ಬುಧವಾರ, ನವೆಂಬರ್ 20, 2019
25 °C

ಸಿಲಿಕಾನ್ ಸಿಟಿಯಲ್ಲಿ ಗೋವಾ ಕಾಣಿರಿ!

Published:
Updated:

ಗೋವಾ ಎಂದರೆ ಮೊದಲು ನೆನಪಾಗುವುದು ಸುಂದರವಾದ ಸಮುದ್ರತಟ ಮತ್ತು ವೈನ್. ತಾಜಾ ಮೀನಿನ ವೈವಿಧ್ಯಮಯ ಖಾದ್ಯಗಳನ್ನು ಮರೆಯುವಂತೆಯೇ ಇಲ್ಲ ಬಿಡಿ. ಒಂದಷ್ಟು ಖರೀದಿ ಮಾಡದಿದ್ದರೆ ಹೇಗೆ?ಹೀಗೆ ಗೋವಾ ಪ್ರವಾಸಕ್ಕೂ ಮುನ್ನ ಒಂದು ಪಟ್ಟಿ ಸಿದ್ಧವಾಗುವುದು ಸಹಜ. ಆದರೆ  ಗೋವಾದ ಅಪ್ಪಟ ಚಿತ್ರಣ ನಗರದಲ್ಲೇ ಸಿಗುವಂತಾದರೆ? ಅಷ್ಟು ದೂರದ ಪ್ರಯಾಣದ ಪ್ರಯಾಸವಿಲ್ಲದೆ ಗೋವಾದ ಅನುಭವವನ್ನು ಪಡೆದುಕೊಳ್ಳಬಹುದು ಎಂದು ಯೋಚಿಸುತ್ತಿದ್ದೀರಾ?ಹೌದು, ಸಿಲಿಕಾನ್ ಸಿಟಿಯಲ್ಲೇ ಗೋವಾವನ್ನು ಕಾಣುವ ಅವಕಾಶವನ್ನು ಮಹಾದೇವಪುರದ ಫೀನಿಕ್ಸ್ ಮಾರ್ಕೆಟ್‌ಸಿಟಿ ಮಾಲ್ (ವೈಟ್‌ಫೀಲ್ಟ್ ರಸ್ತೆ) ಒದಗಿಸಿಕೊಟ್ಟಿದೆ.ಏಪ್ರಿಲ್ 6 ಮತ್ತು 7ರಂದು ಈ ಮಾಲ್‌ನ ಮುಂಭಾಗದಲ್ಲಿ ನಡೆಯುವ `ಗ್ರೇಟ್ ಗೋವನ್ ಫ್ಲಿಯಾ'ದಲ್ಲಿ ಶಾಪಿಂಗ್ ಮಾಡಬಹುದು, ಗೋವಾ ಶೈಲಿಯ ಆಹಾರಗಳನ್ನು ಸವಿಯಬಹುದು, ಕಲಾಪ್ರದರ್ಶನವನ್ನು ವೀಕ್ಷಿಸಿ ಇನ್ನಿತರ ಮನರಂಜನೆಯನ್ನೂ ಕಾಣಬಹುದು.ಸಮಯ: ಎರಡೂ ದಿನ ಬೆಳಿಗ್ಗೆ 11ರಿಂದ ರಾತ್ರಿ 9ರವರೆಗೆ.

ಪ್ರತಿಕ್ರಿಯಿಸಿ (+)