ಸಿರಿಯಾ: ಲೈಂಗಿಕ ಜಿಹಾದ್‌!

7

ಸಿರಿಯಾ: ಲೈಂಗಿಕ ಜಿಹಾದ್‌!

Published:
Updated:

ಟ್ಯುನಿಸ್‌ (ಎಎಫ್‌ಪಿ): ಸಿರಿ­ಯಾ­-ದಲ್ಲಿ ಬಂಡುಕೋರರು ಸರ್ಕಾರದ ವಿರುದ್ಧ ನಡೆಸುತ್ತಿರುವ ಹೋರಾ­ಟಕ್ಕೆ ಹಲವು ಆಯಾಮಗಳಿವೆ.ಅಲ್ಲಿನ ಜಿಹಾದಿಗಳಿಗೆ ಲೈಂಗಿಕ ಸುಖ ನೀಡಲು ಟ್ಯುನಿಷಿಯಾ ಮಹಿಳೆ­ಯರು ಸಿರಿಯಾಗೆ ಹೋಗಿದ್ದಾರೆ ಎನ್ನುವ ವಿಷಯವನ್ನು ಟ್ಯುನಿಷಿ­ಯಾದ ಒಳಾಡಳಿತ ಸಚಿವ ಲೊಟ್ಫಿ ಬೆನ್‌್ ಜೆಡ್ಡೊ ಅವರು ಗುರುವಾರ ಸಂಸತ್ತಿಗೆ ತಿಳಿಸಿದ್ದಾರೆ.‘ಈ ಮಹಿಳೆಯರು ಜಿಹಾದ್‌ ಅಲ್ ನಿಖಾ’ –( ಪವಿತ್ರ ಲೈಂಗಿಕ ಹೋರಾಟ) ಹೆಸರಿನಲ್ಲಿ  20, 30, 100 ಬಂಡುಕೋರರಿಗೆ  ಲೈಂಗಿಕ ಸುಖ ನೀಡುತ್ತಾರೆ. ಗರ್ಭ ಧರಿಸಿದ ಬಳಿಕ  ಮನೆಗೆ ವಾಪಸಾಗುತ್ತಾರೆ’ ಎಂದು ಬೆನ್‌ ಹೇಳಿದ್ದಾರೆ.ಆದರೆ, ಜಿಹಾದಿಗಳಿಂದ ಮಕ್ಕ­ಳನ್ನು ಪಡೆದ ಇಂಥ ಎಷ್ಟು ಮಹಿಳೆ­ಯರು ಇದ್ದಾರೆ ಎನ್ನುವುದನ್ನು ಅವರು ವಿವರಿಸಿಲ್ಲ.ಧರ್ಮ ಸಮ್ಮತ: ಜಿಹಾದ್‌ ಅಲ್‌ ನಿಖಾ ಹೆಸರಿನಲ್ಲಿ ಈ ರೀತಿ ಹಲವರ ಜತೆ ವಿವಾಹೇತರ ಲೈಂಗಿಕ ಸಂಬಂಧ ಹೊಂದುವುದನ್ನು ಮೂಲಭೂತವಾದಿ ಸುನ್ನಿ ನಾಯ­ಕರು ಸಮರ್ಥಿಸುತ್ತಾರೆ. ಇದು ಧರ್ಮಸಮ್ಮತ ಪವಿತ್ರ ಹೋರಾಟ ಎನ್ನುವುದು ಅವರ ವ್ಯಾಖ್ಯಾನ.ಟ್ಯುನಿಷಿಯಾದಿಂದ ಎಷ್ಟು ಮಹಿ­ಳೆ­ಯರು ಸಿರಿಯಾಗೆ ಹೋಗಿ­ದ್ದಾರೆ ಎನ್ನುವುದನ್ನು ಸಚಿವರು ಹೇಳಿಲ್ಲ. 

ನೂರಾರು ಮಹಿಳೆಯರು ಇದರಲ್ಲಿ ತೊಡಗಿದ್ದಾರೆ ಎನ್ನುತ್ತದೆ ಮಾಧ್ಯಮ ವರದಿ. ಇನ್ನೊಂದೆಡೆ ಟ್ಯುನಿಷಿಯಾದ ನೂರಾರು ಪುರು­ಷರೂ  ಸಿರಿಯಾ ಬಂಡು­­ಕೋ­ರ­ರ ಹೋರಾ­ಟಕ್ಕೆ ಹೆಗಲು ನೀಡಿದ್ದಾರೆ ಎಂದು ಜೆಡ್ಡೊ ತಿಳಿಸಿದ್ದಾರೆ.ಕಳೆದ 15ವರ್ಷಗಳಲ್ಲಿ ಟ್ಯುನಿಷಿ­ಯಾ­ದ ಸಾವಿರಾರು ಮಂದಿ, ಆಫ್ಘಾನಿ­ಸ್ತಾನ, ಇರಾಕ್‌ ಹಾಗೂ ಸಿರಿ­ಯಾದಲ್ಲಿನ ಜಿಹಾದಿಗಳಿಗೆ ಬೆಂಬಲ ನೀಡಿದ್ದಾರೆ ಎಂದೂ ಮಾಧ್ಯಮ ವರದಿ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry