ಮಂಗಳವಾರ, ಮೇ 18, 2021
22 °C

`ಸಿರಿಭೂವಲಯ' ಗ್ರಂಥದ ಸಾಂಗತ್ಯ ಪದಗಳ ಸಿ.ಡಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಉತ್ಪ್ರೇಕ್ಷೆಯ ನುಡಿಗಳು ಸಿರಿಭೂವಲಯ ಕೃತಿಯನ್ನು ಸಾಮಾನ್ಯ ಜನರಿಂದ ದೂರವಿರಿಸಿದವು' ಎಂದು ಜೈನ ವಿದ್ವಾಂಸ ಡಾ.ಎಂ.ಎ.ಜಯಚಂದ್ರ ವಿಷಾದ ವ್ಯಕ್ತಪಡಿಸಿದರು.ಪದ್ಮಶ್ರೀ ಪ್ರಕಾಶನವು ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೊಡ್ಡಬೆಲೆ ಶಾರದಾದೇವಿ ಆದಿರಾಜಯ್ಯ ಅವರ ಹಾಡಿರುವ `ಸಿರಿಭೂವಲಯ' ಗ್ರಂಥದ ಸಾಂಗತ್ಯ ಪದಗಳ ಸಿ.ಡಿ ಬಿಡುಗಡೆ ಮಾಡಿ ಅವರು ಮಾತನಾಡಿದರು.`ಈ ಕೃತಿಯು ಸರ್ವಭಾಷೆಗಳನ್ನು, ಹಲವು ವಿಚಾರಗಳನ್ನು ಒಳಗೊಂಡಿದೆ ಎಂಬ ಊಹಾಪೋಹವಿದೆ. ಆದರೆ, ಅದು ಬಹುಭಾಷೆಯ, ಬಹುವಿಚಾರಗಳನ್ನು ಉಲ್ಲೇಖಿಸಿದೆ ಎಂದಷ್ಟೇ ಹೇಳಬಹುದು. ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯುವ ಅಗತ್ಯವಿದೆ' ಎಂದು ಹೇಳಿದರು.`ಸಿರಿ ಭೂವಲಯ ಕೃತಿಯು ಒಂಬತ್ತನೇ ಶತಮಾನದಲ್ಲಿ ರಚಿತಗೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ ಅದರಲ್ಲಿ ಬಳಕೆಯಾಗಿರುವ ಭಾಷೆ ಸಾಂಗತ್ಯ ಛಂದಸ್ಸಿನಲ್ಲಿದ್ದು, ಈ ಶತಮಾನದಲ್ಲಿ ಈ ಬಗೆಯ ಛಂದಸ್ಸು ಬಳಕೆಯಲ್ಲಿ ಇರಲಿಲ್ಲ. ಕಾವ್ಯ, ಅರ್ಥ, ಶಾಸ್ತ್ರಗಳನ್ನು ಅಂಕೆಯ ಮೂಲಕ ತಿಳಿಸಿರುವ ಈ ವಿಶಿಷ್ಟ ಕೃತಿಯನ್ನು ಅಕ್ಷರ ರೂಪಕ್ಕೆ ತರ್ಜುಮೆ ಮಾಡಬೇಕಿದೆ' ಎಂದು ಹೇಳಿದರು.ಜೈನಶಾಸ್ತ್ರ ಮತ್ತು ಪ್ರಾಕೃತ ವಿದ್ವಾಂಸ ಪ್ರೊ.ಎಂ.ಎ.ಶುಭಚಂದ್ರ, `ಸತ್ವವಿರುವ ಕೃತಿಗಳನ್ನು ತುಸು ವೈಭವೀಕರಿಸುವುದು ಸಹಜ. ಆದರೆ  ಅದರಲ್ಲಿ ಅಂಶಗಳನ್ನು ತೀವ್ರವಾಗಿ ಅಧ್ಯಯನ ನಡೆಸಬೇಕು. ಕವಿ ಕುಮುದೇಂದು ಮುನಿ ರಚಿಸಿರುವ `ಸಿರಿಭೂವಲಯ' ಮೂಲಕೃತಿಯನ್ನು ಅಧ್ಯಯನ ನಡೆಸಿ ವ್ಯಾಖ್ಯಾನಿಸುವವರ ಅಗತ್ಯ ಎದ್ದುಕಾಣುತ್ತಿದೆ' ಎಂದರು. ಧರ್ಮಸ್ಥಳ ಸುರೇಂದ್ರಕುಮಾರ್ ಇತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.