ಸಿರಿಯಾ: ಗುಂಡಿನ ದಾಳಿ

7

ಸಿರಿಯಾ: ಗುಂಡಿನ ದಾಳಿ

Published:
Updated:

ಬೈರುತ್ (ಎಪಿ): ಡಮಾಸ್ಕಸ್‌ನಲ್ಲಿ  ಶನಿವಾರ ಅಂತಿಮ ಯಾತ್ರೆಯು ಪ್ರತಿಭಟನಾ ಮೆರವಣಿಗೆಯಾಗಿ ಪರಿವರ್ತನೆಗೊಂಡಿದ್ದರಿಂದ ಜನರನ್ನು ಚದುರಿಸಲು ಸಿರಿಯಾದ ಭದ್ರತಾ ಯೋಧರು ಅಶ್ರುವಾಯು ಪ್ರಯೋಗಿಸಿ ನಂತರ ಗೋಲಿಬಾರ್ ಮಾಡಿದರು.ಅಧ್ಯಕ್ಷ ಬಾಶರ್ ಅಸದ್ ವಿರುದ್ಧ 11 ತಿಂಗಳ ಹಿಂದೆ ಆರಂಭವಾದ ಬಂಡಾಯದ ನಂತರ ನಡೆದ ಪ್ರತಿಭಟನಾ ಮೆರವಣಿಗೆಗಳ ಪೈಕಿ ಶನಿವಾರ ನಡೆದ ಪ್ರತಿಭಟನೆಯೇ ಅತಿ ದೊಡ್ಡದು ಎನ್ನಲಾಗಿದೆ.  ಅಶ್ರುವಾಯು ಪ್ರಯೋಗ ಮತ್ತು ಗೋಲಿಬಾರ್‌ನಿಂದ ಅನೇಕ ಜನರು ಗಾಯಗೊಂಡಿದ್ದಾರೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry