ಶನಿವಾರ, ಡಿಸೆಂಬರ್ 7, 2019
24 °C

ಸಿಸಿಎಲ್: ತೆಲುಗು ವಾರಿಯರ್ಸ್‌ಗೆ ಗೆಲುವು

Published:
Updated:
ಸಿಸಿಎಲ್: ತೆಲುಗು ವಾರಿಯರ್ಸ್‌ಗೆ ಗೆಲುವು

ಬೆಂಗಳೂರು: ಆದರ್ಶ (ಔಟಾಗದೇ 52) ಹಾಗೂ ತರುಣ್ (ಔಟಾಗದೇ 27) ಅವರ ಉತ್ತಮ ಆಟದ ನೆರವಿನಿಂದ ತೆಲುಗು ವಾರಿಯರ್ಸ್ ಕೇರಳ ಸ್ಟ್ರೈಕರ್ಸ್ ಎದುರು ಒಂಬತ್ತು ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು.ಮೊದಲು ಬ್ಯಾಟಿಂಗ್ ಮಾಡಿದ ಕೇರಳ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 94 ರನ್ ಗಳಿಸಿತ್ತು. ಈ ಮೊತ್ತ ತೆಲುಗು ತಂಡಕ್ಕೆ ಕಷ್ಟವೆನಿಸಲಿಲ್ಲ. ಅಭಿಮಾನಿಗಳನ್ನು ರನ್ ಹೊಳೆಯಲ್ಲಿ ಸಂಭ್ರಮಿಸುವಂತೆ ಮಾಡಿದ ಆದರ್ಶ ಇನ್ನೂ 29 ಎಸೆತಗಳು ಬಾಕಿ ಇರುವಾಗ ಗೆಲುವನ್ನು ತಂದುಕೊಟ್ಟರು.16ನೇ ಓವರ್‌ನ ಮೊದಲ ಎಸೆತವನ್ನು ಸ್ಟ್ರೈಟ್‌ಡ್ರೈವ್ ಮೂಲಕ ಬಲಗೈ ಬ್ಯಾಟ್ಸ್‌ಮನ್ ಅದರ್ಶ ಬೌಂಡರಿಗೆ ಅಟ್ಟಿದರು. ಈ ಮೂಲಕ ತೆಲುಗು ಈ ಟೂರ್ನಿಯಲ್ಲಿ ಎರಡನೇ ಗೆಲುವು ತನ್ನದಾಗಿಸಿಕೊಂಡಿತು.

ಪ್ರತಿಕ್ರಿಯಿಸಿ (+)