ಸಿರಿಯಾ ವಿಶ್ವವಿದ್ಯಾಲಯ ಸ್ಫೋಟ; 87 ಬಲಿ

7

ಸಿರಿಯಾ ವಿಶ್ವವಿದ್ಯಾಲಯ ಸ್ಫೋಟ; 87 ಬಲಿ

Published:
Updated:
ಸಿರಿಯಾ ವಿಶ್ವವಿದ್ಯಾಲಯ ಸ್ಫೋಟ; 87 ಬಲಿ

ಬೈರತ್ (ಎಪಿ): ಸಿರಿಯಾ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆಸಿರುವ ಎರಡು ಬೃಹತ್ ಸ್ಫೋಟಗಳಲ್ಲಿ 87 ಜನರು ಮೃತಪಟ್ಟಿದ್ದಾರೆ ಎಂದು ಆಡಳಿತ ವಿರೋಧಿ ಕಾರ್ಯಕರ್ತರು ಬುಧವಾರ ತಿಳಿಸಿದ್ದಾರೆ.ಅಲೆಪ್ಪೊ ವಿಶ್ವವಿದ್ಯಾಲಯದಲ್ಲಿ ಸಾವಿನ ಸಂಖ್ಯೆಯು ಹೆಚ್ಚಳವಾಗುವ ಸಾಧ್ಯತೆಯಿದೆ. ಈಗಾಗಲೇ ವೈದ್ಯಕೀಯ ಪರಿಚಾರಕರು ಬಹಳಷ್ಟು ಗುರ್ತಿಸಲಾಗದ ಶವಗಳ ಅವಯವಗಳನ್ನು ಸಂಗ್ರಹಿಸಿದ್ದು, ಘಟನೆಯಲ್ಲಿ ಸುಮಾರು 150ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ ಸಿರಿಯಾದಲ್ಲಿರುವ ಬ್ರಿಟನ್ ಮೂಲದ  ಮಾನವ ಹಕ್ಕು ಆಯೋಗದ ವಿಕ್ಷಕರೊಬ್ಬರು ಬುಧವಾರ ತಿಳಿಸಿದರು.ಆದರೆ ಇವರೆಗೆ ಯಾರು, ಯಾವ ಕಾರಣಕ್ಕೆ ಈ ದಾಳಿ ನಡೆಸಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ.ಅಧ್ಯಕ್ಷ ಬಷರ್ ಅಸದ್ ಬೆಂಬಲಿಗರು ನಡೆಸಿದ ವೈಮಾನಿಕ ದಾಳಿಯಿಂದ ಈ ಸ್ಫೋಟಗಳು ಸಂಭವಿಸಿವೆ ಎಂದು ಆಡಳಿತ ವಿರೋಧಿ ಕಾರ್ಯಕರ್ತರು ಆರೋಪಿಸಿದ್ದಾರೆ. ಆದರೆ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆಯು ಇದೊಂದು `ಉಗ್ರರ ಗುಂಪಿನ ಕೃತ್ಯ' ಎಂದು ಹೇಳಿದೆ.ಸಿರಿಯಾದಲ್ಲಿ 2011ರ ಮಾರ್ಚ್‌ನಿಂದ ಪ್ರಾರಂಭವಾಗಿರುವ ರಾಜಕೀಯ ಬಿಕ್ಕಟಿಗೆ ಇವರೆಗೆ ಸುಮಾರು 60,000ಕ್ಕೂ ಅಧಿಕ ಜನರು ಪ್ರಾಣ ತೆತ್ತಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry