ಮಂಗಳವಾರ, ಜನವರಿ 28, 2020
19 °C

ಸಿಲಿಂಡರ್ ಸ್ಫೋಟ: ಇಬ್ಬರ ಸ್ಥಿತಿ ಗಂಭೀರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಲಿಂಡರ್ ಸ್ಫೋಟ: ಇಬ್ಬರ ಸ್ಥಿತಿ ಗಂಭೀರ

ರಾಜರಾಜೇಶ್ವರಿನಗರ: ಸಿಲಿಂಡರ್ ಸ್ಫೋಟಗೊಂಡು ಮನೆಯೊಂದು ಸಂಪೂರ್ಣ ನೆಲಸಮವಾಗಿ ಐವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ಬೆಳಗಿನಜಾವ ಕೆಂಚೇನಹಳ್ಳಿಯಲ್ಲಿ ನಡೆದಿದೆ.ಮಹಾಂತೇಶ (33) ಅವರ ಪತ್ನಿ ಸುಮಾಬಾಯಿ(28) ಆಕೆಯ ಅಣ್ಣ ಗಜೇಂದ್ರ ನಾಯಕ್‌(30) ಮಕ್ಕಳಾದ ಮೋನಿಕಾ(4), ಹರ್ಷಿತಾ(2) ಗಾಯ ಗೊಂಡಿದ್ದಾರೆ. ಇವರ ಪೈಕಿ ಗಜೇಂದ್ರ ನಾಯಕ್‌ ಹಾಗೂ ಮೋನಿಕಾಳ ಸ್ಥಿತಿ ಗಂಭಿೀರವಾಗಿದೆ. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿ ಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.ನರ್ಸರಿ ನಿರ್ವಹಣೆ ಮಾಡುವ ಮಹಾಂತೇಶ್ ಮೂಲತಃ ಚಿತ್ರದುರ್ಗ ದವರಾಗಿದ್ದು ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಕೆಂಚೇನಹಳ್ಳಿಯಲ್ಲಿ ವಾಸವಾಗಿದ್ದಾರೆ.ಸುಮಾಬಾಯಿ ಅವರ ಅಣ್ಣ ಗಜೇಂದ್ರನಾಯಕ್‌ ಕೊಪ್ಪಳ ತಾಲ್ಲೂ ಕಿನ ಇರಕಲ್‌ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿದ್ದು ತಂಗಿಯ ಮನೆಗೆ ಬಂದು ತಂಗಿದ್ದರು.ರಾತ್ರಿ ಅನಿಲ ಸೋರಿಕೆಯಾಗಿ ಮನೆಯನ್ನು ತುಂಬಿಕೊಂಡಿದೆ. ಬೆಳಗಿನ ಜಾವ 4.30ಸುಮಾರಿಗೆ ಸುಮಾ ಬಾಯಿ ವಿದ್ಯುತ್ ದೀಪ ಬೆಳಗಿಸಿದ್ದು, ಸಿಲಿಂಡರ್‌ ಸ್ಫೋಟಗೊಂಡು ಇಡೀ ಮನೆ ಕುಸಿದಿದೆ. ಘಟನೆಯಿಂದಾಗಿ ಮಲಗಿದ್ದವರೆಲ್ಲ ಗಾಯಗೊಂಡಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂ ಗಾರೆಡ್ಡಿ, ಶಾಸಕ ಎಸ್‌.ಟಿ. ಸೋಮ ಶೇಖರ್, ಕ್ಷೇತ್ರದ ಕಾಂಗ್ರೆಸ್ ಅಧ್ಯಕ್ಷ ಎಂ.ರಾಜಕುಮಾರ್‌, ಡಿಸಿಪಿ ಡಾ.ರಾಜಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರತಿಕ್ರಿಯಿಸಿ (+)