~ ವಿಮರ್ಶಾ ಕೃತಿಗೆ ಎಸ್.ಎಂ. ಕುಲಕರ್ಣಿ ಷಷ್ಠ್ಯಬ್ದಿ ಸಮಿತಿ ದತ್ತಿ ಪ್ರಶಸ್ತಿ, ಡಾ. ಕೃಷ್ಣಮೂರ್ತಿ ಕಿತ್ತೂರು ಅವರಿಗೆ ಜೀವಮಾನದ ಸಾಧನೆಗಾಗಿ ಪ್ರೊ. ಪಿ.ಕೆ. ಭಾಗೋಜಿ ದತ್ತಿ ಪ್ರಶಸ್ತಿ, ರಂಜನಾ ನಾಯಕ ಅವರ ಮಾನಸಿ ಕಾದಂಬರಿಗೆ ಹಣಮಂತರಾಯ ಸವಣೂರ ಸ್ಮಾರಕ ದತ್ತಿ ಪ್ರಶಸ್ತಿ ಲಭಿಸಿದೆ.ಲೇಖಕಿ ಲತಾ ಗುತ್ತಿ ಅವರ `ಆಕಾಶ ಗೀತೆಗಳು~ ಕವನ ಸಂಕಲನಕ್ಕೆ ದಿ. ಚಂದ್ರವ್ವ ಧರ್ಮಜಿ ಅನಗೋಳ ದತ್ತಿ ಪ್ರಶಸ್ತಿ, ಡಾ.ಜಿ.ಪಿ. ದೊಡಮನಿ ಅವರ `ಮಹಾತ್ಮಾ ಜ್ಯೋತಿರಾವ್ ಫುಲೆ~ ಅನುವಾದ ಕೃತಿಗೆ ಶ್ರೀದೇವಿ ದಾಸಪ್ಪ ಶಾನಭಾಗ್ ದತ್ತಿ ಪ್ರಶಸ್ತಿ, ಲೇಖಕ ಅಶೋಕ ಚಂದರಗಿ ಅವರ `ಚಂದರಗಿ ಕಾಲಂ~ ಕೃತಿಗೆ ದಿ. ರಾಮರಾವ್ ಶಿರಹಟ್ಟಿ ದತ್ತಿ ಪ್ರಶಸ್ತಿ, ಡಾ. ಗುರುದೇವಿ ಹುಲೆಪ್ಪನವರ ಅವರ `ಅಜ್ಜಿಗೆ ಜೈ ಜೈ~ ಶಿಶು ಸಾಹಿತ್ಯಕ್ಕೆ ಪಿ. ವಿಜಯಕುಮಾರ ದತ್ತಿ ಪ್ರಶಸ್ತಿ ಸಿಕ್ಕಿದೆ.ಶ್ವೇತಾ ನರಗುಂದ ಅವರ `ಮಾರಿಷಸ್~ ಪ್ರವಾಸ ಕಥನಕ್ಕೆ ಕೆ. ಚಂದ್ರಮೌಳಿ ದತ್ತಿನಿಧಿ ಪ್ರಶಸ್ತಿ, ಶಶಿಕಲಾ ಜೊಲ್ಲೆ ಅವರಿಗೆ ಸಾಮಾಜಿಕ ಹಾಗೂ ಸಹಕಾರಿ ಸೇವೆಯನ್ನು ಪರಿಗಣಿಸಿ ಸುಮನ ಹುದಲಿ ಸ್ಮಾರಕ ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಶಿಕ್ಷಕ ಸಾಹಿತಿಗಳಿಗೆ ಕೊಡುವ ವೆಂ.ಲ.ಜೋಶಿ ಸ್ಮಾರಕ ದತ್ತಿನಿಧಿ ಪ್ರಶಸ್ತಿಗೆ ನಾ.ಕೃ. ಪತ್ತಾರ ಹಾಗೂ ಪ್ರಕಾಶನ ಸಂಸ್ಥೆಗೆ ನೀಡುವ ತಾರಾದೇವಿ ಪರ್ವತರಾಜ ಪಾಟೀಲ ದತ್ತಿ ಪ್ರಶಸ್ತಿಗೆ ನಾಗನೂರು ರುದ್ರಾಕ್ಷಿಮಠದ ಲಿಂಗಾಯತ ಅಧ್ಯಯನ ಅಕಾಡೆಮಿ ಆಯ್ಕೆಯಾಗಿದೆ.ಪ್ರಶಸ್ತಿ ಪ್ರದಾನ ಸಮಾರಂಭವು ಡಿಸೆಂಬರ್ 25ರಂದು ಇಲ್ಲಿನ ಐಎಂಇಆರ್ ಸಭಾಗೃಹದಲ್ಲಿ ನಡೆಯಲಿದೆ ಎಂದು ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಕಾರ್ಯದರ್ಶಿ ಶಿರಿಷ್ ಜೋಷಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.