ಸಿರಿವಂತರ ಪರ ನಿಂತ ಬಡ ರಾಷ್ಟ್ರಗಳು

7
ಜಾಗತಿಕ ತಾಪಮಾನ ಬದಲಾವಣೆ

ಸಿರಿವಂತರ ಪರ ನಿಂತ ಬಡ ರಾಷ್ಟ್ರಗಳು

Published:
Updated:

ದೋಹಾ (ಪಿಟಿಐ): ಜಾಗತಿಕ ತಾಪಮಾನದಲ್ಲಿ ಆಗುತ್ತಿರುವ ಬದಲಾವಣೆ ಕುರಿತಂತೆ ನಡೆಯುತ್ತಿರುವ ಮಾತುಕತೆಯಲ್ಲಿ ಹಣ ಹೂಡಿಕೆಯ ಪಾಲುದಾರಿಕೆ ವಿಚಾರದಲ್ಲಿ ಬಡ ರಾಷ್ಟ್ರಗಳು ಸಿರಿವಂತ ದೇಶಗಳ ಪರವಾಗಿ ನಿಂತಿವೆ. ಆದರೆ, ಈ ವಿಚಾರವೇ ಮಾತುಕತೆಗೆ ತೊಡಕಾಗಬಾರದು. ಒಮ್ಮತದ ಅಭಿಪ್ರಾಯ ಮೂಡಬೇಕು ಎಂದೂ ಹೇಳಿವೆ.ಅಭಿವೃದ್ಧಿ ಹೊಂದಲು ಹೆಣಗಾಡುತ್ತಿರುವ ಭಾರತ, ಚೀನಾ ಸೇರಿದಂತೆ ಇನ್ನಿತರ ರಾಷ್ಟ್ರಗಳು ಈ ಧೋರಣೆಗೆ ಸಹಮತ ವ್ಯಕ್ತಪಡಿಸುವ ಇಂಗಿತ ಹೊಂದಿಲ್ಲ. ತಾಪಮಾನ ವೈಪರೀತ್ಯ ಜಾಗತಿಕ ಸಮಸ್ಯೆ. ಇದರ ನಿವಾರಣೋಪಾಯಕ್ಕೆ ಮಾಡುವ ಹೂಡಿಕೆ ಇಲ್ಲವೇ ಇನ್ನಿತರ ಉಪಕ್ರಮಗಳಲ್ಲಿ ಎಲ್ಲಾ ರಾಷ್ಟ್ರಗಳು ಸಮಾನ ಹೊಣೆಹೊರಬೇಕು ಎಂಬ ಅಭಿಪ್ರಾಯ ಹೊಂದಿವೆ.ಆದರೆ ಈ ವಿಚಾರದಲ್ಲಿ ಹಿಡಿತ ಸಾಧಿಸಬೇಕು ಎಂದು ಹವಣಿಸುತ್ತಿರುವ ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳು, ಅತಿ ಹೆಚ್ಚು ಪರಿಸರ ಮಾಲಿನ್ಯ ಮಾಡುತ್ತಿರುವ ಮುಂದುವರಿದ ರಾಷ್ಟ್ರಗಳು ಸೇರಿದಂತೆ ಇನ್ನಿತರ ರಾಷ್ಟ್ರಗಳು `ಹಸಿರು ಮನೆ ಅನಿಲ'ಗಳ ಹೊರಸೂಸುವಿಕೆಯನ್ನು ತಗ್ಗಿಸುವ ಹೊಣೆಗಾರಿಕೆ ಹೊರಬೇಕು ಎಂಬ ಪ್ರಸ್ತಾವವನ್ನು ಮುಂದಿಟ್ಟಿವೆ.ಅತಿ ಕಡಿಮೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು (ಎಲ್‌ಡಿಸಿ), ಈ ಪ್ರಸ್ತಾವದ ಪರವಾಗಿ ಇವೆಯಾದರೂ, ಜಾಗತಿಕ ತಾಪಮಾನ ಬದಲಾವಣೆಯಿಂದಾಗುವ ಸಮಸ್ಯೆ ನಿವಾರಿಸಲು ಹಣ ಹೂಡಿಕೆ ಮುಖ್ಯ. ಆದರೆ, ಈ ಅಂಶವು ಮಾತುಕತೆಗೆ ತೊಡಕಾಗಬಾರದು. ಭವಿಷ್ಯದ ಬಗ್ಗೆಯೂ ಚಿಂತನೆಗಳು ಆಗಬೇಕು ಎಂದಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry