ಮಂಗಳವಾರ, ಏಪ್ರಿಲ್ 13, 2021
25 °C

ಸಿರುಗುಪ್ಪ: ಕಡಲೆ ಬೆಳೆ ಕ್ಷೇತ್ರಕ್ಕೆ ಕೃಷಿ ವಿಜ್ಞಾನಿಗಳ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿರುಗುಪ್ಪ: ಹವಾಮಾನ ವೈಪರೀತ್ಯದಿಂದ ಕಡಲೆ ಬೆಳೆಗೆ ಹಲವು ರೋಗಭಾಧೆಗಳು ಕಾಣಿಸಿಕೊಂಡಿದ್ದು ರೈತರು ತಜ್ಞರನ್ನು ಸಂಪರ್ಕಿಸಿ ರೋಗ ಹತೋಟಿಗೆ ಮಾಹಿತಿ ಪಡೆಯುವಂತೆ ಇಲ್ಲಿಯ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಬಸವಣ್ಣೆಪ್ಪ ಕೋರಿದ್ದಾರೆ.ಇಲ್ಲಿಯ ಕಡಲೆ ಬೆಳೆಯ ರೈತರ ಜಮೀನುಗಳಿಗೆ ಬುಧವಾರ ಭೇಟಿ ನೀಡಿ ಬೆಳಗಳನ್ನು ವೀಕ್ಷಿಸಿ ರೈತರಿಗೆ ಮಾಹಿತಿ ನೀಡಿದರು. ಈ ಬಾರಿ ತಾಲ್ಲೂಕಿನಲ್ಲಿ ಹೆಚ್ಚಿನ ಕ್ಷೇತ್ರದಲ್ಲಿ ಕಡಲೆ ಬೆಳೆಯನ್ನು ರೈತರು ಬೆಳೆದಿದ್ದು, ಈ ಬೆಳೆಯು ಸುಮಾರು 20-25 ದಿವಸಗಳ ಹಂತದಲ್ಲಿದೆ. ಇತ್ತೀಚಿಗೆ ಸುರಿದ ನೀಲಂ ಚಂಡಮಾರುತದ ಮಳೆಯಿಂದ ಈ ಬೆಳೆಯ ಬೆಳವಣಿಗೆಗೆ ಅನುಕೂಲ ಕರವಾಗಿದೆ ಎಂದು ಡಾ. ಬಸವಣ್ಣಪ್ಪ ಅವರು ತಿಳಿಸಿದರು.ಆದರೆ ಕೆಲವೊಂದು ರೈತರು ನೀರು ಹಾಯಿಸಿ ಬಿತ್ತಿದ ಕಡಲೆ ಬೆಳೆಯು ಈ ಮಳೆಯಿಂದ ಕೆಲವೊಂದು ಭಾಗಗಳಲ್ಲಿ ಹಳದಿ ಬಣ್ಣಕ್ಕೆ ತಿರುಗುತ್ತಿದೆ, ಇದನ್ನು ಹೋಗಲಾಡಿಸಲು 20 ಅಡಿ ಅಂತರದಲ್ಲಿ ಬಸಿಗಾಲುವೆ ಯನ್ನು ತೆಗೆಯುವುದರಿಂದ ಭೂಮಿಯಲ್ಲಿನ ತೇವಾಂಶ ಕಡಿಮೆ ಮಾಡಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.