ಸಿರಿಯಾ: ಸಂವಿಧಾನಕ್ಕಾಗಿ ಜನಮತ

7

ಸಿರಿಯಾ: ಸಂವಿಧಾನಕ್ಕಾಗಿ ಜನಮತ

Published:
Updated:

ಡಮಾಸ್ಕಸ್ (ಎಎಫ್‌ಪಿ): ಒಂದೇ ಪಕ್ಷದ ಐದು ದಶಕಗಳ ಆಡಳಿತಕ್ಕೆ ಕೊನೆ ಹಾಡುವ ನಿಟ್ಟಿನಲ್ಲಿ ಹೊಸ ಸಂವಿಧಾನಕ್ಕಾಗಿ ಸಿರಿಯಾ ನಾಗರಿಕರು ಭಾನುವಾರ ಮತದಾನ ಮಾಡಿದರು.ತಮ್ಮ ವಿರುದ್ಧ ನಡೆಯುತ್ತಿರುವ ನಾಗರಿಕರ ಪ್ರತಿಭಟನೆ ಹಾಗೂ ಪದತ್ಯಾಗ ಮಾಡುವಂತೆ ಅಮೆರಿಕ ನೇತೃತ್ವದಲ್ಲಿ ಅಂತರರಾಷ್ಟ್ರೀಯ ಸಮುದಾಯ ಹೇರುತ್ತಿರುವ ಒತ್ತಡದಿಂದ ತಪ್ಪಿಸಿಕೊಳ್ಳಲು ಅಧ್ಯಕ್ಷ ಬಷರ್ ಹೊಸ ಸಂವಿಧಾನ ರಚಿಸುವುದಾಗಿ ಭರವಸೆ ನೀಡಿದ್ದರು.ಆದರೆ, ಅಧ್ಯಕ್ಷರ ವಿರೋಧಿ ಬಣಗಳು ಮತದಾನಕ್ಕೆ ಬಹಿಷ್ಕಾರ ಹಾಕುವಂತೆ ಕರೆ ನೀಡಿದ್ದವು. ಹಾಗೆಯೇ ಸಿರಿಯಾ ಮೇಲೆ ಜಾಗತಿಕ ಒತ್ತಡ ತಗ್ಗಿಸುವಲ್ಲಿಯೂ ಈ ಜನಮತ ಸಂಗ್ರಹ ವಿಫಲವಾಗಿದ್ದು, ಅಮೆರಿಕ ಈ ಪ್ರಕ್ರಿಯೆ ನಗು ತರಿಸುವಂತಿದೆ ಎಂದು ಹೇಳಿದೆ.ಅಸಾದ್ ನೇಮಿಸಿದ್ದ 29 ಜನರ ಸಮಿತಿ ರಚಿಸಿರುವ ಹೊಸ ಸಂವಿಧಾನ ಈಗ ಅಸ್ತಿತ್ವದಲ್ಲಿರುವ ಸಂವಿಧಾನದ ವಿವಿದಾತ್ಮಕ 8ನೇ ವಿಧಿಯನ್ನು ರದ್ದುಗೊಳಿಸಲಿದೆ.  1963ರ ಕ್ರಾಂತಿಯಲ್ಲಿ ಅಸಾದ್ ಅವರ ಮೃತ ತಂದೆ ಹಫೇಜ್ ಅಧಿಕಾರ ಹಿಡಿದಾಗಿನಿಂದ ಸಿರಿಯಾದಲ್ಲಿ ಬಾತ್ ಪಕ್ಷವೇ ಅಧಿಕಾರದಲ್ಲಿದೆ. ದೇಶದ ಹಲವೆಡೆ ವಿರೋಧಿಗಳನ್ನು ಬಗ್ಗು ಬಡಿಯಲು ಸರ್ಕಾರ ಕಾರ್ಯಾಚರಣೆ ನಡೆಸುತ್ತಿರುವಾಗ, ಸೇನೆಯಲ್ಲಿನ ಪ್ರತ್ಯೇಕತಾವಾದಿಗಳು ಸರ್ಕಾರಕ್ಕೆ ನಿಷ್ಠರಾಗಿರುವ ಪಡೆಗಳ ವಿರುದ್ಧ ಗೆರಿಲ್ಲಾ ಯುದ್ಧದಲ್ಲಿ ತೊಡಗಿರುವಾಗ ಈ ಜನಮತ ಸಂಗ್ರಹ ಹೇಗೆ ಸ್ಥಿರತೆ ತರಲು ಸಾಧ್ಯ ಎಂಬುದು ಸ್ಪಷ್ಟವಾಗಿಲ್ಲ.16 ಜನರ ಸಾವು (ಬೈರೂತ್ ವರದಿ): ಸಿರಿಯಾ ಸರ್ಕಾರ ದೇಶದಾದ್ಯಂತ ಭಾನುವಾರ ಶೆಲ್ ದಾಳಿ ನಡೆಸಿದ್ದು, ಸರ್ಕಾರಿ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವಿನ ಸಂಘರ್ಷದಲ್ಲಿ 16 ನಾಗರಿಕರು ಸತ್ತಿದ್ದಾರೆ.ಮಾನವ ಹಕ್ಕು ದಮನ (ಜಿನಿವಾ): ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯ ಸಭೆ ಸೋಮವಾರದಿಂದ ಇಲ್ಲಿ ಆರಂಭಗೊಳ್ಳಲಿದ್ದು, ಸಿರಿಯಾ ಸರ್ಕಾರದ ಮೇಲೆ ಒತ್ತಡ ಹೇರುವ ನಿರೀಕ್ಷೆಯಿದೆ. ಮಂಡಳಿ ಸಭೆಯಲ್ಲಿ ಮಾನವ ಹಕ್ಕುಗಳನ್ನು ದಮನ ಮಾಡಿರುವ ಸಿರಿಯಾ ಅಧಿಕಾರಿಗಳ ಪಟ್ಟಿ ಪ್ರಕಟಿಸುವ ಸಾಧ್ಯತೆಯಿದೆ.

 

ಪಾದರಕ್ಷೆಯ ರೂಪದಲ್ಲಿ ಎರಗಿದ ಸಾವು

 ಲಂಡನ್:  ಅಮೆರಿಕದ `ದಿ ಸಂಡೆ ಟೈಮ್ಸ~ ಪತ್ರಿಕೆಯ ಯುದ್ಧ ವರದಿಗಾರ್ತಿ ಮೇರಿ ಕೊಲ್ವಿನ್ ಸಿರಿಯಾದ ಹೋಮ್ಸ ನಗರದಲ್ಲಿ ಸೇನಾ ದಾಳಿಯಲ್ಲಿ ಮೃತಪಟ್ಟ ಘಟನೆಯ ವಿವರಗಳು ಇದೀಗ ಬಯಲುಗೊಂಡಿದೆ. ಬಾಂಬ್ ದಾಳಿಯಿಂದ ತಪ್ಪಿಸಿಕೊಳ್ಳಲು ಕಟ್ಟಡವೊಂದನ್ನು ಪ್ರವೇಶಿಸುವಾಗ ಕೊಲ್ವಿನ್ ಸ್ಥಳೀಯ ಸಂಪ್ರದಾಯದಂತೆ ಚಪ್ಪಲಿ ಹೊರಗೆ ಬಿಟ್ಟಿದ್ದರು.ನಂತರ ಚಪ್ಪಲಿ ಹಾಕಿಕೊಳ್ಳಲು ಕೊಲ್ವಿನ್ ಅತ್ತ ನಡೆದಾಗ ಕಟ್ಟಡದ ಮುಂಭಾಗದಲ್ಲಿ ರಾಕೆಟ್ ಬಿದ್ದು ಆಕೆ ಮತ್ತು ಜತೆಗಿದ್ದ ಫ್ರೆಂಚ್ ಛಾಯಾಗ್ರಾಹಕ ರೆಮಿ ಒಕ್ಲಿಕ್ ಅವಶೇಷಗಳ ಅಡಿ ಸಿಲುಕಿಕೊಂಡರು ಎನ್ನಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry