ಸಿರಿಯಾ: 200 ಮಂದಿ ಹತ್ಯೆ

7

ಸಿರಿಯಾ: 200 ಮಂದಿ ಹತ್ಯೆ

Published:
Updated:
ಸಿರಿಯಾ: 200 ಮಂದಿ ಹತ್ಯೆ

ಬೈರೂತ್ (ಎಪಿ):  ಸಿರಿಯಾದಲ್ಲಿನ ಹಿಂಸಾಚಾರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಭದ್ರತಾ ಪಡೆಗಳು ನಡೆಸುತ್ತಿರುವ ದಾಳಿಗೆ ಸಿಲುಕಿ ಹೋಮ್ಸ ನಗರದಲ್ಲಿ ಶನಿವಾರ 200 ಮಂದಿ ಸಾವನ್ನಪ್ಪಿದ್ದಾರೆ.ಕಳೆದ ಹನ್ನೊಂದು ತಿಂಗಳಿನಲ್ಲಿ ಭದ್ರತಾ ಪಡೆಗಳು ನಡೆಸಿದ ಅತ್ಯಂತ ರಕ್ತಸಿಕ್ತ ದಾಳಿ ಇದಾಗಿದೆ.  ಹೋಮ್ಸನಲ್ಲಿ ಶನಿವಾರ ರಾತ್ರಿಯಿಡಿ ಗುಂಡಿನ ದಾಳಿ ನಡೆದಿದ್ದು, ದೂರವಾಣಿ ಸಂಪರ್ಕ ಸಂಪೂರ್ಣ ಅಸ್ತವ್ಯಸ್ತವಾಗಿರುವುದರಿಂದ ವಿಪರೀತ ವದಂತಿಗಳು ಹಬ್ಬುತ್ತಿದೆ ಮತ್ತು ಜನ ಆತಂಕಕ್ಕೀಡಾಗಿದ್ದಾರೆ  ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಆದರೆ ನಾಗರಿಕರು ಹಾಗೂ ಪ್ರತಿಭಟನಾಕಾರರ ಮೇಲೆ ಭದ್ರತಾ ಪಡೆಗಳು ದಾಳಿ ನಡೆಸಿಲ್ಲ. ಸರ್ಕಾರದ ವಿರುದ್ಧ ಇರುವ ಗುಂಪುಗಳು ಭದ್ರತಾ ಪಡೆಗಳ ವಿರುದ್ಧ ನಡೆಸುತ್ತಿರುವ ಚಿತಾವಣೆ ಇದಾಗಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.ಅಧ್ಯಕ್ಷ ಬಶಾರ್ ಅಸ್ಸಾದ್ ಅವರು ಅಧಿಕಾರ ತ್ಯಜಿಸಲಿ ಎಂದು ಕರೆ ನೀಡಿರುವ ಅರಬ್ ಲೀಗ್‌ನ ಕ್ರಮಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಗೊತ್ತುವಳಿ ಅಂಗೀಕರಿಸಲಿ ಎನ್ನುವ ಉದ್ದೇಶದಿಂದ ಇಂತಹ ಊಹಾಪೋಹಗಳನ್ನು ಹಬ್ಬಿಸಲಾಗುತ್ತಿದೆ ಎಂದು ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.ಕುವೈತ್ ಮತ್ತು ಲಂಡನ್‌ಗಳಲ್ಲಿರುವ ಸಿರಿಯಾ ರಾಜತಾಂತ್ರಿಕ ಕಚೇರಿಗಳ ಎದುರು ಸಾವಿರಾರು ಮಂದಿ ಸೇರಿ ಸಿರಿಯಾದಲ್ಲಿ ನಡೆದಿರುವ ಹಿಂಸಾಚಾರದ ವಿರುದ್ಧ ಪ್ರತಿಭಟಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry