ಸಿರಿಯಾದಲ್ಲಿ ಘರ್ಷಣೆ: 20 ಸಾವು

7

ಸಿರಿಯಾದಲ್ಲಿ ಘರ್ಷಣೆ: 20 ಸಾವು

Published:
Updated:

ದಮಾಸ್ಕಸ್ (ಎಎಫ್‌ಪಿ): ಸಿರಿಯಾ ಸೇನೆ ಹಾಗೂ ಬಂಡುಕೋರರ ನಡುವೆ ಹೋಮ್ಸ ಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ 20 ಸೈನಿಕರು ಸತ್ತಿದ್ದು, 53 ಮಂದಿ ಗಾಯಗೊಂಡಿದ್ದಾರೆ ಎಂದು ಶಂಕಿಸಲಾಗಿದೆ.ಅಲ್-ಹಬ್ಬಿತ್ ಮತ್ತು ಕಫ್ರನಾಬುಧ ಗ್ರಾಮಗಳಿಗೆ ಭದ್ರತಾ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ವೇಳೆ ಈ ಘರ್ಷಣೆ ಸಂಭವಿಸಿದೆ. ಹೋಮ್ಸ ಮತ್ತು ಹ್ಯಾಮಾ ಪ್ರಾಂತ್ಯದಲ್ಲಿ ಸರ್ಕಾರದ ವಿರುದ್ಧದ ಪ್ರತಿಭಟನೆಗಳು ಹೆಚ್ಚುತ್ತಿವೆ.ದೇಶ ನಿಷ್ಠ ಮತ್ತು ಬಂಡುಕೋರ ಯೋಧರ ನಡುವೆ ಕಳೆದ 6 ತಿಂಗಳಿನಿಂದ ನಡೆಯುತ್ತಿರುವ ಘರ್ಷಣೆಯಲ್ಲಿ 12 ನಾಗರಿಕರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ಸಿರಿಯಾದಲ್ಲಿರುವ ಮಾನವ ಹಕ್ಕುಗಳ ವೀಕ್ಷಕರು ಮಾಹಿತಿ ನೀಡಿದ್ದಾರೆ.ಸಿರಿಯಾದಲ್ಲಿ ನಾಗರಿಕರ ಮೇಲೆ ನಡೆಯುತ್ತಿರುವ ದಾಳಿ ತಕ್ಷಣ ನಿಲ್ಲಬೇಕು ಎಂದು ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಆಗ್ರಹಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry