ಸಿರಿಯಾದಲ್ಲಿ 68 ನಾಗರಿಕರ ಹತ್ಯೆ; ಕದನ ವಿರಾಮಕ್ಕೆ ಬೆಂಬಲ

7

ಸಿರಿಯಾದಲ್ಲಿ 68 ನಾಗರಿಕರ ಹತ್ಯೆ; ಕದನ ವಿರಾಮಕ್ಕೆ ಬೆಂಬಲ

Published:
Updated:

ಡಮಾಸ್ಕಸ್, ಸಿರಿಯಾ (ಎಎಫ್‌ಪಿ): ಇಡ್ಲಿಬ್ ಪ್ರಾಂತ್ಯದ ಹಾಮ್ಸ ನಗರ ಮತ್ತು ಗ್ರಾಮವೊಂದರ ಮೇಲೆ ಕ್ಷಿಪ್ರ ದಾಳಿ ನಡೆಸಿದ ಸರ್ಕಾರಿ ವಿರೋಧಿ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದ ಸೇನಾಪಡೆಗಳು 68 ನಾಗರಿಕರನ್ನು ಹತ್ಯೆ ಮಾಡಿದೆ.

 

ಈ ನಡುವೆ ಮಾನವೀಯ ಕದನ ವಿರಾಮ ಪ್ರಸ್ತಾಪಿಸಿರುವ ರೆಡ್‌ಕ್ರಾಸ್‌ಗೆ ಅಮೆರಿಕ ಬೆಂಬಲ ವ್ಯಕ್ತಪಡಿಸಿದೆ.

ಇಲ್ಲಿನ ಪರಿಸ್ಥಿತಿ ವರದಿ ಮಾಡಲು ಬಂದಿದ್ದ ಬ್ರಿಟನ್‌ನ `ಸಂಡೆ ಟೈಮ್ಸ~ ಪತ್ರಿಕೆಯ ವರದಿಗಾರ್ತಿ ಮೇರಿ ಕೊಲ್ವಿನ್ ಮತ್ತು ಫ್ರಾನ್ಸ್‌ನ ಛಾಯಾಚಿತ್ರಗ್ರಾಹಕ ರೆಮಿ ಒಬ್ಲೆಕ್ ಅವರು ಸಾವನ್ನಪ್ಪಿದ್ದಾರೆ.ಅವರು ಉಳಿದುಕೊಂಡಿದ್ದ ಮನೆ ಮೇಲೆ ಆಕಸ್ಮಿಕ ಷೆಲ್ ದಾಳಿ ನಡೆದುದರಿಂದ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry